ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

96 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾದ 5 ಐಟಿ ಸಂಸ್ಥೆಗಳು

|
Google Oneindia Kannada News

ನವದೆಹಲಿ, ಜೂನ್ 18: ಕೊರೊನಾ ಸೋಂಕಿನಿಂದಾಗಿ ಎಲ್ಲಾ ಉದ್ಯಮವು ತಲೆಕೆಳಗಾಗಿದೆ. ವರ್ಷಗಳಿಂದ ಯಾವುದೇ ಲಾಭ ಗಳಿಸದೆ ಹಲವು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿರುವ ಎಷ್ಟೋ ಘಟನೆಗಳು ಕಣ್ಮುಂದಿದೆ.

ಆದರೆ ಇದೆಲ್ಲಾ ನೋವುಗಳ ನಡುವೆಯೂ ಖುಷಿ ಸುದ್ದಿಯೊಂದಿದೆ. ಹೌದು, ಭಾರತದ 5 ಐಟಿ ಸಂಸ್ಥೆಗಳು 2021-22ನೇ ಸಾಲಿನಲ್ಲಿ 96 ಸಾವಿರ ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಉದ್ಯಮ ಸಂಸ್ಥೆ ನಾಸ್ಕಾಂ ಹೇಳಿದೆ.

ಕರ್ನಾಟಕ; ಪಶು ವೈದ್ಯಕೀಯ ಇಲಾಖೆ ನೇಮಕಾತಿ ವಿವರಗಳುಕರ್ನಾಟಕ; ಪಶು ವೈದ್ಯಕೀಯ ಇಲಾಖೆ ನೇಮಕಾತಿ ವಿವರಗಳು

ಉದ್ಯಮ ಯಾಂತ್ರೀಕೃತಗೊಂಡಿರುವ ಕಾರಣ 2022ರ ಅಷ್ಟೊತ್ತಿಗೆ 3 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಕುರಿತು ಈ ಹಿಂದೆ ವರದಿಯಾಗಿತ್ತು.

Nasscom Says Top 5 Indian IT Firms To Add Over 96,000 Jobs

ತಂತ್ರಜ್ಞಾನ ವಿಕಸನ, ಹೆಚ್ಚು ಯಾಂತ್ರೀಕೃತಗೊಂಡಾಗ ಸಾಂಪ್ರದಾಯಿಕ ಐಟಿ ಉದ್ಯೋಗಗಳು ಮತ್ತು ಪಾತ್ರಗಳ ಸ್ವರೂಪಗಳು ಕೂಡ ವಿಕಸನಗೊಳ್ಳುತ್ತವೆ ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಐಟಿ ಉದ್ಯಮ ಸಂಸ್ಥೆ ಹೇಳಿದೆ.

ಐಟಿ ಉದ್ಯಮವು 2021ರಲ್ಲಿ 138,000 ಮಂದಿಗೆ ಉದ್ಯೋಗ ನೀಡಿದೆ. ಹಾಗೆಯೇ 2022ರಲ್ಲೂ 96 ಸಾವಿರ ಉದ್ಯೋಗಿಗಳ ನೇಮಕ ಮಾಡುವ ಸಾಧ್ಯತೆ ಇದೆ.

ಉದ್ಯಮವು ಡಿಜಿಟಲ್ ಕೌಶಲ್ಯಗಳಲ್ಲಿ 250,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೆಚ್ಚಿಸುತ್ತಿದೆ. 40,000ಕ್ಕೂ ಹೆಚ್ಚು ಡಿಜಿಟಲ್ ತರಬೇತಿ ಪಡೆದ ಪ್ರತಿಭೆಗಳನ್ನು ನೇಮಿಸಿಕೊಂಡಿದೆ. ಇದು ಉದ್ಯೋಗಿಗಳ ಸಾಮರ್ಥ್ಯದ ತ್ವರಿತ ವರ್ಧನೆಗೆ ಅದರ ಬದ್ಧತೆ ಮತ್ತು ಹೂಡಿಕೆಯನ್ನು ಸೂಚಿಸುತ್ತದೆ.

ನಾಸ್ಕಾಂ ಪ್ರಕಾರ ಭಾರತದಲ್ಲಿ ವ್ಯವಹಾರ ಪ್ರಕ್ರಿಯೆ ನಿರ್ವಹಣೆ(ಬಿಪಿಎಂ) ಉದ್ಯಮವು 1.4 ದಶಲಕ್ಷಕ್ಕೂ ಹೆಚ್ಚು ಜನರನ್ನು ಉದ್ಯೋದಲ್ಲಿರಿಸಿಕೊಂಡಿದೆ. ಭಾರತದ ಐಟಿ ವಲಯವು ಗ್ರಾಹಕರಿಗೆ ಹೊಸ ಅನುಭವ ನೀಡುವ ಗುರಿ ಹೊಂದಿದೆ ಎಂದು ನಾಸ್ಕಾಂ ಹೇಳಿದೆ.

English summary
India’s Top 5 IT companies are planning to add more than 96,000 employees, Nasscom said in a statement, reacting to reports that said 3 million IT jobs would be lost by 2022 due to automation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X