ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ: ನೇರ ಸಂದರ್ಶನ

|
Google Oneindia Kannada News

ಮೈಸೂರು, ಅಕ್ಟೋಬರ್ 18: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಬಿ.ಎಸ್ಸಿ, ಬಿಸಿಎ, ಎಂ.ಎಸ್ಸಿ, ಮಾಸ್ಟರ್ ಡಿಗ್ರಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್​ ಫೆಲೋ, ಸೆಮಿ- ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ. ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್ 21ರಿಂದ 23ರವರೆಗೆ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಡೆಸುವ ಸಂದರ್ಶನದಲ್ಲಿ ಭಾಗಿಯಾಗಬಹುದು.

ಮೈಸೂರಿನ ಆರ್​​ಐಇನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹೋಗುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಸಂದರ್ಶನ, ಸಂದರ್ಶನದ ಸ್ಥಳ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯವಾಗಿದ್ದು, ಈ ಎಲ್ಲದರ ಕುರಿತಾಗಿ ಮಾಹಿತಿ ಕೆಳಕಂಡಂತಿದೆ.

Mysuru Regional Education Institute Recruitment 2021: Application Invited for Assistant Professor Posts

ಸಂಸ್ಥೆ- ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು
ಹುದ್ದೆಯ ಹೆಸರು- ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಅಸಿಸ್ಟೆಂಟ್, ಜೂನಿಯರ್ ಪ್ರಾಜೆಕ್ಟ್​ ಫೆಲೋ, ಸೆಮಿ ಪ್ರೊಫೆಶನಲ್ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್

ಒಟ್ಟು ಹುದ್ದೆಗಳು- 11
ವಿದ್ಯಾರ್ಹತೆ- ಬಿ.ಎಸ್ಸಿ, ಬಿಸಿಎ, ಎಂ.ಎಡ್, ಎಂ.ಎಸ್ಸಿ, ಮಾಸ್ಟರ್ ಡಿಗ್ರಿ, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್​
ಕೆಲಸದ ಸ್ಥಳ- ಮೈಸೂರು
ಸಂಬಳ- ಮಾಸಿಕ ವೇತನ 17,000- 45,000 ರೂ.
ಆಯ್ಕೆ ಪ್ರಕ್ರಿಯೆ- ಸಂದರ್ಶನ
ಸಂದರ್ಶನದ ದಿನಾಂಕ- ಅಕ್ಟೋಬರ್ 21-ಅಕ್ಟೋಬರ್ 23, 2021
ನೋಟಿಫಿಕೇಶನ್ ದಿನಾಂಕ: 08/10/2021

ವಿದ್ಯಾರ್ಹತೆ:
ಅಸಿಸ್ಟೆಂಟ್ ಪ್ರೊಫೆಸರ್: ಸ್ನಾತಕೋತ್ತರ ಪದವಿ
ಪ್ರೊಫೆಸನಲ್ ಅಸಿಸ್ಟೆಂಟ್: ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್, ಎಂಎಡ್, ಎಂ.ಪಿಎಡ್- ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್: ಕಲಾ/ ವಿಜ್ಞಾನ/ ವಾಣಿಜ್ಯ/ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿರಬೇಕು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಕಂಪ್ಯೂಟರ್​ ಅಸಿಸ್ಟೆಂಟ್: ಬಿ.ಎಸ್ಸಿ/ ಎಂ.ಎಸ್ಸಿ, ಬಿಸಿಎ (ಕಂಪ್ಯೂಟರ್ ಸೈನ್ಸ್​)

ಜೂನಿಯರ್ ಪ್ರಾಜೆಕ್ಟ್ ಫೆಲೋ: ಎಜುಕೇಶನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು, ಎಂ.ಎಡ್, ಬಿ.ಎಸ್ಸಿ ಮಾಡಿರಬೇಕು.

ವಯೋಮಿತಿ:
ಅಸಿಸ್ಟೆಂಟ್ ಪ್ರೊಫೆಸರ್- ಯುಜಿಸಿ/ ಎನ್​​ಸಿಇಆರ್​​ಟಿ/ ಜಿಒಐ ನಿಯಮಗಳನುಸಾರ

ಪ್ರೊಫೆಸನಲ್ ಅಸಿಸ್ಟೆಂಟ್: 30 ವರ್ಷ ಮೀರಿರಬಾರದು

ಸೆಮಿ ಪ್ರೊಫೆಸನಲ್ ಅಸಿಸ್ಟೆಂಟ್: 27 ವರ್ಷ ಮೀರಿರಬಾರದು

ಕಂಪ್ಯೂಟರ್ ಅಸಿಸ್ಟೆಂಟ್: 35 ವರ್ಷ ಮೀರಿರಬಾರದು

ಜೂನಿಯರ್ ಪ್ರಾಜೆಕ್ಟ್​ ಫೆಲೋ: 30 ವರ್ಷ ಮೀರಿರಬಾರದು

ಸಂಬಳ:
ಅಸಿಸ್ಟೆಂಟ್ ಪ್ರೊಫೆಸರ್: 45,000 ರೂ.

ಪ್ರೊಫೆಸನಲ್ ಅಸಿಸ್ಟೆಂಟ್: 23,000 ರೂ.

ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್: 19,000 ರೂ.

ಕಂಪ್ಯೂಟರ್ ಅಸಿಸ್ಟೆಂಟ್: 17,000 ರೂ.

ಜೂನಿಯರ್ ಪ್ರಾಜೆಕ್ಟ್​ ಫೆಲೋ: 23,000 ರೂ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್​ ಫೆಲೋ, ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಅಕ್ಟೋಬರ್ 21ರಿಂದ 23ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಈ ಕೆಳಕಂಡ ಹಂತಗಳನ್ನು ಅನುಸರಿಸಿ

ಮೊದಲಿಗೆ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಅಧಿಕೃತ ವೆಬ್​ಸೈಟ್ riemysore.ac.in.ಗೆ ಭೇಟಿ ನೀಡಬೇಕು. ಅಲ್ಲಿ ಕಾಣ ಸಿಗುವ "Recruitment/ Career/ Advertisement menu" ಲಿಂಕ್ ಮೇಲೆ ಕ್ಲಿಕ್ ಮಾಡಿ. ಸಹಾಯಕ ಪ್ರಾಧ್ಯಾಪಕ, ಕಂಪ್ಯೂಟರ್ ಸಹಾಯಕ, ಜೂನಿಯರ್ ಪ್ರಾಜೆಕ್ಟ್ ಫೆಲೋ, ಸೆಮಿ-ಪ್ರೊಫೆಸನಲ್ ಅಸಿಸ್ಟೆಂಟ್, ಪ್ರೊಫೆಸನಲ್ ಅಸಿಸ್ಟೆಂಟ್ ಹುದ್ದೆಗಳ ನೋಟಿಫಿಕೇಶನ್​ನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ.

ಅಧಿಕೃತ ನೋಟಿಫಿಕೇಶನ್​ನ ಲಿಂಕ್​ನ್ನು ಡೌನ್​ಲೋಡ್ ಮಾಡಿಕೊಳ್ಳಿ. ನೋಟಿಫಿಕೇಶನ್​ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ. ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ಹಾಗೂ ಸೈಜ್‌ನಲ್ಲಿ ಅಪ್​ಲೋಡ್ ಮಾಡಿ. ಕೊನೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಸಬ್​ಮಿಟ್ ಕೊಡಿ. ಬಳಿಕ ಮೈಸೂರು ಪ್ರಾದೇಶಕ ಶಿಕ್ಷಣ ಸಂಸ್ಥೆ ಅರ್ಜಿ ಶುಲ್ಕ ಕೇಳಿದ್ದರೆ, ಪಾವತಿಸಿ. ಕೊನೆಯಲ್ಲಿ ಅರ್ಜಿಯನ್ನು ಸಬ್​ಮಿಟ್ ಮಾಡಿ, ಒಂದು ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅಕ್ಟೋಬರ್ 21ರಿಂದ 23ರವರೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಿ.

English summary
Mysuru Regional Education Institute Recruitment 2021: Application Invited to fill vacant Assistant Professor and Computer Assistant posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X