ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 1,242 ಹುದ್ದೆಗೆ 30 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ!

|
Google Oneindia Kannada News

ಬೆಂಗಳೂರು, ಜನವರಿ 17; ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. 1,242 ಹುದ್ದೆಗಳಿಗೆ 30 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟಿಸಿತ್ತು. ನಿಗದಿಯಂತೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯಬೇಕಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ಮುಂದೂಡಿತ್ತು.

ಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ

ಒಟ್ಟು 26 ವಿಷಯಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿತ್ತು. ಕನ್ನಡ ಮತ್ತು ಇತಿಹಾಸ ವಿಷಯಕ್ಕೆ ಹೆಚ್ಚಿನ ಅರ್ಜಿಗಳು ಬಂದಿವೆ. ಆದರೆ ಅರ್ಜಿ ಶುಲ್ಕ ಕಟ್ಟದ ಕಾರಣ ಸಾವಿರಾರು ಅರ್ಜಿಗಳು ಸಹ ತಿರಸ್ಕಾರಗೊಂಡಿವೆ.

ಯಾವ ವಿಷಯಕ್ಕೆ ಹೆಚ್ಚು ಅರ್ಜಿ?; ಕನ್ನಡ 7,148, ಇಂಗ್ಲಿಶ್ 1,377, ಇತಿಹಾಸ 3,209, ಅರ್ಥಶಾಸ್ತ್ರ 3,223, ರಾಜ್ಯಶಾಸ್ತ್ರ 2,239, ಸಮಾಜ ಶಾಸ್ತ್ರ 1,173 ಅರ್ಜಿಗಳು ಸಲ್ಲಿಕೆಯಾಗಿವೆ.

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ 3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

More Than 30 Thousand Applications For 1,242 Post

ರಾಜ್ಯದಲ್ಲಿ ಒಟ್ಟು 3,900 ಸಹಾಯಕ ಪ್ರೊಫೆಸರ್ ಹುದ್ದೆಗಳು ಖಾಲಿ ಇದೆ. ಆದರೆ ಆರ್ಥಿಕ ಇಲಾಖೆ 1,242 ಹುದ್ದೆಗಳ ಭರ್ತಿಗೆ ಮಾತ್ರ ಅನುಮತಿ ನೀಡಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು.

2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ

1,242 ಹುದ್ದೆಗಳ ಪೈಕಿ 2015ರಿಂದ ಯಾವುದೇ ಅಭ್ಯರ್ಥಿಗಳು ಸಿಗದ ಕಾರಣ 145 ಹುದ್ದೆ ಖಾಲಿ ಉಳಿದಿತ್ತು. ಆರ್ಥಿಕ ಇಲಾಖೆ ಹೊಸದಾಗಿ 1097 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೊಟ್ಟಿತ್ತು.

ಯಾವ ವಿಷಯ, ಎಷ್ಟು?; ಒಟ್ಟು 25 ವಿಷಯಗಳಲ್ಲಿ ಅರ್ಥಶಾಸ್ತ್ರ 72, ಕನ್ನಡ 105, ಇತಿಹಾಸ 108, ಪೊಲಿಟಿಕಲ್ ಸೈನ್ಸ್ 96, ವಾಣಿಜ್ಯ 171, ಫಿಸಿಕ್ಸ್ 74, ಕೆಮಿಸ್ಟ್ರಿ 82 ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆಗಾಗಿ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಶ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಆದ್ದರಿಂದ ಈ ವಿಷಯಗಳ ಪರೀಕ್ಷೆಯಲ್ಲಿಯೇ ಹಲವಾರು ಅಭ್ಯರ್ಥಿಗಳು ಹೊರ ಹೋಗುತ್ತಾರೆ.

ಉಳಿದ ವಿಷಯಗಳಿಗೆ ನಡೆಯುವ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ. ಅಭ್ಯರ್ಥಿಗಳ ಒಂದು ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕಗಳು ಸೇರ್ಪಡೆಗೊಳ್ಳುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸುವ ನೋಡಲ್ ಏಜೆನ್ಸಿ ಆಗಿದೆ.

ಲಿಖಿತ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಯುಜಿಸಿ ನಿಗದಿ ಮಾಡಿದ ವೇತನದ ಅನ್ವಯ ಆಯ್ಕೆಯಾದ ಅಭ್ಯರ್ಥಿಗಳಿಗೆ 57,700 ರಿಂದ 1,82,400 ರೂ. ತನಕ ವೇತನ ಶ್ರೇಣಿ ಇದೆ.

ಶುಲ್ಕವೇ ಕಟ್ಟಿಲ್ಲ; 1,242 ಹುದ್ದೆಗಳಿಗೆ ಒಟ್ಟು ಸ್ವೀಕೃತವಾಗಿದ್ದ ಅರ್ಜಿಗಳು 47,103. ಆದರೆ ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡುವಾಗ ಅಭ್ಯರ್ಥಿಗಳು ಮಾಡಿದ ತಪ್ಪಿನಿಂದಾಗಿ ಅರ್ಜಿ ಶುಲ್ಕ ಸರಿಯಾಗಿ ಪಾವತಿಯಾಗಿಲ್ಲ. ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ನೇಮಕಾತಿ ಆದೇಶದಲ್ಲಿಯೇ ಸ್ಪಷ್ಟಪಡಿಸಲಾಗಿತ್ತು.

ಸಾಮಾನ್ಯ ಅರ್ಹತೆ, ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 2 ಸಾವಿರ ರೂ.ಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 1 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿತ್ತು.

ಜನವರಿ ಅಂತ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನ ಇರುವುದಿಲ್ಲ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೀಸಲಾತಿಗೆ ಅನುಗುಣವಾಗಿ ವರ್ಗವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ದಾಖಲೆಗಳ ಪರಿಶೀಲನೆ ಬಳಿಕ ಆಯ್ಕೆ ನಡೆಯಲಿದೆ.

Recommended Video

A Big Salute To Our Front Line Workers | Covid Warriors | Oneindia Kannada

English summary
The Department of college education invited applications for 1,242 assistant professor post. More than 30,000 eligible candidates have applied.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X