• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆಸ್ಕಾಂನಲ್ಲಿ 183 ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಮಂಗಳೂರು, ಮೇ 25: ಸರ್ಕಾರಿ ಸ್ವಾಮ್ಯದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ) 2022ನೇ ಸಾಲಿನ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಎಲ್ಲಾ ಅರ್ಜಿಗಳನ್ನು ಮೆಸ್ಕಾಂನ ಅಧಿಕೃತ ವೆಬ್ ತಾಣದ ಮೂಲಕ ಆನ್ ಲೈನ್ ಮೂಲಕವೇ ಸಲ್ಲಿಸಬೇಕಾಗಿ ಕೋರಲಾಗಿದೆ.

ಪದವಿ ಹಾಗೂ ಡಿಪ್ಲೋಮಾ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು ವಿವರಗಳು ಮುಂದಿವೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜೂನ್ 15, 2022.

ಮೈಸೂರಿನಲ್ಲಿ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಹಾಕಿಮೈಸೂರಿನಲ್ಲಿ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ:
ಸಂಸ್ಥೆ ಹೆಸರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ)
ಹುದ್ದೆ ಹೆಸರು: ಅಪ್ರೆಂಟಿಸ್
ಒಟ್ಟು ಖಾಲಿ ಇರುವ ಹುದ್ದೆಗಳು: 183
ತರಬೇತಿ ಅವಧಿ: ಒಂದು ವರ್ಷ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 15, 2022

ಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿ

ಪ್ರಮುಖ ದಿನಾಂಕ:

ಆನ್‌ಲೈನ್‌ನಲ್ಲಿ ಅರ್ಜಿ ಸಲಿಸಲು ಆರಂಭ ದಿನಾಂಕ: 25/05/2022.
ಆನ್‌ಲೈನ್‌ನಲ್ಲಿNATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10/062022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/06/2022
ಶಾರ್ಟ್ ಲಿಸ್ಟ್‌ ಆದವರ ಪಟ್ಟಿ: 27/06/2022 ಅಥವಾ ಜೂನ್ 28.

ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಹೆಚ್ಚಿನ ಮಾಹಿತಿಗಾಅಗಿ ಮುಂದೆ ಓದಿ..

ಹುದ್ದೆಗಳ ಹೆಸರು

ಹುದ್ದೆಗಳ ಹೆಸರು

ಪದವಿ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 112
-ಸ್ಟೈಪೆಂಡ್: 7,000 ರು

ಡಿಪ್ಲೋಮಾ ಅಪ್ರೆಂಟಿಸ್:
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 71
-ಸ್ಟೈಪೆಂಡ್: 5,000 ರು

ವಯೋಮಿತಿ, ವಿದ್ಯಾರ್ಹತೆ

ವಯೋಮಿತಿ, ವಿದ್ಯಾರ್ಹತೆ

ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ.
* ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅರ್ಭ್ಯರ್ಥಿಗಳಿಗೆ 18 ರಿಂದ 38 ವರ್ಷ ವಯೋಮಿತಿ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ.

ವಿದ್ಯಾರ್ಹತೆ: ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯಗಳಲ್ಲಿ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ/ಪದವಿ ಪಡೆದಿರಬೇಕು.

ಈಗಾಗಲೇ ಅಪ್ರೆಂಟಿಸ್ (ತಿದ್ದುಪಡಿ) ಕಾಯ್ದೆ 1973ರ ಅನ್ವಯ ಅಪ್ರೆಂಟಿಸ್ ಅವಧಿಯಲ್ಲಿರುವವರು ಹಾಗೂ ಒಂದು ಅಥವಾ ಅಧಿಕ ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಮೆಸ್ಕಾಂ ನೇಮಕಾತಿ 2022 ಅರ್ಜಿ ಸಲ್ಲಿಕೆ ವಿಧಾನ

ಮೆಸ್ಕಾಂ ನೇಮಕಾತಿ 2022 ಅರ್ಜಿ ಸಲ್ಲಿಕೆ ವಿಧಾನ

National Web Portalನಲ್ಲಿ ನೋಂದಣಿ ಮಾಡಿಕೊಂಡಿದ್ದರೆ ನೇರವಾಗಿ Mangalore Electricity Supply Company ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಮೇಲ್ ಹಾಗೂ ಮೊಬೈಲ್ ಫೋನ್ ಸಂಖ್ಯೆ ನೀಡಬೇಕು. ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಅಗತ್ಯಬಂದಾಗ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ತುಂಬಿ, ದಾಖಲೆಗಳನ್ನು ಸಲ್ಲಿಸಬೇಕು.

ನ್ಯಾಷನಲ್ ವೆಬ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ನೋಂದಣಿ ವಿಧಾನ ಹೀಗಿದೆ:
* ಮೊದಲಿಗೆ www.mhrdnats.gov.inಗೆ ಭೇಟಿ ನೀಡಿ
* Enroll ಕ್ಲಿಕ್ ಮಾಡಿ.
* ಅರ್ಜಿಯನ್ನು ಸಂಪೂರ್ಣವಾಗಿ ತುಂಬಿ.
* ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ವಿಶಿಷ್ಟ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ.
* ವಿಶಿಷ್ಟ ಸಂಖ್ಯೆ ಸಿಕ್ಕಬಳಿಕ ಮುಂದಿನ ಹಂತದ ನೋಂದಣಿ ಮುಂದುವರೆಸಬಹುದು.
-ಲಾಗಿನ್ ಆದ ಬಳಿಕ ಸರಿಯಾದ ವಿಭಾಗವನ್ನು ಗುರುತಿಸಿ ನಿಮ್ಮ ರೆಸ್ಯೂಮ್ ಅಪ್ಲೋಡ್ ಮಾಡಿ
-ಇಲ್ಲಿ Mangalore Electricity Supply Company ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ

ಕಚೇರಿ ವಿಳಾಸ

ಕಚೇರಿ ವಿಳಾಸ

ಕಚೇರಿ ವಿಳಾಸ:
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆ(ಮೆಸ್ಕಾಂ)
ಮಾನವ ಸಂಪನ್ಮೂಲ ಕೇಂದ್ರ
ಗೋಪಾಲಕೃಷ್ಣ ದೇಗುಲ ಸಮೀಪ, ಶಕ್ತಿನಗರ
ಮಂಗಳೂರು 575 016

ಕಚೇರಿ ಭೇಟಿ ಸಮಯ: ಅರ್ಜಿ ಸಲ್ಲಿಕೆ ನಿಗದಿತ ಅವಧಿಯಲ್ಲಿ ಅವಧಿ ಬೆಳಗ್ಗೆ 11 ರಿಂದ ಸಂಜೆ 4.

ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ವ್ಯವಸ್ಥೆಯನ್ನು ಒದಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೆಸ್ಕಾಂ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ

English summary
Mangalore Electricity Supply Company Limited (MESCOM) has Announced Notification for the recruitment of Graduate, Technician (Diploma) Apprentice Vacancy. Here are the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X