• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೆಲಿವಿಷನ್ ಜರ್ನಲಿಸಂ, ಕ್ಯಾಮರಾಮ್ಯಾನ್ ತರಬೇತಿಗೆ ಅರ್ಜಿ ಆಹ್ವಾನ

|

ಮಂಡ್ಯ, ಜನವರಿ 08: ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಟೆಲಿವಿಷನ್ ಜರ್ನಲಿಸಂ, ಕ್ಯಾಮರಾಮ್ಯಾನ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮವು ಪರಿಶಿಷ್ಟ ಜಾತಿ ಉಪಯೋಜನೆಯಡಿ ವಿಶೇಷ ಕೇಂದ್ರ ನೆರವಿನಡಿ ಈ ತರಬೇತಿಯನ್ನು ಹಮ್ಮಿಕೊಂಡಿದೆ.

ಮಂಡ್ಯದಲ್ಲಿರುವ ಅನನ್ಯ ಕ್ರಿಯೇಷನ್ಸ್ ನಲ್ಲಿ 3 ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಯು 18 ರಿಂದ 30ರ ವಯೋಮಿತಿಯಲ್ಲಿರಬೇಕು. ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು, ನಿರೂಪಣೆ, ವರದಿಗಾರಿಕೆ, ಕಾಪಿಎಡಿಟರ್, ಬುಲೆಟಿನ್ ತರಬೇತಿಗೆ ಕನಿಷ್ಠ ಪದವಿ ಹಾಗೂ ಕ್ಯಾಮರಾಮ್ಯಾನ್ ಮತ್ತು ಪೋಟೋಗ್ರಾಫಿ ತರಬೇತಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಜನವರಿ 30 ಕಡೆಯ ದಿನವಾಗಿದೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿ ಅಥವಾ ದೂ.ಸಂ 08226-224133 ಸಂಪರ್ಕಿಸುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Mandya: Application invited for three months TV Journalism, Cameraman Training from SC candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X