• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KPSC ಮೂಲಕ ಶೀಘ್ರವೇ ಕಾರ್ಮಿಕ ಇಲಾಖೆ ನೇಮಕಾತಿ

|
Google Oneindia Kannada News

ಬೆಂಗಳೂರು, ಮಾರ್ಚ್ 17; ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಉಳಿದಿರುವ ವಿವಿಧ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುತ್ತದೆ. ಕಾರ್ಮಿಕ ಸಚಿವರು ಈ ಕುರಿತು ಹೇಳಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹೆಚ್. ಎಸ್. ಗೋಪಿನಾಥ್ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡದಿರಲು ಕಾರಣವೇನು? ಎಂದು ಹೇಳಿದ್ದರು. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಇದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಅರ್ಜಿ ಹಾಕಿ; ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೇಮಕಾತಿ ಅರ್ಜಿ ಹಾಕಿ; ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೇಮಕಾತಿ

ಕಾರ್ಮಿಕ ಇಲಾಖೆಯಲ್ಲಿ ನೇರ ನೇಮಕಾತಿ ಕೋಟಾದಡಿ ಬಾಕಿ ಇರುವ ಗ್ರೂಪ್ 'ಎ', 'ಬಿ' ಮತ್ತು 'ಸಿ' ವೃಂದದ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಸಹಮಿತಿ ಪಡೆದ ನಂತರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗುತ್ತದೆ.

52 ಪಶು ವೈದ್ಯಾಧಿಕಾರಿಗಳ ನೇಮಕಾತಿ; ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ 52 ಪಶು ವೈದ್ಯಾಧಿಕಾರಿಗಳ ನೇಮಕಾತಿ; ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ

ಆಯುಕ್ತಾಲಯದಿಂದ ನೇರ ನೇಮಕಾತಿ ಕೋಟಾದಡಿ ಖಾಲಿ ಇದ್ದ ಗ್ರೂಪ್ 'ಎ' ವೃಂದದ ಸಹಾಯಕ ಕಾರ್ಮಿಕ ಆಯುಕ್ತರ 2, ಗ್ರೂಪ್ 'ಬಿ' ವೃಂದದ ಕಾರ್ಮಿಕ ಅಧಿಕಾರಿಗಳ 4 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯಂತೆ ಆಯೋಗವು ಸದರಿ ಹುದ್ದೆಗಳ ಭರ್ತಿಗಾಗಿ 2021ರ ಫೆಬ್ರವರಿ ತಿಂಗಳಿನಲ್ಲಿ ಸ್ಮರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನಿರೀಕ್ಷಿಸಲಾಗುತ್ತಿದೆ.

ಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿ

ಅದೇ ರೀತಿ ಆಯುಕ್ತಾಲಯದಿಂದ ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ 26 ಕಾರ್ಮಿಕರ ನಿರೀಕ್ಷಕರ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‌ಸಿಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಯಂತೆ ಆಯೋಗವು ಸದರಿ ಹುದ್ದೆಗಳ ಭರ್ತಿಗಾಗಿ 2021ರ ಡಿಸೆಂಬರ್‌ ಮಾಹೆಯಲ್ಲಿ ಸ್ಮರ್ಧಾತ್ಮಕ ಪರೀಕ್ಷೆಯನ್ನು ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಉಳಿಕೆ ಮೂಲ ವೃಂದದ ಗ್ರೂಪ್ 'ಸಿ' ವೃಂದದಲ್ಲಿ ಖಾಲಿ ಇದ್ದ ನೇರ ನೇಮಕಾತಿ ಹುದ್ದೆಗಳ ಭರ್ತಿಗೆ ಸಹಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾದ ಹುದ್ದೆಗಳು ಮತ್ತು ಆರ್ಥಿಕ ಇಲಾಖೆಯು ಭರ್ತಿಗಾಗಿ ಸಹಮಿತಿ ನೀಡಿದ ಹುದ್ದೆಗಳ ವಿವರಗಳನ್ನು ನೀಡಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ; ಕಾರ್ಮಿಕ ನಿರೀಕ್ಷಕರ 20. ಪ್ರಥಮ ದರ್ಜೆ ಸಹಾಯಕರು 11, ದ್ವಿತೀಯ ದರ್ಜೆ ಸಹಾಯಕರು 17, ಶೀಘ್ರಲಿಪಿಗಾರರು 12, ಬೆರಳಚ್ಚುಗಾರರು 3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಉಳಿಕೆ ಮೂಲವೃಂದದಲ್ಲಿ ಖಾಲಿ ಇದ್ದ ಗ್ರೂಪ್ 'ಸಿ' ವೃಂದದ 178 ಹುದ್ದೆಗಳ ಪೈಕಿ 63 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಇವುಗಳ ಪೈಕಿ 48 ಹುದ್ದೆಗಳನ್ನು ನೇರ ನೇಮಕಾತಿ, 15 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

ಕಾರ್ಖಾನೆಗಳ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು, ಬಾಯ್ಲರ್ ಒಟ್ಟು ಹುದ್ದೆಗಳೆಷ್ಟು ಹಾಗೂ ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಪ್ರಶ್ನಿಸಲಾಗಿದೆ.

ಕಾರ್ಮಿಕ ಇಲಾಖೆ ಈ ಕುರಿತು ಉತ್ತರ ನೀಡಿದ್ದು ಕಾರ್ಖಾನೆಗಳ ಸಹಾಯಕ ನಿರ್ದೇಶಕ 20 ಹುದ್ದೆಗಳು ಮಂಜೂರಾಗಿವೆ. 12 ಹುದ್ದೆಗಳು ಖಾಲಿ ಇವೆ. ಬಾಯ್ಲರ್‌ಗಳ ಸಹಾಯಕ ನಿರ್ದೇಶಕರು 4 ಹುದ್ದೆ ಮಂಜೂರಾಗಿದ್ದು, 4 ಹುದ್ದೆಗಳು ಖಾಲಿ ಇವೆ.

ಖಾಲಿ ಇರುವ ಗ್ರೂಪ್ 'ಡಿ' ನೇರ ನೇಮಕಾತಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಸರ್ಕಾರವು ಈಗಾಗಲೇ ಆದೇಶ ಹೊರಡಿಸಿದೆ. ಇದರ ಅನ್ವಯ ಖಾಲಿ ಇರುವ ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿದೆ ಎಂದು ಇಲಾಖೆ ಲಿಖಿತ ಉತ್ತರದಲ್ಲಿ ಹೇಳಿದೆ.

ಆಯುಕ್ತಾಲಯದಲ್ಲಿ ನೇರ ನೇಮಕಾತಿ ಕೋಟಾದಡಿಯ ಗ್ರೂಪ್ 'ಎ' ವೃಂದದ ಸಹಾಯಕ ಕಾರ್ಮಿಕ ಆಯುಕ್ತರ 5 ಹುದ್ದೆಗಳು ಮತ್ತು ಗ್ರೂಪ್ 'ಬಿ'ವೃಂದ ಕಾರ್ಮಿಕ ಅಧಿಕಾರಿಯ 18 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿದ್ದು, ಆರ್ಥಿಕ ಇಲಾಖೆಯು ಹುದ್ದೆಗಳನ್ನು ಭರ್ತಿ ಮಾಡಲು ಸಹಮಿತಿ ನೀಡಿದ ನಂತರ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪಸ್ತಾವನೆಯನ್ನು ಕಳಿಸಲು ಕ್ರಮ ವಹಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಉತ್ತರದಲ್ಲಿ ತಿಳಿಸಿದೆ.

English summary
Vacant post at labor department will be filled by Karnataka public service commission soon said in legislative council in the written reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X