ಕೇಂದ್ರೀಯ ವಿದ್ಯಾಲಯ ನೇಮಕಾತಿ, ಮೈಸೂರಲ್ಲೂ ಹುದ್ದೆಗಳಿವೆ
ಮೈಸೂರು, ಜನವರಿ 07: ಕೇಂದ್ರಿಯ ವಿದ್ಯಾಲಯ ಸಂಘಟನೆ(ಕೆವಿಎಸ್) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ಮೈಸೂರು ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಪಿಜಿಟಿ, ಎಚ್ಎಂ, ಲೈಬ್ರಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜನವರಿ 15, 2021ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ಕೇಂದ್ರಿಯ ವಿದ್ಯಾಲಯ ಸಂಘಟನೆ(ಕೆವಿಎಸ್)
ಹುದ್ದೆ ಹೆಸರು: PGT, HM & Librarian
ಒಟ್ಟು ಹುದ್ದೆ: 27
ಉದ್ಯೋಗ ಸ್ಥಳ: ಮೈಸೂರು, ಗ್ವಾಲಿಯರ್, ಮುಂಬೈ, ಭುವನೇಶ್ವರ ಹಾಗೂ ಚಂಡೀಗಢ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 15, 2021.
ವಿದ್ಯಾರ್ಹತೆ :
ಪಿಜಿಟಿ: ಸ್ನಾತಕೋತ್ತರ ಪದವಿ.
ಎಚ್ಎಂ: ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿಗದಿತ ವಿಷಯದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಲೈಬ್ರೇರಿಯನ್: ಲೈಬ್ರರಿ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ.
ವಯೋಮಿತಿ: ವಯೋಮಿತಿ ಹಾಗೂ ವಿನಾಯಿತಿ ಕುರಿತಂತೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 05/01/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/01/2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ