ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಉದ್ಯೋಗ ಮಾಹಿತಿ; ತಾತ್ಕಾಲಿಕವಾಗಿ ಚಾಲಕರ ಹುದ್ದೆ ಭರ್ತಿ

|
Google Oneindia Kannada News

ಬೆಂಗಳೂರು, ಮೇ 18; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ವಿಭಾಗ ಚಾಲಕರ ನೇಮಕಾತಿಗೆ ಆಸಕ್ತರಿಂದ ಅರ್ಜಿ ಕರೆದಿದೆ. ನಿಗಮದ ನಿವೃತ್ತ ಚಾಲಕರು ತಾತ್ಕಾಲಿಕ ಆಧಾರದ ಮೇಲೆ ಕೆಲಸ ಮಾಡಲು ವರದಿ ಮಾಡಿಕೊಳ್ಳಬಹುದಾಗಿದೆ.

ಕೆಎಸ್‌ಆರ್‌ಟಿಸಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಕೋವಿಡ್ ಪರಿಸ್ಥಿತಿ ಪೂರ್ವದಲ್ಲಿ ನಿಗಮ ಸುಮಾರು 8 ಸಾವಿರ ಅನುಸೂಚಿಗಳೊಂದಿಗೆ ಜನರಿಗೆ ಅನುಕೂಲವಾಗುವಂತೆ ಸಾರಿಗೆ ಸೌಲಭ್ಯ ಒದಗಿಸುತ್ತಿತ್ತು.

ಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಆದರೆ ಕೋವಿಡ್ ಪರಿಸ್ಥಿತಿಯಲ್ಲಿ ಬಸ್‌ಗಳ ಸಂಚಾರ ಕಡಿಮೆಗೊಳಿಸಲಾಯಿತು. ನಂತರ ಪರಿಸ್ಥಿತಿ ಸುಧಾರಣೆಗೊಂಡ ಬಳಿಕ ಬಸ್‌ಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ. ಪ್ರಸ್ತುತ ಜನಜೀವನ ಸಹಜ ಸ್ಥಿತಿಗೆ ಬಂದಿದೆ.

KSRTC Driver Jobs On Three Months Contract Basis

ಆದರೆ ಜನಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಚಾರ ನಡೆಸಲು ಕೆಎಸ್ಆರ್‌ಟಿಸಿ ಚಾಲಕರ ಕೊರತೆ ಎದುರಿಸುತ್ತಿದೆ. ನಿಗಮದ ಆರ್ಥಿಕ ಪರಿಸ್ಥಿತಿ ಸಹ ಕ್ಲಿಸ್ಟಕರವಾಗಿದ್ದು, ಚಾಲ್ತಿಯಲ್ಲಿರುವ ಚಾಲನಾ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸಹ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿ

ಮೂರು ತಿಂಗಳ ಅವಧಿಗೆ ನೇಮಕ; ಜನದಟ್ಟಣೆ ಅವಧಿಯಲ್ಲಿ ಸಾರ್ವಜನಿಕರ ಪ್ರಯಾಣದ ಅಗತ್ಯಕ್ಕೆ ತಕ್ಕಂತೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಕಳೆದ ಮೂರು ವರ್ಷಗಳಲ್ಲಿ ನಾಲ್ಕೂ ನಿಗಮಗಳಲ್ಲಿ ನಿವೃತ್ತಿ ಹೊಂದಿ 63 ವರ್ಷ ವಯೋಮಿತಿ ಮೀರದ ಚಾಲಕರನ್ನು ಮೂರು ತಿಂಗಳ ಅವಧಿಗೆ ನಿಗಮದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಚಾಲಕರಾಗಿ ಉಪಯೋಗಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಕೊಪ್ಪಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ ಕೊಪ್ಪಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

ಈ ಕೆಳಕಂಡ ಷರತ್ತುಗಳನ್ನು ಒಪ್ಪಿ ಕರ್ತವ್ಯ ನಿರ್ವಹಣೆ ಮಾಡಲು ಆಸಕ್ತಿ ಇರುವ ನಿವೃತ್ತ ಚಾಲಕರು ಸೂಕ್ತ ದಾಖಲಾತಿಗಳ ಜೊತೆ ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು/ ರಾಮನಗರ/ ಚಾಮರಾಜನಗರ/ ಮಂಗಳೂರು ವಿಭಾಗಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ.

ಗೌರವ ಧನದ ವಿವರ; ತಾತ್ಕಾಲಿಕ ಆಧಾರದ ಮೇಲೆ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಚಾಲಕರಿಗೆ ಕರ್ತವ್ಯ ನಿರ್ವಹಣೆ ಮಾಡಿದ ಪ್ರತಿ ದಿನದ 8 ಗಂಟೆಗಳ ಚಾಲನಾ ಅವಧಿಗೆ ರೂ. 1000 ಗೌರವ ಧನ ಪಾವತಿಸಲಾಗುತ್ತದೆ.

jobs

8 ಗಂಟೆಗಳ ನಂತರದಲ್ಲಿನ ಕರ್ತವ್ಯಕ್ಕೆ ಪ್ರತಿ ಗಂಟೆಗೆ ರೂ. 125 ಹೆಚ್ಚುವರಿ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಭತ್ಯೆ/ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಾರಿಗೆ ಆದಾಯದ ಮೇಲೆ ಶೇ 01ರಂತೆ ಪ್ರೋತ್ಸಾಹಧನಕ್ಕೆ ಅರ್ಹರಿರುತ್ತಾರೆ. ಒಪ್ಪಂದದ ಅವಧಿಯ ಸೇವಾವಧಿ ವಿಸ್ತರಣೆ/ ಮರು ನೇಮಕವಲ್ಲ. ಸದರಿ ಚಾಲಕರನ್ನು ಸಂಸ್ಥೆಯ ಯಾವುದೇ ಸೂಚನೆ ನೀಡದೆ ಕರ್ತವ್ಯದಿಂದ ಬಿಡುಗಡೆಗೊಳಿಸಬಹುದಾಗಿದೆ.

ಅರ್ಜಿ ಆಹ್ವಾನ; ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ, ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ.

ಈ ಸಂಸ್ಥೆಯು ದೇಶದ ಪಾಲಿಮರ್, ಪೆಟ್ರೋಕೆಮಿಕಲ್ಸ್, ಪ್ಲಾಸ್ಟಿಕ್ಸ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತದೆ. ಮತ್ತು ಸಿಪೆಟ್ ಕರ್ನಾಟಕದ ವಿದ್ಯಾರ್ಥಿಗಳು ಕೈಗಾರಿಕಾ ವಲಯದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ.

ಸಿಪೆಟ್ 2022-23ನೇ ಸಾಲಿನ ಉದ್ಯೋಗಾದಾರಿತ ಮತ್ತು ಶೇ.100 ಉದ್ಯೋಗ ಖಚಿತ ತರಬೇತಿಗೆ ಅರ್ಜಿ ಕರೆದಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ (ವಿಜ್ಞಾನ) ಮತ್ತು ಬಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್, 5 ಕೊನೆಯ ದಿನವಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2510618/ 9480253024/ 9791431827/ 9466585669 ಕರೆ ಮಾಡಬಹುದಾಗಿದೆ. ವೆಬ್‍ಸೈಟ್ ವಿಳಾಸ www.cipet.gov.in ಗೆ ಸಹ ಭೇಟಿ ನೀಡಬಹುದಾಗಿದೆ.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
Karnataka State Road Transport Corporation (KSRTC) invited applications for the driver post. Candidates should work Three months on contract basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X