ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪೊಲೀಸ್ ನೇಮಕಾತಿ; 1028 ಕಾನ್ಸ್‌ಟೇಬಲ್ ಹುದ್ದೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26 : ಕರ್ನಾಟಕ ಪೊಲೀಸ್ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 17/10/2019 ಕೊನೆಯ ದಿನವಾಗಿದೆ.

ಒಟ್ಟು 1028 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದವರು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ವೇತನ 21400-42000 ರೂ. ಪ್ರತಿ ತಿಂಗಳು.

ಕರ್ನಾಟಕ ಪೊಲೀಸ್ ನೇಮಕಾತಿ; 3026 ಕಾನ್ಸ್‌ಟೇಬಲ್ ಹುದ್ದೆಕರ್ನಾಟಕ ಪೊಲೀಸ್ ನೇಮಕಾತಿ; 3026 ಕಾನ್ಸ್‌ಟೇಬಲ್ ಹುದ್ದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ-ಸಿಬಿಎಸ್‌ಇ, ಎಸ್‌ಎಸ್‌ಎಲ್‌ಸಿ-ಐಸಿಎಸ್‌ಇ, ಎಸ್ಎಸ್‌ಎಲ್‌ಸಿ-ಎಸ್‌ಎಸ್‌ಸಿ, ಎಸ್‌ಎಸ್‌ಎಲ್‌ಸಿ, ರಾಜ್ಯ ಬೋರ್ಡ್, ಎಸ್‌ಎಸ್‌ಎಲ್‌ಸಿ-ತತ್ಸಮಾನ, ಎಸ್‌ಎಸ್‌ಎಲ್‌ಸಿ-ಕೆಓಎಸ್, ಎಸ್‌ಎಸ್‌ಎಲ್‌ಸಿ-ಎನ್‌ಓಐಎಸ್ ವ್ಯಾಸಂಗ ಮಾಡಿರಬೇಕು.

KSP Recruitment 2019 Apply For 1028 Armed Police Constable

ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ. ಬುಡಕಟ್ಟು ಅಭ್ಯರ್ಥಿಗಳಿಗೆ 18 ರಿಂದ 30 ವರ್ಷಗಳು.

CISF ನೇಮಕಾತಿ: 914 ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನCISF ನೇಮಕಾತಿ: 914 ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 250 ರೂ., ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಸೆಪ್ಟೆಂಬರ್ 27ರಂದು ಉದ್ಯೋಗ ಮೇಳಶಿವಮೊಗ್ಗದಲ್ಲಿ ಸೆಪ್ಟೆಂಬರ್ 27ರಂದು ಉದ್ಯೋಗ ಮೇಳ

ಆಸಕ್ತ ಅಭ್ಯರ್ಥಿಗಳು 23/9/2019 ರಿಂದ 17/10/2019ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka State Police (KSP) recruitment 2019. Notification has been released on official website for the recruitment of 1028 post. Candidate who is looking for Armed Police Constable can apply online before 17-10-2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X