ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSLU ನೇಮಕಾತಿ 2021: 13 ಶಿಕ್ಷಕ, ಬೋಧಕ ಹುದ್ದೆಗಳಿಗೆ ನೇಮಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. 13 ವಿವಿಧ ಶೈಕ್ಷಣಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ.

ಸಂಸ್ಥೆ ಹೆಸರು: Karnataka State Law University (KSLU)
ಒಟ್ಟು ಹುದ್ದೆ: 13
ಉದ್ಯೋಗ ಸ್ಥಳ: ಹುಬ್ಬಳ್ಳಿ-ಕರ್ನಾಟಕ
ಹುದ್ದೆ ಹೆಸರು: Teaching assistants & Academic faculty
ಸಂಬಳ ನಿರೀಕ್ಷೆ: ವಿವಿ ನಿಯಮಾನುಸಾರ.

ಹುದ್ದೆ ಹೆಸರು- ಹುದ್ದೆ ಸಂಖ್ಯೆ
ಪ್ರೊಫೆಸರ್- 1
ಸಹಾಯಕ ಪ್ರೊಫೆಸರ್-9
ಸಹಾಯಕ ಪ್ರೊಫೆಸರ್-2
ಸಹಾಯಕ ನಿರ್ದೇಶಕ-1

KSLU Recruitment 2021 – Apply for 13 Teaching & Academic Staff Posts

ಸಹಾಯಕ ಪ್ರೊಫೆಸರ್ (ಕಾನೂನು): 2
ಸಹಾಯಕ ಪ್ರೊಫೆಸರ್ ಕಾನೂನು ಯೇತರ ಇತರೆ ಬೋಧಕ ಸಿಬ್ಬಂದಿ: 5
ಸಹಾಯಕ ಪ್ರೊಫೆಸರ್ ಕಾನೂನು ಯೇತರ (ಹೈದರಾಬಾದ್-ಕರ್ನಾಟಕ): 3

ಪ್ರೊಫೆಸರ್: ಪಿಎಚ್‌ಡಿ, ಕಾನೂನು ವಿಷಯದಲ್ಲಿ ಪದವಿ.
ಸಹಾಯಕ ಪ್ರೊಫೆಸರ್, ಅಸೋಸಿಯೆಟ್ ಪ್ರೊಫೆಸರ್, ಸಹಾಯಕ ನಿರ್ದೇಶಕ: ಸ್ನಾತಕೋತ್ತರ ಪದವಿ, ಪಿಎಚ್‌ಡಿ.

ವಿದ್ಯಾರ್ಹತೆ: ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಪಿಎಚ್‌ಡಿ, ಎನ್‌ಇಟಿ, ಎಸ್‌ಎಲ್‌ಟಿ, ಎಸ್‌ಎಲ್‌ಇಟಿಯನ್ನು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಎಸ್‌ಎಲ್‌ಯು ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಎಸ್‌ಸಿ/ಎಸ್‌ಟಿ/ಕೆಟಗೆರಿ-1 ಅಭ್ಯರ್ಥಿ: ಶೇ 50ರಷ್ಟು ರಿಯಾಯಿತಿ ಸಿಗಲಿದೆ.

ಇತರೆ ಅಭ್ಯರ್ಥಿಗಳಿಗೆ:
ಸಹಾಯಕ ಪ್ರೊಫೆಸರ್: 1900 ರು
ಸಹಾಯಕ ಪ್ರೊಫೆಸರ್: 2,500 ರು

ವಯೋಮಿತಿ:
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ಆನ್‌ ಲೈನ್‌ನಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನೀಡಿ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಕಳಿಸಬೇಕು. ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಸೂಕ್ತ ದಾಖಲೆ, ಅಂಕಪಟ್ಟಿ, ವಿನಾಯತಿ ಪಡೆಯಲು ಅಗತ್ಯ ದಾಖಲೆ ಒದಗಿಸಿ, ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಿ;
The Registrar,
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ,
ನವನಗರ
ಹುಬ್ಬಳ್ಳಿ - 580 025

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30/11/2021. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) 2021 ಸಾಲಿನ ನೇಮಕಾತಿ ಕುರಿತ ಅಧಿಸೂಚನೆ ಅನುಸಾರ ಅರ್ಹ ಅಭ್ಯರ್ಥಿಗಳು ನೇರವಾಗಿ KSLU ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಬಹುದು. ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ (Teaching assistants & Academic faculty) ಕುರಿತ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಭರ್ತಿ ಮಾಡುವಾಗ ಅನುಸರಿಸಬೇಕಾದ ವಿಧಾನ:

* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.

* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
* ಅರ್ಜಿ ಜೊತೆಗೆ ಪದವಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.

* ಭರ್ತಿಯಾದ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ.
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.

English summary
Karnataka State Law University(KSLU) Recruitment 2021: Job seekers who are looking for a career in Hubli – Karnataka Government can Apply for 13 Teaching & Academic Staff Posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X