ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಶಾಮಕ ದಳದಲ್ಲಿ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಜೂನ್ 13: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಸರ್ಕಾರ ಮುಂದಾಗಿದೆ. ಗೃಹ ಸಚಿವ ಬಸವರಾಜು ಬೊಮ್ಮಾಯಿ ಈ ಕುರಿತು ನಿರ್ದೇಶನ ನೀಡಿದ್ದು, ಶೀಘ್ರದಲ್ಲೇ ಅಗ್ನಿಶಾಮಕ ದಳ ಘಟಕ ಜಾಹೀರಾತು ಪ್ರಕಟಿಸಲಿದೆ.

Recommended Video

Pakistan cricketer Shahid Afridi tests positive for COVID19 | Shahid Afridi | Oneindia Kannada

ಫೈರ್‌ ಮ್ಯಾನ್ (ಅಗ್ನಿಶಾಮಕ), ತಂತ್ರಜ್ಞ, ಫೈರ್‌ ಮ್ಯಾನ್ ಚಾಲಕ (ಚಾಲಕ) ಮತ್ತು ಅಗ್ನಿಶಾಮಕ ಠಾಣಾಧಿಕಾರಿ (ಎಫ್‌ಎಸ್‌ಒ) ಹುದ್ದೆ ಸೇರಿದಂತೆ ಒಟ್ಟು 1,567 ಹುದ್ದೆಗಳನ್ನು ಭರ್ತಿ ಮಾಡಲಿದೆ.

ಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇಈ ವರ್ಷ 550 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಫೋನ್‌ಪೇ

ಮೂಲಗಳ ಪ್ರಕಾರ, ಅರ್ಜಿ ಸಲ್ಲಿಸಲಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕಗೊಳಿಸಲಾಗುವುದು ಎನ್ನಲಾಗಿದೆ. ಇನ್ನುಳಿದಂತೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ವೇತನ ಹಾಗೂ ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ ಎಂದು ತಿಳಿಯಲು ಮುಂದೆ ಓದಿ.....

ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ

ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ

ಬೆಂಗಳೂರಿನ ಅಗ್ನಿಶಾಮಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಗೃಹ ಸಚಿವ 1567 ಹುದ್ದೆಗಳು ಆದಷ್ಟೂ ಬೇಗ ಭರ್ತಿ ಮಾಡುವಂತೆ ಇಲಾಖೆ ಡಿಜಿಪಿಗೆ ಸೂಚಿಸಿದ್ದಾರೆ. 1567 ಹುದ್ದೆಗಳ ಪೈಕಿ ಅಗ್ನಿಶಾಮಕ (ಫೈರ್‌ಮ್ಯಾನ್) ಹುದ್ದೆ 1222, ಅಗ್ನಿಶಾಮಕ ಚಾಲಕ ಹುದ್ದೆ 227, ತಂತ್ರಜ್ಞ ಹುದ್ದೆ 82, ಅಗ್ನಿಶಾಮಕ ಠಾಣಾಧಿಕಾರಿ 36 ಹುದ್ದೆಗಳು ಖಾಲಿ ಇವೆ.

ವಯಸ್ಸಿನ ಮಿತಿ ಮತ್ತು ಶುಲ್ಕದ ವಿವರ?

ವಯಸ್ಸಿನ ಮಿತಿ ಮತ್ತು ಶುಲ್ಕದ ವಿವರ?

ಕೆಎಸ್‌ಎಫ್‌ಇಎಸ್ ನೇಮಕಾತಿ 2020 ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಗರಿಷ್ಠ 35 ವರ್ಷಕ್ಕಿಂತ ಹೆಚ್ಚಿರಬಾರದು. ಕರ್ನಾಟಕ ಸರ್ಕಾರದ ನಿಮಯಗಳ ಪ್ರಕಾರ ಎಸ್‌ಸಿ-ಎಸ್‌ಟಿ, ಒಬಿಸಿ (2ಎ/2ಬಿ/3ಎ/3ಬಿ) ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ವಿನಾಯಿತಿ ಇದೆ. ಸಾಮಾನ್ಯ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ ನಿಗದಿಯಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 50 ರೂಪಾಯಿ ಶುಲ್ಕ ನಿಗದಿಯಾಗಿದೆ. ಆನ್‌ಲೈನ್‌ ಮೂಲಕ ಪಾವತಿಸಬಹುದು.

4266 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿದ ಪೊಲೀಸ್ ಇಲಾಖೆ4266 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿದ ಪೊಲೀಸ್ ಇಲಾಖೆ

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಎಷ್ಟರಲಿದೆ?

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಎಷ್ಟರಲಿದೆ?

ಕೆಎಸ್‌ಎಫ್‌ಇಎಸ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಶಾರ್ಟ್‌ಲಿಸ್ಟಿಂಗ್, ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ, ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ನಡೆಯಲಿದೆ ಎಂದು ತಿಳಿಸಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಕೆಎಸ್‌ಎಫ್‌ಇಎಸ್ ಸೂಚಿಸಲಾಗುವ ಅಗತ್ಯ ವಿದ್ಯಾರ್ಹತೆ ಹೊಂದಿರಬೇಕು. ಕೆಎಸ್‌ಎಫ್‌ಇಎಸ್ ಮಾನದಂಡಗಳ ಪ್ರಕಾರ ವೇತನ ನಿರ್ಧರಿಸಲಾಗುತ್ತದೆ.

ಹೇಗೆ ಅರ್ಜಿ ಸಲ್ಲಿಸುವುದು?

ಹೇಗೆ ಅರ್ಜಿ ಸಲ್ಲಿಸುವುದು?

ಕೆಎಸ್‌ಎಫ್‌ಇಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ http://ksfesonline.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಥವಾ ಆಪ್‌ಲೈನ್‌ ಮೂಲಕ ನೇರವಾಗಿ ಮುಖ್ಯ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಸದ್ಯಕ್ಕೆ ಹೆಚ್ಚಿನ ವಿವರವನ್ನು ಅಧಿಕೃತವಾಗಿ ನೀಡಿಲ್ಲ. ಈ ಕುರಿತು ಅಗ್ನಿಶಾಮಕ ಇಲಾಖೆ ಜಾಹೀರಾತು ನೀಡಲಿದ್ದು, ಅಧಿಕೃತ ವೆಬ್‌ಸೈಟ್‌ ಅಥವಾ ಉದ್ಯೋಗ ಜಾಹೀರಾತು ಪತ್ರಿಕೆಯ ಕಡೆ ಗಮನ ನೀಡಿ.

English summary
KSFES Recruitment 2020: Apply For 1,567 Fireman, Technician, Driver and Other Posts. check out in detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X