ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ 2020: 523 ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಆ. 21: ಕರ್ನಾಟಕ ಲೋಕಸೇವಾ ಆಯೋಗ ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ 'ಸಿ' ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 19/9/2020 ಕೊನೆಯ ದಿನವಾಗಿದೆ.

Recommended Video

Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

ಆಸಕ್ತ ಅಭರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಒಟ್ಟು 3 ಹಂತಗಳಿವೆ. ಅರ್ಜಿ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು. ಪಾವತಿ ಮಾಡಿದ ಶುಲ್ಕಗಳನ್ನು ವಾಪಸ್ ಮಾಡಲಾಗುವುದಿಲ್ಲ. ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗಳ ಲಿಖಿತ ಪರೀಕ್ಷೆ ಫಲಿತಾಂಶ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ನಡೆಸಲಾಗುತ್ತದೆ.

ಕೆಪಿಎಸ್‌ಸಿ ನೇಮಕಾತಿ 2020, ಗ್ರೂಪ್ ಸಿ ಹುದ್ದೆ
ಗ್ರೂಪ್ ಸಿ ಹುದ್ದೆ ಸಂಕ್ಷಿಪ್ತ ವಿವರ
ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ಹುದ್ದೆ ಹೆಸರು: ಗ್ರೂಪ್ ಸಿ, Non-Technical
ಒಟ್ಟು ಹುದ್ದೆ: 523
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 19, 2020

ಶೈಕ್ಷಣಿಕ ಅರ್ಹತೆ

ಶೈಕ್ಷಣಿಕ ಅರ್ಹತೆ

ಮೆಟ್ರಿಕ್ಯುಲೇಷನ್/ ಎಸ್ಎಸ್ಎಲ್ ಸಿ ಅಥವಾ ತತ್ಸಮಾನ. ಪಿಯುಸಿ, ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಪರಿಗಣಿಸಲಾಗುವುದಿಲ್ಲ.

ವಯೋಮಿತಿ

ವಯೋಮಿತಿ

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ ಮೀರಿರಬಾರದು ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 35 ವರ್ಷಗಳು. ಪ್ರವರ್ಗ -2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಪ. ಜಾ., ಪ.ಪಂ, ಪ್ರವರ್ಗ -1ರ ಅಭ್ಯರ್ಥಿಗಳಿಗೆ 40 ವರ್ಷಗಳು.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕದ ವಿವರ

ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು 600 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಪ್ರವರ್ಗ (2)ಎ, (2)ಬಿ, 3(ಎ), 3(ಬಿ) ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಸಿದ ನಂತರ ಅರ್ಜಿಯ ಪಕ್ಕದಲ್ಲಿ 'ಪೇ ನೌ' ಎಂಬ ಲಿಂಕ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 7406086807/6363754183.

ಸ್ಪರ್ಧಾತ್ಮಕ ಪರೀಕ್ಷೆ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ವಿಧಾನ

ಪರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇದ್ದು ಋಣಾತ್ಮಕ ಮೌಲ್ಯ ಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ 0.25 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ. ಸಾಮಾನ್ಯ ಪತ್ರಿಕೆ 200 ಅಂಕಗಳು, ನಿರ್ದಿಷ್ಟ ಪತ್ರಿಕೆ 200 ಅಂಕಗಳು. ಗ್ರೂಪ್ 'ಸಿ' ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಮೇರೆಗೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
KPSC recruitment 2020 notification has been released on official website for the recruitment of 523 vacancies at Karnataka Public Service Commission (KPSC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X