ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ: 1279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮಾರ್ಚ್ 02: ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡನೇ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಲು 09/04/2020 ಕೊನೆಯ ದಿನವಾಗಿದೆ.

ನೇಮಕಾತಿ ಪ್ರಾಧಿಕಾರಿಗಳು ದೃಢಿಕರಿಸಿ ನೀಡಿರುವ ಹುದ್ದೆಗಳ ವರ್ಗೀಕರಣದನ್ವಯ ಇಲಾಖಾವಾರು ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಅನಿವಾರ್ಯವಾದ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ.

ಸಂಸ್ಥೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)
ಸಂಸ್ಥೆ ಹೆಸರು: Second Division Assistant (SDA)
ಒಟ್ಟು ಹುದ್ದೆ: 1279.
ಉದ್ಯೋಗ ಸ್ಥಳ: ಕರ್ನಾಟಕ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09.04.2020

ಯಾವ ಯಾವ ಇಲಾಖೆಯಲ್ಲಿ ನೇಮಕಾತಿ

ಯಾವ ಯಾವ ಇಲಾಖೆಯಲ್ಲಿ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗ ಶಿಕ್ಷಣ, ಉದ್ಯೋಗ ಮತ್ತು ತರಬೇತಿ, ಮುಖ್ಯ ಕಾರ್ಯದರ್ಶಿಗಳು ಸಚಿವಾಲಯ ವಿಧಾನಸೌಧ, ತೋಟಗಾರಿಕಾ ಇಲಾಖೆ ಬೆಂಗಳೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಒಟ್ಟು 27 ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಖಾಲಿ ಇರುವ 1279ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ವಿದ್ಯಾರ್ಹತೆ

ವಿದ್ಯಾರ್ಹತೆ

ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು, ಡಿಪ್ಲೋಮಾ, ಐಟಿಐ ವಿದ್ಯಾರ್ಥತೆಯ ಅಗತ್ಯವಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ:

ವಯೋಮಿತಿ:

ಕನಿಷ್ಠ: 18 ವರ್ಷ.
ಗರಿಷ್ಠ: 35 ವರ್ಷ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38, ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ವೇತನ ನಿರೀಕ್ಷೆ
ವೇತನ
* ಸಹಾಯಕ ಹುದ್ದೆಗೆ 30350-58250 ರೂ. ತಿಂಗಳ ವೇತನ
* ಪ್ರಥಮ ದರ್ಜೆ ಸಹಾಯಕ ಹುದ್ದೆ 27650-52650 ರೂ. ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ ವಿವರ

ಅರ್ಜಿ ಶುಲ್ಕ ವಿವರ

ಸಾಮಾನ್ಯ ವರ್ಗಕ್ಕೆ 600 ರೂ. + ಪ್ರೊಸೆಸಿಂಗ್ ಚಾರ್ಜ್ 35 ರೂ. ಶುಲ್ಕ, ಪ್ರವರ್ಗ 2(ಎ), 2 (ಬಿ), 3 (ಎ), 3(ಬಿ) ಅಭ್ಯರ್ಥಿಗಳಿಗೆ 300 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ, ಮಾಜಿ ಸೈನಿಕ (ಸಾಮಾನ್ಯ ಅರ್ಹತೆ ಮತ್ತು 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದವರಿಗೆ 50 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. ಆದರೆ, ಪ್ರೊಸೆಸಿಂಗ್ ಶುಲ್ಕ 35 ರೂ. ಪಾವತಿಸಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ಒಂದು ಪ್ರತಿಯನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡು ನೇಮಕಾತಿ ಪ್ರತಿಕ್ರಿಯೆ ಮುಗಿಯುವ ತನಕ ಭದ್ರವಾಗಿ ಇಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09.03.2020.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 09.04.2020

ಅರ್ಜಿ ಸಲ್ಲಿಕೆ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
KPSC recruitment 2020 notification has been released on official website for the recruitment of 1279 vacancies at Karnataka Public Service Commission (KPSC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X