ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

131 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 12 : ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 12/3/2019 ಕೊನೆಯ ದಿನವಾಗಿದೆ.

ಬೆಂಗಳೂರು ನಗರದ ಸಿವಿಎಲ್ ನ್ಯಾಯಾಲಯ, ಲಘು ವ್ಯವಹಾರಗಳ ನ್ಯಾಯಾಲಯ ಮತ್ತು ರಾಜ್ಯದ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಲ್ಲಿನ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಖಾಲಿ ಇದೆ

ಪ್ರಥಮ ದರ್ಜೆ ಸಹಾಯಕರು 50, ದ್ವಿತೀಯ ದರ್ಜೆ ಸಹಾಯಕರು 81 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 13/3/2019 ಕೊನೆಯ ದಿನವಾಗಿದೆ.

ಬೆಳಗಾವಿ ಜಿಲ್ಲಾ ಕೋರ್ಟ್‌ ನೇಮಕಾತಿ, ವಿವಿಧ ಹುದ್ದೆಗೆ ಅರ್ಜಿ ಹಾಕಿಬೆಳಗಾವಿ ಜಿಲ್ಲಾ ಕೋರ್ಟ್‌ ನೇಮಕಾತಿ, ವಿವಿಧ ಹುದ್ದೆಗೆ ಅರ್ಜಿ ಹಾಕಿ

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 7, 13 ಮತ್ತು 28ರಂದು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಹತೆ, ವೇತನ ಶ್ರೇಣಿಯ ವಿವರಗಳು ಚಿತ್ರಗಳಲ್ಲಿವೆ. ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಅರಣ್ಯ ಇಲಾಖೆ ನೇಮಕಾತಿ, 10ನೇ ಕ್ಲಾಸ್ ಪಾಸಾದವರು ಅರ್ಜಿ ಹಾಕಿಅರಣ್ಯ ಇಲಾಖೆ ನೇಮಕಾತಿ, 10ನೇ ಕ್ಲಾಸ್ ಪಾಸಾದವರು ಅರ್ಜಿ ಹಾಕಿ

ಹುದ್ದೆಗಳ ಸಂಖ್ಯೆ

ಹುದ್ದೆಗಳ ಸಂಖ್ಯೆ

* ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು : ಪ್ರಥಮ ದರ್ಜೆ ಸಹಾಯಕ 10, ದ್ವಿತೀಯ ದರ್ಜೆ ಸಹಾಯಕ 23
* ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು : ಪ್ರಥಮ ದರ್ಜೆ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕ 1
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ : ಪ್ರಥಮ ದರ್ಜೆ ಸಹಾಯಕ 3, ದ್ವಿತೀಯ ದರ್ಜೆ ಸಹಾಯಕ 8
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಳ್ಳಾರಿ : ಪ್ರಥಮ ದರ್ಜೆ ಸಹಾಯಕ 9, ದ್ವಿತೀಯ ದರ್ಜೆ ಸಹಾಯಕ 25
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಲಬುರಗಿ : ಪ್ರಥಮ ದರ್ಜೆ ಸಹಾಯಕ 10, ದ್ವಿತೀಯ ದರ್ಜೆ ಸಹಾಯಕ 8
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ : ಪ್ರಥಮ ದರ್ಜೆ ಸಹಾಯಕ 2, ದ್ವಿತೀಯ ದರ್ಜೆ ಸಹಾಯಕ 1
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಯಚೂರು : ಪ್ರಥಮ ದರ್ಜೆ ಸಹಾಯಕ 12, ದ್ವಿತೀಯ ದರ್ಜೆ ಸಹಾಯಕ 8
* ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ : ಪ್ರಥಮ ದರ್ಜೆ ಸಹಾಯಕ 3, ದ್ವಿತೀಯ ದರ್ಜೆ ಸಹಾಯಕ 7

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಬಾರದು. ಕನಿಷ್ಠ ವಯೋಮತಿ 18 ವರ್ಷಗಳು.

ವೇತನ ಶ್ರೇಣಿಯ ವಿವರಗಳು

ವೇತನ ಶ್ರೇಣಿಯ ವಿವರಗಳು

ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪ್ರಾಥಮಿಕ ವೇತನ 27650 ರಿಂದ ಆರಂಭವಾಗುತ್ತದೆ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ 21400 ರಿಂದ ಆರಂಭವಾಗುತ್ತದೆ.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವ ಸಿಎಸ್‌ಸಿ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಎಸ್‌ಸಿ/ಎಸ್‌ಟಿ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಆದರೆ ಅಭ್ಯರ್ಥಿಗಳು ಅಪ್ಲಿಕೇಶನ್ ಪ್ರೊಸೆಸಿಂಗ್ ಚಾರ್ಜ್ ಪಾವತಿ ಮಾಡಬೇಕಿದೆ.

English summary
Karnataka Public Service Commission (KPSC) invited application for the post of first division assistant and second division assistant. Candidates can apply online before 12/3/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X