ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿ

By Gururaj
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10 : ಕರ್ನಾಟಕ ಲೋಕಸೇವಾ ಆಯೋಗ ಅರಣ್ಯ ಇಲಾಖೆಯಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹತಾ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಲು 9/10/2018 ಕೊನೆಯ ದಿನವಾಗಿದೆ.

2017-18ನೇ ಸಾಲಿನ ಗ್ರೂಪ್ - 'ಎ'ವೃಂದದ 24 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಳನ್ನು ಭರ್ತಿ ಮಾಡಲಾಗತ್ತದೆ. ಹುದ್ದಯ ಭರ್ತಿಗೆ ಅರ್ಹತಾ ಪರೀಕ್ಷೆಗೆ ಅರ್ಜಿಗಳನ್ನು ಆಸಕ್ತರು ಈಗ ಸಲ್ಲಿಸಬಹುದಾಗಿದೆ.

ಬೆಂಗಳೂರು ಜಲಮಂಡಳಿ ನೇಮಕಾತಿ ಅರ್ಜಿ ಹಾಕಿಬೆಂಗಳೂರು ಜಲಮಂಡಳಿ ನೇಮಕಾತಿ ಅರ್ಜಿ ಹಾಕಿ

ಪೂರ್ವಭಾವಿ ಪರೀಕ್ಷೆ 2018ರ ಡಿಸೆಂಬರ್‌ನಲ್ಲಿ, ಮುಖ್ಯ ಪರೀಕ್ಷೆ 2019ರ ಫೆಬ್ರವರಿಯಲ್ಲಿ ನಡೆಯಲಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಯಾವುದೇ ನಾಗರಿಕ ಸೇವಾ ಕೇಂದ್ರಗಳಲ್ಲಿ ಅಥವ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.

21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ

ಒಟ್ಟು ಹುದ್ದೆಗಳ ಸಂಖ್ಯೆ 24. ಬಿಎಸ್‌ಸಿ (ಅರಣ್ಯ ಶಾಸ್ತ್ರ) ಪದವೀಧರರಿಗೆ 11 (2 ಬ್ಯಾಕ್ ಲಾಗ್ ), ಬಿಎಸ್‌ಸಿ ಅರಣ್ಯ ಶಾಸ್ತ್ರ ಪದವಿ ಹೊರತು ಪಡಿಸಿ ಇತರೆ ವಿಜ್ಞಾನ ಇಂಜಿನಿಯರಿಂಗ್ ಪದವೀಧರರಿಗೆ 11 ಹುದ್ದೆಗಳು. ವೇತನ ಶ್ರೇಣಿ 28100-50100. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನಲ್ಲಿ ಸೆ.19ರಂದು ಉದ್ಯೋಗ ಮೇಳಮೈಸೂರಿನಲ್ಲಿ ಸೆ.19ರಂದು ಉದ್ಯೋಗ ಮೇಳ

ಅರ್ಜಿಗಳನ್ನು ಸಲ್ಲಿಸಿ

ಅರ್ಜಿಗಳನ್ನು ಸಲ್ಲಿಸಿ

ಆನ್‌ಲೈನ್ ಮೂಲಕ ಅರ್ಹತಾ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು 9/10/2018 ಕೊನೆ ದಿನ. ಪರೀಕ್ಷೆಗೆ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನ 10/10/2018.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದ ಬಳಿಕ, ಎಲ್ಲಾ ದಾಖಲೆಗಳನ್ನು ಅಪ್‌ ಲೋಡ್ ಮಾಡಿ ಯಾವುದೇ ನಾಗರೀಕ ಸೇವಾ ಕೇಂದ್ರದಲ್ಲಿ ಅಥವ ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳಿಗೆ ವಯೋಮಿತಿ

ಅಭ್ಯರ್ಥಿಗಳಿಗೆ ವಯೋಮಿತಿ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿ 18 ವರ್ಷ ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯ ವಿವರ ಇಲ್ಲಿದೆ.

ಆಯ್ಕೆಯಾದ ಅಭ್ಯರ್ಥಿಗಳು

ಆಯ್ಕೆಯಾದ ಅಭ್ಯರ್ಥಿಗಳು

ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 19ರ ಅನ್ವಯ 3 ವರ್ಷದ ಪರೀಕ್ಷಾರ್ಥ ಅವಧಿ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಿಸಿಕೊಂಡು 2 ವರ್ಷದ ಡಿಪ್ಲೊಮಾ ಇನ್ ಫಾರೆಸ್ಟ್ರಿ ತರಬೇತಿಗೆ ನಿಯೋಜನೆ ಮಾಡಲಾಗುತ್ತದೆ. ಈ ತರಬೇತಿ ಮುಗಿದ ಬಳಿಕ ಒಂದು ವರ್ಷ ಕಾರ್ಯ ತರಬೇತಿಗೆ ನಿಯೋಜನೆ ಮಾಡಲಾಗುತ್ತದೆ.

English summary
Karnataka Public Service Commission (KPSC) issued notification for the recruitment of Assistant Conservator of Forests vacancies. October 9, 2018 last date to submit application for the competitive exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X