ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬಕಾರಿ ಇಲಾಖೆಯಲ್ಲಿ 1180 ಹುದ್ದೆ, ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಕೊನೆ ದಿನ

ರಾಜ್ಯದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಒಟ್ಟು 1180 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಅರ್ಜಿ ಆಹ್ವಾನಿಸಿದೆ ಅರ್ಜಿ ಹಾಕಿ.

By Ramesh
|
Google Oneindia Kannada News

ಬೆಂಗಳೂರು, ಮಾರ್ಚ್. 03 : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ(ಪುರುಷ ಮತ್ತು ಮಹಿಳೆ) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ಅರ್ಜಿ ಆಹ್ವಾನಿಸಿದೆ.

ಒಟ್ಟು 1180 ಹುದ್ದೆಗಳು ಖಾಲಿಯಿದ್ದು, ಆನ್‌ ಲೈನ್‌ ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಆಧಾರ್ ಕಾರ್ಡ್‌ ಹೊಂದಿರುವುದು ಕಡ್ಡಾಯವಾಗಿದೆ. ಇನ್ನು ಈ ಹುದ್ದೆಗಳಿಗೆ ಮಾರ್ಚ್‌ 30 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಸಾಮಾನ್ಯ ಅಭ್ಯರ್ಥಿಗಳು 300 ರು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಗಳಿಗೆ ಹಾಗೂ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 150 ರು. ಶುಲ್ಕ ನಿಗದಿ ಮಾಡಲಾಗಿದೆ.

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಶುಲ್ಕ ಪಾವತಿಸಬಹುದಾಗಿದೆ.

ವೇತನ: ಅಬಕಾರಿ ಉಪನಿರೀಕ್ಷಕರು: 16,000 ರಿಂದ 29,600 ರು.(ತಿಂಗಳಿಗೆ), ಅಬಕಾರಿ ರಕ್ಷಕರು: 11,600 ರಿಂದ 21,000 ರು.(ತಿಂಗಳಿಗೆ) [ಬೆಂಗ್ಳೂರಿನ ಎಚ್ಎಎಲ್ ನಲ್ಲಿ ವಿವಿಧ ಉದ್ಯೋಗ ಅವಕಾಶ]

 ಹುದ್ದೆಗಳ ವರ್ಗೀಕರಣ

ಹುದ್ದೆಗಳ ವರ್ಗೀಕರಣ

ಅಬಕಾರಿ ಉಪನಿರೀಕ್ಷಕರು- 177

ಅಬಕಾರಿ ರಕ್ಷಕರು(ಪುರುಷ)- 952

ಅಬಕಾರಿ ರಕ್ಷಕರು(ಮಹಿಳೆ)- 51

ಒಟ್ಟು 1180 ಹುದ್ದೆಗಳು

ಪರೀಕ್ಷಾ ಶುಲ್ಕ

ಪರೀಕ್ಷಾ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳು 300 ರು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಗಳಿಗೆ 150 ರು.,ಮಾಜಿ ಸೈನಿಕ ಅಭ್ಯರ್ಥಿಗಳಿಗೆ 25 ರು ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ದೇಹದಾರ್ಢ್ಯತೆ

ದೇಹದಾರ್ಢ್ಯತೆ

1. ಎತ್ತರ: ಕನಿಷ್ಠ 163 ಸೆಂ.ಮೀ.(ಮಹಿಳೆ: ಕನಿಷ್ಠ 157 ಸೆಂ.ಮೀ. ಹಾಗೂ 49.9 ಕೆ.ಜಿ. ತೂಕ)
2. ಎದೆಯ ಸುತ್ತಳತೆ ಕನಿಷ್ಠ 81 ಸೆಂ.ಮೀ.
3. ಓಟ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡೆಸೆತಗಳ ಮೂಲಕ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.

ವಯೋಮಿತಿ

ವಯೋಮಿತಿ

ಕನಿಷ್ಠ 18 ಹಾಗೂ ಗರಿಷ್ಠ 26 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯಿದೆ. ಅಬಕಾರಿ ಉಪನಿರೀಕ್ಷಕರ ಹುದ್ದೆಗಳಿಗೆ ಕನಿಷ್ಠ 21 ವರ್ಷ.

ನೇಮಕಾತಿ ಪ್ರಕ್ರಿಯೆ

ನೇಮಕಾತಿ ಪ್ರಕ್ರಿಯೆ

ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ, ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಹಾಗೂ ಮೀಸಲಾತಿ ನಿಯಮಗಳ ಅನ್ವಯ ಅರ್ಹರ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ

ಪರೀಕ್ಷೆ

ಅಬಕಾರಿ ಉಪನಿರೀಕ್ಷಕರು: ಏಪ್ರಿಲ್‌ 30
ಅಬಕಾರಿ ರಕ್ಷಕರು: ಮೇ 7
ಸಾಮಾನ್ಯ ಅಧ್ಯಯನ, ಸಾಮಾನ್ಯ ಕನ್ನಡ ಅಥವಾ ಇಂಗ್ಲಿಷ್‌ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ವಿದ್ಯಾರ್ಹತೆ

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಅಬಕಾರಿ ರಕ್ಷಕರ ಹುದ್ದೆಗಳಿಗೆ ದ್ವಿತಿಯ ಪಿಯುಸಿ (2nd PUC) ಪೂರೈಸಿರಬೇಕು. ಕ್ಲಿಕ್ಕಿಸಿ

English summary
Karnataka Public Service Commission (KPSC), Bengaluru issued Recruitment notification for the post of Excise Sub Inspectors and Excise Guards for Men and Women. Eligible Candidates are required to Apply Online on or before 30th March 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X