ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಸ್‌ಸಿ ಮುಖ್ಯ ಪರೀಕ್ಷೆ 2021 ಮುಂದೂಡಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 19: ಕರ್ನಾಟಕ ಲೋಕಸೇವಾ ಆಯೋಗ ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆ ಒಂದೇ ವಾರದಲ್ಲಿ ನಿಗದಿಯಾಗಿದ್ದು, ಗೊಂದಲ ಉಂಟಾಗಿತ್ತು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿ ಜಿ. ಸತ್ಯವತಿ ಗುರುವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 2021ರ ಜನವರಿ 2 ರಿಂದ 5ರ ತನಕ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಕೆಪಿಎಸ್‌ಸಿ ಮತ್ತೊಂದು ಅಕ್ರಮ ಬಯಲು; ಆಯ್ಕೆ ಪಟ್ಟಿ ರದ್ದು ಕೆಪಿಎಸ್‌ಸಿ ಮತ್ತೊಂದು ಅಕ್ರಮ ಬಯಲು; ಆಯ್ಕೆ ಪಟ್ಟಿ ರದ್ದು

ಹೊಸ ವೇಳಾಪಟ್ಟಿಯಂತೆ 2021ರ ಫೆಬ್ರವರಿ 13 ರಿಂದ 16ರ ತನಕ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಇದರಿಂದಾಗಿ ಮುಖ್ಯ ಪರೀಕ್ಷೆ ಬರೆಯಲು ಹೊರಟಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ನೆಮ್ಮದಿ ಸಿಕ್ಕಿದೆ.

ಕೆಪಿಎಸ್‌ಸಿ ನೇಮಕಾತಿ; ಕೆಎಟಿ ಮಹತ್ವದ ಆದೇಶ ಕೆಪಿಎಸ್‌ಸಿ ನೇಮಕಾತಿ; ಕೆಎಟಿ ಮಹತ್ವದ ಆದೇಶ

KPSC Main Exam 2021 Postponed

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮುಖ್ಯ ಪರೀಕ್ಷೆ ಬರೆಯುವ ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಎರಡೂ ಪರೀಕ್ಷೆಗಳೂ ಒಂದೇ ವಾರ ನಿಗದಿಯಾಗಿದ್ದರಿಂದ ಗೊಂದಲ ಉಂಟಾಗಿತ್ತು.

ಕೆಪಿಎಸ್‌ಸಿ ನೇಮಕಾತಿ; ಮುಖ್ಯ ಪರೀಕ್ಷೆಯ ಅಂಕಗಳು ಇಳಿಕೆಕೆಪಿಎಸ್‌ಸಿ ನೇಮಕಾತಿ; ಮುಖ್ಯ ಪರೀಕ್ಷೆಯ ಅಂಕಗಳು ಇಳಿಕೆ

ಯುಪಿಎಸ್‌ಸಿ ಪರೀಕ್ಷೆಗಳು ನಿಗದಿಯಂತೆ 2021ರ ಜನವರಿಯಲ್ಲಿ ನಡೆಯಲಿವೆ. ಅದೇ ವಾರ ನಿಗದಿಯಾಗಿದ್ದ ಕೆಪಿಎಸ್‌ಸಿ ಪರೀಕ್ಷೆಗಳನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ 'ಎ' ಮತ್ತು 'ಬಿ' ವೃಂದದ ಹುದ್ದೆಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರೀಕ್ಷೆ ಬಗ್ಗೆ ಉಂಟಾಗಿರುವ ಗೊಂದಲ ಬಗೆಹರಿಸುವಂತೆ ಸೂಚನೆ ಕೊಟ್ಟಿದ್ದರು.

English summary
Karnataka Public Service Commission (KPSC) postponed main exam date. As per new order exam will be held on February 13 to 16, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X