ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 24ಕ್ಕೆ ಎಫ್‌ಡಿಎ ಪರೀಕ್ಷೆ; ಪ್ರವೇಶ ಪತ್ರ ಪಡೆಯೋದು ಹೇಗೆ?

|
Google Oneindia Kannada News

ಬೆಂಗಳೂರು, ಜನವರಿ 21: ಕರ್ನಾಟಕ ಲೋಕಸೇವಾ ಆಯೋಗ ಸಹಾಯಕ/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಜನವರಿ 24ರ ಭಾನುವಾರ ಪರೀಕ್ಷೆಗಳು ನಡೆಯಲಿದೆ.

ಕೆಪಿಎಸ್‌ಸಿಯು 2019-20ನೇ ಸಾಲಿನ 1136 (ಉಳಿಕೆ ಮೂಲ ವೃಂದ 998 ಮತ್ತು ಹೈದರಾಬಾದ್ ಕರ್ನಾಟಕ 138) ಹುದ್ದೆಗಳ ಭರ್ತಿಗಾಗಿ ಲಿಖಿತ ಪರೀಕ್ಷೆಗಳನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಒಟ್ಟು 3,74,124 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಕೆಪಿಎಸ್ ಸಿ -2020 ನೇಮಕಾತಿ ಜನವರಿ 23 ಹಾಗೂ 24 ಕ್ಕೆ ಸಹಾಯಕ / ಎಫ್ ಡಿಎ ಪರೀಕ್ಷೆಕೆಪಿಎಸ್ ಸಿ -2020 ನೇಮಕಾತಿ ಜನವರಿ 23 ಹಾಗೂ 24 ಕ್ಕೆ ಸಹಾಯಕ / ಎಫ್ ಡಿಎ ಪರೀಕ್ಷೆ

ಸಹಾಯಕ/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ 2020ರ ಜನವರಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ವಿಳಂಬವಾಗಿ ಪರೀಕ್ಷೆಗಳು ನಡೆಯುತ್ತಿವೆ.

ಕರ್ನಾಟಕ ಪೊಲೀಸ್ ನೇಮಕಾತಿ 2021: 545 ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಪೊಲೀಸ್ ನೇಮಕಾತಿ 2021: 545 ಹುದ್ದೆಗಳಿಗೆ ಅರ್ಜಿ ಆಹ್ವಾನ

 KPSC FDA Exam On January 24 How To Download Admit Card

ಕೆಪಿಎಸ್‌ಸಿ ತನ್ನ ವೆಬ್ ಸೈಟ್‌ನಲ್ಲಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಪ್ ಲೋಡ್ ಮಾಡಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

KSMHA ನೇಮಕಾತಿ 2021: 15 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ KSMHA ನೇಮಕಾತಿ 2021: 15 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಕೊನೆ ಕ್ಷಣದಲ್ಲಿ ಸರ್ವರ್ ಡೌನ್ ಆಗಿ ಅಭ್ಯರ್ಥಿಗಳು ಪರದಾಡುವ ಬದಲು ಬೇಗನೇ ಪ್ರವೇಶ ಪತ್ರವನ್ನು ಪಡೆಯುವುದು ಉತ್ತಮ.

ಪ್ರವೇಶ ಪತ್ರ ಪಡೆಯುವುದು ಹೇಗೆ?; ಪರೀಕ್ಷೆ ಪ್ರವೇಶ ಪತ್ರವನ್ನು ಪಡೆಯಲು ಮೊದಲು ಅಭ್ಯರ್ಥಿಗಳು ವೆಬ್ ಸೈಟ್‌ಗೆ ಭೇಟಿ ನೀಡಬೇಕು.

ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಆಗ ಅಭ್ಯರ್ಥಿಗಳು ಲಾಗಿನ್ ಡಿಟೇಲ್ಸ್, ಯೂಸರ್ ನೇಮ್ ಮತ್ತು ಪಾಸ್ ವರ್ಡ್‌ ಸಹಾಯದಿಂದ ಲಾಗಿನ್ ಆಗಬೇಕು.

ಆಗ ಪ್ರವೇಶ ಪತ್ರ ಸಿಗುತ್ತದೆ. ಅದನ್ನು ಡೌನ್ ಲೋಡ್ ಮಾಡಿಕೊಂಡ ಪ್ರಿಂಟ್ ತೆಗೆದುಕೊಳ್ಳಬೇಕು.

English summary
Written exam for Assistant/ First Division Assistant post will be held on January 24, 2021. How to download admit card from KPSC website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X