ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 28ಕ್ಕೆ ಎಫ್‌ಡಿಎ ಪರೀಕ್ಷೆ; ಹಾಲ್ ಟಿಕೆಟ್ ಪಡೆಯೋದು ಹೇಗೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣಕ್ಕೆ ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಯ ಪರೀಕ್ಷೆಯನ್ನು ಮುಂದೂಡಿತ್ತು. ಫೆಬ್ರವರಿ 28ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ಜನವರಿ 24ರಂದು ಎಫ್‌ಡಿಎ ಪರೀಕ್ಷೆಯನ್ನು ನಿಗದಿ ಮಾಡಲಾಗಿತ್ತು. ಆದರೆ, ಹಿಂದಿನ ದಿನ ಬೆಂಗಳೂರು ನಗರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಪ್ರಶ್ನೆ ಪತ್ರಿಕೆ, ಹಣದೊಂದಿಗೆ ಬಂಧಿಸಿದ್ದರು.

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; ಬೆಳಗಾವಿ ಮೂಲದ ಶಿಕ್ಷಕನ ಬಂಧನ ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; ಬೆಳಗಾವಿ ಮೂಲದ ಶಿಕ್ಷಕನ ಬಂಧನ

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ದಿಢೀರ್ ಎಂದು ಪರೀಕ್ಷೆ ಮುಂದೂಡಲಾಗಿತ್ತು. ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೆನೋಗ್ರಾಫರ್ ಸೇರಿದಂತೆ ಮೂವರನ್ನು ಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದರು.

ದಿನಾಂಕ ಮರು ನಿಗದಿ; ಫೆ.28ರಂದು ನಡೆಯಲಿದೆ ಎಫ್‌ಡಿಎ ಪರೀಕ್ಷೆ ದಿನಾಂಕ ಮರು ನಿಗದಿ; ಫೆ.28ರಂದು ನಡೆಯಲಿದೆ ಎಫ್‌ಡಿಎ ಪರೀಕ್ಷೆ

KPSC 2021 FDA Hall Ticket Released: Here is How to Download

ಫೆಬ್ರವರಿ 28ರಂದು ನಡೆಯುವ ಪರೀಕ್ಷೆಗೆ ಕೆಪಿಎಸ್‌ಸಿ ಹಾಲ್ ಟಿಕೆಟ್ ಬಿಡುಗಡೆ ಮಾಡಿದೆ. ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ವೆಬ್ ಸೈಟ್ ಮೂಲಕ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ.

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ! ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ; 10 ಲಕ್ಷಕ್ಕೆ ಮಾರಾಟ!

ಪ್ರವೇಶ ಪತ್ರ; ಅಭ್ಯರ್ಥಿಗಳು ಮೊದಲು ಕೆಪಿಎಸ್‌ಸಿ ವೆಬ್ ಸೈಟ್‌ಗೆ ಭೇಟಿ ನೀಡಬೇಕು. ಬಳಿಕ ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಎಂಬ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಮೇಲೆ ಕ್ಲಿಕ್ ಮಾಡಿ. ವೆಬ್ ಸೈಟ್ ವಿಳಾಸ http://www.kpsc.kar.nic.in/

ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಆಗ ಅಭ್ಯರ್ಥಿಗಳು ಲಾಗಿನ್ ಡಿಟೇಲ್ಸ್, ಯೂಸರ್ ನೇಮ್ ಮತ್ತು ಪಾಸ್ ವರ್ಡ್‌ ಸಹಾಯದಿಂದ ಲಾಗಿನ್ ಆಗಬೇಕು. ಅರ್ಜಿಗಳನ್ನು ಸಲ್ಲಿಸುವಾಗಲೇ ಯೂಸರ್ ನೇಮ್ ಮತ್ತು ಪಾಸ್ ವರ್ಡ್‌ ನೀಡಲಾಗಿರುತ್ತದೆ.

ಪುಟದಲ್ಲಿ ಕಾಣುವ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

English summary
Karnataka Public Service Commission (KPSC ) FDA exam will be held on February 28, 2021. How to download admit card, Here are the steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X