• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಪಿಎಸ್ ಸಿ -2020 ನೇಮಕಾತಿ ಜನವರಿ 23 ಹಾಗೂ 24 ಕ್ಕೆ ಸಹಾಯಕ / ಎಫ್ ಡಿಎ ಪರೀಕ್ಷೆ

|

ಬೆಂಗಳೂರು, ಜನವರಿ 21: ಸಹಾಯಕ / ಪ್ರಥಮ ದರ್ಜೆ ಸಹಾಯಕ ನೇಮಕಾತಿ ಲಿಖಿತ ಪರೀಕ್ಷೆ ಜ. 23 ಶನಿವಾರ ಮತ್ತು ಜ. 24 ಭಾನುವಾರ ರಾಜ್ಯಾದ್ಯಂತ ನಡೆಯಲಿದೆ.

ಕನ್ನಡ ಪ್ರಥಮ ಭಾಷೆ ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಅರ್ಹತಾ ಪರೀಕ್ಷೆ ಶನಿವಾರ ನಡೆಯಲಿದೆ. ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಪ್ರವೇಶ ಪತ್ರಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಕರ್ನಾಟಕ ವಿವಿಧ ಇಲಾಖೆ ಹಾಗೂ ಕರ್ನಾಟಕ ಭವನ ದೆಹಲಿ ಇಲ್ಲಿ ಖಾಲಿ ಇರುವ ಸಹಾಯಕ ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು.

ಪರೀಕ್ಷೆಗೂ ಮುನ್ನವೇ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರಗಳ ವಿವರ ಪಡೆಯಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ವಿವಿಧ ಇಲಾಖೆಗಳ 1112 ಸಹಾಯಕ / ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕ ಸೇವಾ ಆಯೋಗ ಕಳೆದ ವರ್ಷ ಅರ್ಜಿ ಆಹ್ವಾನಿಸಿತ್ತು‌. ಕರೋನಾ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕ ಪ್ರಕರಟಿಸಿರಲಿಲ್ಲ‌. ಇದೀಗ ಜ. 23 ಹಾಗೂ ಜ. 24 ರಂದು ಸ್ಪರ್ಥಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

English summary
KPSC Exam Date: KPSC has announced exam dates for the recruitment of Assistant/ First Division Assistant (FDA) (RPC & HK) vacancies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X