ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ: ವಿವಿಧ ನ್ಯಾಯಾಲಯಗಳಲ್ಲಿ ಹುದ್ದೆಗಳಿಗೆ ಆಹ್ವಾನ

|
Google Oneindia Kannada News

ಕೊಪ್ಪಳ, ಜೂ. 17: ಕೊಪ್ಪಳ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ. ಬೆರಳಚ್ಚು, ಶೀಘ್ರಲಿಪಿಗಾರ, ಜವಾನ ಮುಂತಾದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಗಾಗಿ ಮಾನವ ಸಂಪನ್ಮೂಲ ಪೂರೈಕೆ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಕೊಪ್ಪಳದ ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶರ ಕಚೇರಿಗೆ ನೇಮಕ ಮಾಡಲಾಗುತ್ತಿದೆ.

ಹುದ್ದೆ ಹೆಸರು, ಹುದ್ದೆ ಸಂಖ್ಯೆ:

  • ಬೆರಳಚ್ಚುಗಾರರು-01,
  • ಜವಾನರು-04
  • ಸೇರಿದಂತೆ ಒಟ್ಟು 05 ಹುದ್ದೆ,

ಕೊಪ್ಪಳ (ಸಿಟ್ಟಿಂಗ್ ಗಂಗಾವತಿ) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿ ಹುದ್ದೆಗಳ ವಿವರ:

  • ಬೆರಳಚ್ಚುಗಾರರು-01,
  • ಅಟೆಂಡರ್-01 ಹಾಗೂ ಜವಾನರು-02
  • ಸೇರಿದಂತೆ ಒಟ್ಟು 04 ಹುದ್ದೆ

ಕೊಪ್ಪಳದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ (ಎಫ್ಟಿಎಸ್ಸಿ-1) ಕಚೇರಿ ಹುದ್ದೆಗಳ ವಿವರ:

  • ಬೆರಳಚ್ಚುಗಾರರು-2,
  • ಅಟೆಂಡರ್-01 ಹಾಗೂ ಜವಾನರು-01
  • ಸೇರಿದಂತೆ ಒಟ್ಟು 04 ಹುದ್ದೆ
Koppal: Applications invited for various Job openings in Court

ಈ ಎಲ್ಲಾ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ.

ಸರ್ಕಾರದ ಆದೇಶದಂತೆ ಅಟೆಂಡರ್, ಜಮೆದಾರ್, ಸ್ವೀಪರ್ ಕಂ ವಾಚ್ಮನ್ ಹುದ್ದೆಗಳನ್ನು ಜವಾನರ (Peons) ಹುದ್ದೆಗಳೆಂದು ವಿಲೀನಗೊಳಿಸಲಾಗಿರುತ್ತದೆ.

ಬೆರಳಚ್ಚುಗಾರರ ಹುದ್ದೆಗೆ ಎಸ್ಎಸ್ಎಲ್ಸಿ ಉತ್ತೀರ್ಣದ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಸೀನಿಯರ್ ಪರೀಕ್ಷೆ ಪಾಸಾಗಿರಬೇಕು. ಜವಾನರ ಹುದ್ದೆಗೆ ಎಸ್ಎಸ್ಎಲ್ಸಿ ಪಾಸಾಗಿರಬೇಕು.

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕನ್ನಡ, ಆಂಗ್ಲ ಭಾಷೆಯ ಹಿರಿಯ ದರ್ಜೆ (senior grade) ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ದರ್ಜೆ (senior grade) ಶೀಘ್ರಲಿಪಿ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಕಂಪ್ಯೂಟರ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಬೆರಳಚ್ಚು ಮಾಡುವ ಜ್ಞಾನವು ಅವಶ್ಯವಾಗಿರುತ್ತದೆ.

ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ/2ಬಿ/3ಎ/3ಬಿ 38 ವರ್ಷ, ಪ.ಜಾ/ಪ.ಪಂ/ಪ್ರವರ್ಗ -1ಕ್ಕೆ 40 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿಯಲ್ಲಿ ವಿನಾಯಿತಿ ಬಗ್ಗೆ ತಿಳಿಯಲು ಅಧಿಸೂಚನೆ ಹಾಗೂ ಕಚೇರಿಯಲ್ಲಿ ವಿಚಾರಿಸತಕ್ಕದ್ದು.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 200 ರೂ.ಗಳು.
  • ಪ.ಜಾ/ಪ.ಪಂ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಈ ಎಲ್ಲಾ ವಿವರಗಳು ಹಾಗೂ ಅರ್ಜಿ ಸಲ್ಲಿಕೆ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಿಂದ ಪಡೆದುಕೊಳ್ಳಬಹುದು.

ಏಜೆನ್ಸಿಗಳ ಗಮನಕ್ಕೆ:
ಅರ್ಹ ಆಸಕ್ತ ಮಾನವ ಸಂಪನ್ಮೂಲ ಏಜೆನ್ಸಿಗಳು ಟೆಂಡರ್ ಸಲ್ಲಿಸುವಾಗ, ಯಾವ ನ್ಯಾಯಾಲಯಕ್ಕೆ ಸಂಬಂಧಿಸಿದ್ದು ಎಂದು ಲಕೋಟೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

ಮುಚ್ಚಿದ ಲಕೋಟೆಯಲ್ಲಿ ಟೆಂಡರ್‌ಅನ್ನು ಜುಲೈ 11 ರಂದು ಸಂಜೆ 05 ಗಂಟೆಯ ಒಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಕೊಪ್ಪಳ ಇವರಿಗೆ ಸಲ್ಲಿಸಬೇಕು.

ಟೆಂಡರ್‌ಗಳನ್ನು ಬಿಡ್ದಾರರ ಸಮಕ್ಷಮ ಜುಲೈ 12 ರಂದು ಸಂಜೆ 5.30 ಗಂಟೆಗೆ ತೆರೆಯಲಾಗುವುದು. ಷರತ್ತುಗಳು ಹಾಗೂ ಹೆಚ್ಚಿನ ಮಾಹಿತಿಯನ್ನು ಇದೇ ನ್ಯಾಯಾಲಯದ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

English summary
Koppal: Applications invited from eligible and interested candidates to fill up Peon, Stenographer and other Posts at various court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X