ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಮಾಹಿತಿ; ಧಾರವಾಡ, ಕೊಪ್ಪಳದಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನ

|
Google Oneindia Kannada News

ಬೆಂಗಳೂರು, ಜುಲೈ 06; ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನಿರುದ್ಯೋಗಿ ಯುವಕ/ ಯುವತಿಯರು ಈ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಜುಲೈ 8ರಂದು ಬೆಳಗ್ಗೆ 10.30 ರಿಂದ 3.30ರ ತನಕ ವಾಕ್ ಇನ್ ಇಂಟರ್‌ ವ್ಯೂ ಆಯೋಜನೆ ಮಾಡಿದೆ. ಬೆಂಗಳೂರಿನ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿ. ಇದರಲ್ಲಿ ಪಾಲ್ಗೊಳ್ಳುತ್ತಿದೆ.

ಬಿಎಂಟಿಸಿ ನೇಮಕಾತಿ; ಜುಲೈ 8ರೊಳಗೆ ಅರ್ಜಿ ಹಾಕಿ ಬಿಎಂಟಿಸಿ ನೇಮಕಾತಿ; ಜುಲೈ 8ರೊಳಗೆ ಅರ್ಜಿ ಹಾಕಿ

ಎಸ್. ಎಸ್. ಎಲ್. ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪೂರ್ಣಗೊಳಿಸಿದ 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಸ್ವ-ವಿವರದ ಮಾಹಿತಿ, ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು.

ಅಗ್ನಿಪಥ್ ಅಡಿ ನೌಕಾಪಡೆಯ 2800 ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅಗ್ನಿಪಥ್ ಅಡಿ ನೌಕಾಪಡೆಯ 2800 ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

Koppal And Dharwad District Job News Apply For Various Post

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ದೂರವಾಣಿ ಸಂಖ್ಯೆಗಳು 9901059256, 08539-220859.

ಧಾರವಾಡದಲ್ಲಿ ಸಂದರ್ಶನ; ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕುಟುಂಬ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಜುಲೈ 20ರಂದು ಸಂದರ್ಶನ ಆಯೋಜನೆ ಮಾಡಲಾಗಿದೆ.

ಶಿವಮೊಗ್ಗ ಕೋರ್ಟ್‌ನಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಹಾಕಿ ಶಿವಮೊಗ್ಗ ಕೋರ್ಟ್‌ನಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಹಾಕಿ

ತಾತ್ಕಾಲಿಕ ಹುದ್ದೆಗಳಿಗೆ ಗೃಹ ವಿಜ್ಞಾನ, ಸಮುದಾಯ ವಿಜ್ಞಾನ ಹಾಗೂ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳ ಎರಡು ದೃಢಿಕೃತ ಪ್ರತಿಗಳೊಂದಿಗೆ ಜುಲೈ 20 ರಂದು ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕು.

ವಿಳಾಸ; ವಿದ್ಯಾಧಿಕಾಗಳು, ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಧಾರವಾಡ.

ಅರೆಕಾಲಿಕ ಶಿಕ್ಷಕ ಹುದ್ದೆ; ಧಾರವಾಡದ ಕೃಷಿ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದಲ್ಲಿ ಕೃಷಿ ಉತ್ಪಾದನೆ ಅರ್ಥಶಾಸ್ತ್ರ ವಿಷಯವನ್ನು ಬೋಧಿಸಲು ಅರೆಕಾಲಿಕ ಶಿಕ್ಷಕ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಜುಲೈ 14ರಂದು ಬೆಳಗ್ಗೆ 11 ಗಂಟೆಗೆ ಕೃಷಿ ಡೀನ್ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

ಕ್ಯಾಂಪಸ್ ಸಂದರ್ಶನ; ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಟಣಕನಕಲ್)ಯಲ್ಲಿ ಮೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಬೆಂಗಳೂರು ಹಿಂದಿನ ವರ್ಷಗಳಲ್ಲಿ ಐಟಿಐ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹಾಗೂ ಪ್ರಸ್ತುತ ಸಾಲಿನ ಅಂತಿಮ ವರ್ಷದ (ಎನ್ಸಿವಿಟಿ/ ಎಸ್ಸಿವಿಟಿ) ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಿದೆ.

ಕ್ಯಾಂಪಸ್ ಸಂದರ್ಶನದ ಭಾಗವಾಗಿ ಜುಲೈ 11 ರಂದು ಬೆಳಗ್ಗೆ 09 ಗಂಟೆಗೆ ಲಿಖಿತ ಪರೀಕ್ಷೆ ಹಾಗೂ ಜುಲೈ 12 ರಂದು ಆನ್‌ಲೈನ್ ಮೂಲಕ ಮೌಖಿಕ ಪರೀಕ್ಷೆಯನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್) ಇಲ್ಲಿ ನಡೆಸಲಾಗುತ್ತದೆ.

ಹಿಂದಿನ ವರ್ಷ ಐಟಿಐ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹಾಗೂ ಪ್ರಸ್ತುತ ಸಾಲಿನ ಅಂತಿಮ ವರ್ಷದ ಐಟಿಐ (ಎನ್ಸಿವಿಟಿ/ ಎಸ್ಸಿವಿಟಿ) ವಿದ್ಯಾರ್ಥಿಗಳಿಗೆ Electrician, Fitter, Turner, Mechanic Motor Vehicle, Mechanic Diesel, Tool & Die making (Jigs & Fixtures), Diesel Mechanic, Electronic Mechanic, Machinist & Welder ವೃತ್ತಿಗಳ ತರಬೇತಿ ನೀಡಲಾಗುತ್ತದೆ.

ಅಭ್ಯರ್ಥಿಗಳು ಎಸ್. ಎಸ್. ಎಲ್‌. ಸಿ. ಯಲ್ಲಿ ಶೇ.40 ಕ್ಕಿಂತ ಹೆಚ್ಚು ಹಾಗೂ ಐಟಿಐ ನಲ್ಲಿ ಶೇ.50 ಮೇಲ್ಪಟ್ಟು ಅಂಕಗಳನ್ನು ಪಡೆದಿರನೇಕು. ವಯೋಮಿತಿ 18 ರಿಂದ 23 ವರ್ಷ (24 ರಿಂದ 25 ವಯಸ್ಸಿನ ಅಭ್ಯರ್ಥಿಗಳಿಗೆ ಸೀಮಿತ ಅವಕಾಶ).

ಆಸಕ್ತರು ತಮ್ಮ ಆಧಾರ್ ಕಾರ್ಡ, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ 2 ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ) ಇವರನ್ನು ಸಂಪರ್ಕಿಸಬಹುದು.

English summary
Apply for various jobs at Koppal and Dharwad district of Karnataka. Candidates can make use of this job opportunity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X