• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

|

ಕೋಲಾರ, ಅಕ್ಟೋಬರ್ 20 : ಕೋಲಾರ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ತಕ್ಷಣ 5000 ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಪೋರ್ಟಲ್‍ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟಾನ್ ಮತ್ತು ಹೋಂಡಾ ಕಂಪನಿಗಳಲ್ಲಿ ತಕ್ಷಣಕ್ಕೆ 5000 ಉದ್ಯೋಗಾವಕಾಶ ಮತ್ತು ಮುಂದಿನ 12 ತಿಂಗಳಲ್ಲಿ 25 ಸಾವಿರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

SSC ನೇಮಕಾತಿ 2020: ವಿವಿಧ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಉದ್ಯೋಗಾವಕಾಶಗಳ ಬಗ್ಗೆ ಕೌಶಲ್ಯಾಭಿವೃದ್ಧಿ ಅಥವಾ ತರಬೇತಿಯ ಹೆಚ್ಚಿನ ಮಾಹಿತಿಗಾಗಿ ಕೌಶಲ್ಯಾಭಿವೃದ್ದಿ ಇಲಾಖೆಯ skillconnect.kaushalkar.com ಪೋರ್ಟಲ್‍ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಆರೋಗ್ಯ ಇಲಾಖೆ; ತಾತ್ಕಾಲಿಕವಾಗಿ ನೇಮಕಾತಿ ಆದವರಿಗೆ ಸಿಹಿ ಸುದ್ದಿ

ಐಫೋನ್ ತಯಾರಿಕಾ ಕಂಪನಿ; ತೈಮಾನ್‌ನ ಮೆ.ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿಯ ಪ್ರತಿನಿಧಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದರು. ಕೋಲಾರ ಜಿಲ್ಲೆಯ ನರಸಾಪುರದಲ್ಲಿ 3 ಸಾವಿರ ಕೋಟಿ ರೂ. ಹೂಡಿಕೆಗೆ ಸರ್ಕಾರ ಒಪ್ಪಿಗೆ ನೀಡಿತ್ತು.

BECIL ನೇಮಕಾತಿ 2020: 1500 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

43 ಎಕರೆ ಪ್ರದೇಶದಲ್ಲಿ ಐಫೋನ್ ತಯಾರಿಕಾ ಘಟಕ ಆರಂಭವಾಗಿದೆ. ಆರಂಭದಲ್ಲಿ 10,500 ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿತ್ತು.

ಹೋಂಡಾ ಕಂಪನಿ ಸಹ ಕೋಲಾರದಲ್ಲಿ 2013ರಲ್ಲಿಯೇ ಘಟಕ ಆರಂಭಿಸಿದೆ. ಕರ್ನಾಟಕದಲ್ಲಿ ಕಂಪನಿ ಆರಂಭಿಸಿರುವ 3ನೇ ಘಟಕವಿದು. 96 ಎಕರೆ ಪ್ರದೇಶದಲ್ಲಿರುವ ಘಟಕಕ್ಕೆ 1350 ಕೋಟಿ ಹೂಡಿಕೆ ಮಾಡಲಾಗಿದೆ.

English summary
Wistron and Honda recruitment for various post in Narasapura industrial area of Kolar. More than 25,000 post will fill in next three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X