ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ, ಹೈದರಾಬಾದ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಐಟಿ ಉದ್ಯೋಗಿಗಳು

|
Google Oneindia Kannada News

ಪುಣೆ ಮತ್ತು ಹೈದರಾಬಾದ್ ನಗರಗಳಿಗೆ ತಂತ್ರಜ್ಞಾನ ವೃತ್ತಿಪರರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಐಟಿ ಮೂಲಸೌಕರ್ಯ, ಕಡಿಮೆ ಟ್ರಾಫಿಕ್ ದಟ್ಟಣೆ ಮತ್ತು ಉತ್ತಮ ಗುಣಮಟ್ಟದ ಜೀವನದಂತಹ ವಿಷಯಗಳು ಪುಣೆಯನ್ನು ಟೆಕ್ ಪ್ರತಿಭೆಗಳಿಗೆ ಆಯ್ಕೆಯ ಅಗ್ರ ನಗರವನ್ನಾಗಿ ಮಾಡಿವೆ, ದೊಡ್ಡ ಐಟಿ ಕಂಪನಿಗಳು ತಮ್ಮ ಕಚೇರಿಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವುದು ಮತ್ತು ಕಡಿಮೆ ಜೀವನ ವೆಚ್ಚ ತಾಂತ್ರಿಕ ವೃತ್ತಿಪರ ಆದ್ಯತೆಯ ನಗರಗಳಲ್ಲಿ ಎರಡನೇ ಸ್ಥಾನ ಪಡೆಯಲು ಅವಕಾಶ ಮಾಡಿಕೊಟ್ಟಿತು.

'ಮುಂದಿನ ನಗರ ಯಾವುದು? 2022: ಭಾರತದಲ್ಲಿ ಟೆಕ್ ಟ್ಯಾಲೆಂಟ್‌ನ ವಲಸೆಯನ್ನು ನಿರ್ಧರಿಸುವ ಅಂಶಗಳ ಬಗ್ಗೆ ಜಾಗತಿಕ ನೇಮಕಾತಿ ಸಂಸ್ಥೆ ಕ್ಯಾಟೆನಾನ್‌ ಮಾಹಿತಿ ಪ್ರಕಾರ, ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಟೆಕ್ ಉದ್ಯೋಗಿಗಳು ಹೆಚ್ಚಿನ ಸಂಬಳವನ್ನು ಪಡೆಯುತ್ತಿದ್ದಾರೆ. ಚೆನ್ನೈ ಪ್ರಮುಖ ಟೆಕ್ ಸಂಸ್ಥೆಗಳನ್ನು ಹೊಂದಿದೆ ಮತ್ತು ದೇಶದ SaaS ಹಬ್ ಎಂದು ಹೇಳಲಾದರು, ದೇಶದ ವಿವಿಧ ಭಾಗಗಳಿಂದ ಚೆನ್ನೈಗೆ ವಲಸೆ ಬರುವ ವೃತ್ತಿಪರರು ಅಲ್ಲಿನ ಆಹಾರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಬೆಂಗಳೂರಿನ ನಂತರ, ವಾಣಿಜ್ಯ ರಾಜಧಾನಿ ಮುಂಬೈ ಮಧ್ಯಮ ಮಟ್ಟದ ಮತ್ತು ಹಿರಿಯ ಮಟ್ಟದ ವೃತ್ತಿಪರರಿಗೆ ಉತ್ತಮ ಸಂಬಳ ನೀಡುತ್ತದೆ. ಉತ್ತಮ ಸಂಬಳವನ್ನು ನೀಡುತ್ತಿದ್ದರೂ, ಮಾಲಿನ್ಯ ಮತ್ತು ಸುರಕ್ಷತೆಯ ಕಾಳಜಿಯಿಂದಾಗಿ ಟೆಕ್ ವೃತ್ತಿಪರರು ದೆಹಲಿಗೆ ಕಡಿಮೆ ಆದ್ಯತೆ ನೀಡುತ್ತಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಸಂಬಳ ಸಿಕ್ಕರೂ ವಿಪರೀತ ಟ್ರಾಫಿಕ್ ಸಮಸ್ಯೆ, ದುಬಾರಿ ಜೀವನ ಮಟ್ಟ ಟೆಕ್ಕಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

 ಗುಣಮಟ್ಟದ ಜೀವನಕ್ಕೆ ಮೊದಲ ಆದ್ಯತೆ

ಗುಣಮಟ್ಟದ ಜೀವನಕ್ಕೆ ಮೊದಲ ಆದ್ಯತೆ

"ಟೆಕ್ ಪ್ರತಿಭೆಗಳು ಇಂದು ಉದ್ಯೋಗಕ್ಕಿಂತ ಹೆಚ್ಚಿನದನ್ನು ಹುಡುಕುತ್ತಿದ್ದಾರೆ, ಉದ್ಯೋಗಿಗಳು ಉತ್ತಮ ಕೆಲಸ-ಜೀವನದ ಸಮತೋಲನ, ಸುಧಾರಿತ ಜೀವನ ಗುಣಮಟ್ಟ, ಉತ್ತಮ ಮೂಲಸೌಕರ್ಯವನ್ನು ಬಯಸುತ್ತಾರೆ. ಆದ್ದರಿಂದ ಕೆಲಸ ಮಾಡುವ ನಗರವನ್ನು ನಿರ್ಧರಿಸುವಲ್ಲಿ ಸಂಬಳದ ಜೊತೆ, ಇತರೆ ವಿಚಾರಗಳು ಕೂಡ ಮುಖ್ಯಪಾತ್ರ ವಹಿಸುತ್ತವೆ. ತಮ್ಮ ಇಷ್ಟದ ನಗರಗಳಲ್ಲಿ ಕೆಲಸ ಮಾಡುವ ಅವಕಾಶಕ್ಕಾಗಿ ತಮ್ಮ ನಗರವನ್ನು ಆಯ್ಕೆ ಮಾಡಿಕೊಳ್ಳಲು ಸಂಬಳದಲ್ಲಿ ಚೌಕಾಸಿಗೂ ಮುಂದಾಗಿದ್ದಾರೆ" ಎಂದು ಕ್ಯಾಟೆನಾನ್‌ನ ವ್ಯವಸ್ಥಾಪಕ ನಿರ್ದೇಶಕ (ಏಷ್ಯಾ-ಪೆಸಿಫಿಕ್) ಗೌರವ್ ಚತ್ತೂರ್ ಹೇಳಿದರು.

 2025ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮೌಲ್ಯ ನಿರೀಕ್ಷೆ

2025ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮೌಲ್ಯ ನಿರೀಕ್ಷೆ

ಐಟಿ ಮತ್ತು ವ್ಯಾಪಾರ ಸೇವಾ ಉದ್ಯಮದ ಆದಾಯವು ಶೇಕಡ 15.5ರಷ್ಟು ಹೆಚ್ಚಾಗಿದೆ ಮತ್ತು 2022 ರಲ್ಲಿ 227 ಶತಕೋಟಿ ಡಾಲರ್ ಆದಾಯವನ್ನು ದಾಟಿದೆ ಮತ್ತು 2026 ರ ವೇಳೆಗೆ 350 ಶತಕೋಟಿ ಡಾಲರ್ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. 2022ರ ಆರ್ಥಿಕವರ್ಷದಲ್ಲಿ ಐಟಿ ಉದ್ಯಮವು ಕೇವಲ ಅರ್ಧ ಮಿಲಿಯನ್ ಹೊಸ ಉದ್ಯೋಗ ಸೃಷ್ಠಿಮಾಡಿದೆ. 2025 ರ ವೇಳೆಗೆ, ಭಾರತದ ಒಟ್ಟಾರೆ ಡಿಜಿಟಲ್ ವಲಯವು 1 ಟ್ರಿಲಿಯನ್ ಡಾಲರ್ ಮೌಲ್ಯವನ್ನು ದಾಟುತ್ತದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರತದ ಟೆಕ್ ವಲಯವು ಸೆಪ್ಟೆಂಬರ್ 2021 ರಿಂದ ಫೆಬ್ರವರಿ 2022 ರವರೆಗೆ ನೇಮಕಾತಿಯಲ್ಲಿ ಶೇಕಡ 74ರಷ್ಟು ಬೆಳವಣಿಗೆಯನ್ನು ಕಂಡಿದೆ. ಯುಎಸ್‌ ಡಾಲರ್‌ ಮೌಲ್ಯ 80 ರುಪಾಯಿಗೆ ಹೆಚ್ಚಳವಾಗಿರುವುದರಿಂದ, ಯುಎಸ್‌ ತಮ್ಮ ಆದಾಯದ ಅರ್ಧಕ್ಕಿಂತ ಹೆಚ್ಚು ಕೊಡುಗೆ ನೀಡುವುದರಿಂದ ಭಾರತೀಯ ಟೆಕ್ ಕಂಪನಿಗಳು ಲಾಭದಾಯಕವಾಗಿವೆ.

 ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಭಾರತದ ಐಟಿ ವಲಯಕ್ಕೆ ಲಾಭ

ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಭಾರತದ ಐಟಿ ವಲಯಕ್ಕೆ ಲಾಭ

ಅಮೆರಿಕ ಭಾರತೀಯ ತಂತ್ರಜ್ಞಾನ ಸೇವೆಗಳ ಅತಿ ದೊಡ್ಡ ಆಮದುದಾರನಾಗಿ ಮುಂದುವರೆದಿದೆ, ಭಾರತೀಯ ತಂತ್ರಜ್ಞಾನ ಮತ್ತು ಬಿಪಿಎಂ (BPM) ರಫ್ತುಗಳಲ್ಲಿ ಶೇಕಡ 62 ಕ್ಕಿಂತ ಹೆಚ್ಚು ಪಾಲು ಹೊಂದಿದೆ.

"ರಷ್ಯಾದಿಂದ ಟೆಕ್ ದೈತ್ಯರ ನಿರ್ಗಮನ ಮತ್ತು ಉಕ್ರೇನ್‌ನಲ್ಲಿನ ಅವರ ವಿತರಣಾ ಕೇಂದ್ರಗಳ ಕಾರ್ಯಾಚರಣೆಯಲ್ಲಿನ ಅಡಚಣೆಗಳು ಈ ಎರಡು ಪ್ರದೇಶಗಳಿಂದ 100,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸ್ಥಳಾಂತರಿಸಲು ಕಾರಣವಾಗಿವೆ. ಈ ಉದ್ಯೋಗಗಳಲ್ಲಿ ಹೆಚ್ಚಿನ ಶೇಕಡಾವಾರು ಭಾರತಕ್ಕೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ" ಎಂದು ಚತ್ತೂರ್ ಹೇಳಿದರು.

 ಉದ್ಯೋಗಿಗಳ ಅನುಕೂಲಕ್ಕಾಗಿ ಹೈಬ್ರಿಡ್ ಮಾದರಿ

ಉದ್ಯೋಗಿಗಳ ಅನುಕೂಲಕ್ಕಾಗಿ ಹೈಬ್ರಿಡ್ ಮಾದರಿ

ಭಾರತದಲ್ಲಿನ ತಂತ್ರಜ್ಞಾನ ಕಂಪನಿಗಳು ಹೈಬ್ರಿಡ್, ಬ್ಯಾಕ್-ಟು-ಆಫೀಸ್ ಮತ್ತು ಸಂಪೂರ್ಣ ರಿಮೋಟ್ ಕೆಲಸದ ಮಾದರಿಗಳ ಮಿಶ್ರಣವನ್ನು ಅಳವಡಿಸಿಕೊಳ್ಳುತ್ತಿವೆ. ಹೆಚ್ಚಿನ ಕಂಪನಿಗಳು ಉದ್ಯೋಗಿಗಳನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಕೆಲಸದ ಸ್ಥಳಕ್ಕೆ ಬರುವಂತೆ ಕೇಳುತ್ತಿವೆ ಮತ್ತು ಇತರ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುತ್ತವೆ.

ಈ ಸಂದರ್ಭದಲ್ಲಿ, ಎಲ್ಲಾ ಗಾತ್ರದ ಕಂಪನಿಗಳು ಕಾರ್ಯಾಚರಣೆಗಳನ್ನು ಸ್ಥಾಪಿಸಲು ಸೂಕ್ತವಾದ ನಗರವನ್ನು ನಿರ್ಧರಿಸಲು ಪ್ರತಿಭೆಯ ಲಭ್ಯತೆ, ಬೇಡಿಕೆಯ ತೀವ್ರತೆ, ನಗರ ಆದ್ಯತೆಯ ಸೂಚ್ಯಂಕ ಮತ್ತು ಪ್ರಚಲಿತ ಕೆಲಸದ ಮಾದರಿಗಳಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಚಂಡೀಗಢ, ಅಹಮದಾಬಾದ್, ಲಕ್ನೋ ಮತ್ತು ಕೊಯಮತ್ತೂರಿನಂತಹ 2ನೇ ಶ್ರೇಣಿ ನಗರಗಳು ಟೆಕ್ ಪ್ರತಿಭೆಗಳ ನಡುವೆ ಹೆಚ್ಚು ಜನಪ್ರಿಯವಾಗುತ್ತಿವೆ. ಸರ್ಕಾರದ ನೇತೃತ್ವದ ಕ್ರಮಗಳ, ಸುಧಾರಿತ ಜೀವನ ಗುಣಮಟ್ಟ ಮತ್ತು ಬೆಳೆಯುತ್ತಿರುವ ಪ್ರತಿಭೆ ಲಭ್ಯತೆಯಿಂದಾಗಿ ಜನ ಈ ನಗರಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಚತ್ತೂರ್ ಹೇಳಿದರು.

English summary
A New Survey Finds That, Pune and Hyderabad are the cities most preferred by technology professionals. Tech talent today is looking for more than just a job, they want a good work-life balance, an improved quality of life, access to good infrastructure and amenities. Parameters like IT infrastructure, less traffic congestion and better quality of life make Pune the top city of choice for tech talent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X