India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ಲಕ್ಷ ಸರಕಾರಿ ಉದ್ಯೋಗಗಳು, ಯಾವ್ಯಾವ ಇಲಾಖೆಗಳಲ್ಲಿ ನೇಮಕ?

|
Google Oneindia Kannada News

ನವದೆಹಲಿ, ಜೂನ್ 20: ಸರಕಾರಿ ಕೆಲಸಕ್ಕಾಗಿ ತಹತಹಿಸುವ ಜನರಿಗೆ ಕೇಂದ್ರ ಸರಕಾರ ಇತ್ತೀಚೆಗೆ ಭಾರೀ ಸಿಹಿ ಸುದ್ದಿ ನೀಡಿದೆ. ಮುಂದಿನ 18 ತಿಂಗಳಲ್ಲಿ, ಅಂದರೆ ಒಂದೂವರೆ ವರ್ಷದ ಅವಧಿಯೊಳಗೆ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ.

"ಸರಕಾರದ ಎಲ್ಲಾ ಇಲಾಖೆ ಮತ್ತು ಸಚಿವಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಸ್ಥಿತಿಯನ್ನು ಪರಾಮರ್ಶಿಸಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರ ನೇಮಕಾತಿ ಮಾಡುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಬೇಕೆಂದು ಸೂಚಿಸಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದರು.

ಶಾಲೆಗಳಿಗೆ 5 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆಶಾಲೆಗಳಿಗೆ 5 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ

2020ರ ಮಾರ್ಚ್ 1ರ ವೇಳೆ ಕೇಂದ್ರದ ಎಲ್ಲಾ ಸಚಿವಾಲಯಗಳನ್ನು ಪರಿಗಣಿಸಿದಾಗ ಒಟ್ಟು 8.7 ಲಕ್ಷ ಹುದ್ದೆಗಳು ನೇಮಕಾತಿ ಆಗದೇ ಖಾಲಿ ಇರುವ ಅಂಶ ಸರಕಾರದ ದತ್ತಾಂಶದಿಂದ ವೇದ್ಯವಾಗಿತ್ತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ಸಂಸತ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿಗಳು ಸೇರಿದಂತೆ 9 ಲಕ್ಷ ಹುದ್ದೆಗಳು ಖಾಲಿ ಇವೆ.

ಅತಿಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆಗಳು

ಅತಿಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆಗಳು

ಸರಕಾರಿ ಡಾಟಾ ಪ್ರಕಾರ ಭಾರತೀಯ ರೈಲ್ವೆ, ರಕ್ಷಣಾ ಇಲಾಖೆ, ಅಂಚೆ ಇಲಾಖೆ, ಗೃಹ ಇಲಾಖೆ ಮತ್ತು ಕಂದಾಯ ಇಲಾಖೆ ಈ ಐದು ಇಲಾಖೆಗಳಲ್ಲೇ ಅತಿ ಹೆಚ್ಚು ಹುದ್ದೆಗಳು ನೇಮಕಾತಿ ಆಗದೇ ಖಾಲಿ ಇವೆ ಎಂಬ ಮಾಹಿತಿ ಇದೆ. ನೇಮಕಾತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ಮುಗಿಸಬೇಕೆಂದು ಪ್ರಧಾನಿ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಐದು ಇಲಾಖೆಗಳ ಪ್ರಕಟಣೆ ಬಗ್ಗೆ ಉದ್ಯೋಗಾಂಕ್ಷಿಗಳು ಹೆಚ್ಚು ಗಮನ ಇರಿಸುವುದು ಉತ್ತಮ.

ಜೂ 24ರಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ ನೇಮಕಾತಿ ಶುರುಜೂ 24ರಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ ನೇಮಕಾತಿ ಶುರು

ಯಾವ್ಯಾವ ಗುಂಪಿನಲ್ಲಿ ಎಷ್ಟು ಖಾಲಿ ಇದೆ?

ಯಾವ್ಯಾವ ಗುಂಪಿನಲ್ಲಿ ಎಷ್ಟು ಖಾಲಿ ಇದೆ?

ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಸುಮಾರು 40 ಲಕ್ಷದಷ್ಟು ಹುದ್ದೆಗಳಿಗೆ ಅನುಮತಿ ಇದೆ. ಆದರೆ, ಸರಕಾರಿ ಉದ್ಯೋಗಿಗಳಿರುವುದು 32 ಲಕ್ಷಕ್ಕಿಂತ ಕಡಿಮೆಯೇ. ಎಂಟು ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಇನ್ನಷ್ಟೇ ಆಗಬೇಕಿದೆ. ಖಾಲಿ ಇರುವ ಇಷ್ಟು ಹುದ್ದೆಗಳಲ್ಲಿ ಗ್ರೂಪ್ ಸಿ ಮಟ್ಟದ ಹುದ್ದೆಗಳೇ ಬಹುತೇಕ ಇರುವುದು. ಸಿ ಗ್ರೂಪ್‌ನಲ್ಲಿ ಬರೋಬ್ಬರಿ 7.56 ಲಕ್ಷ ಹುದ್ದೆಗಳು ಖಾಲಿ ಇವೆ. ಅದು ಬಿಟ್ಟರೆ ಗ್ರೂಪ್ ಬಿ ಮತ್ತು ಗ್ರೂಪ್ ಎ ನಲ್ಲಿ ಕ್ರಮವಾಗಿ 94,842 ಮತ್ತು 21,255 ಹುದ್ದೆಗಳು ಖಾಲಿ ಇವೆ.

ರೈಲ್ವೆ, ಸಿವಿಲ್ ಡಿಫೆನ್ಸ್‌ನಲ್ಲಿರುವ ಹುದ್ದೆಗಳು

ರೈಲ್ವೆ, ಸಿವಿಲ್ ಡಿಫೆನ್ಸ್‌ನಲ್ಲಿರುವ ಹುದ್ದೆಗಳು

ಭಾರತೀಯ ರೈಲ್ವೆ ಇಲಾಖೆಗೆ 15 ಲಕ್ಷ ಹುದ್ದೆಗಳಿಗೆ ಅನುಮತಿ ಕೊಡಲಾಗಿದೆ. ಇದರಲ್ಲಿ 2.3 ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನು ರಕ್ಷಣಾ ಇಲಾಖೆಯ ನಾಗರಿಕ ವಿಭಾಗದಲ್ಲಿ ಅನುಮತಿಸಲಾದ 6.33 ಲಕ್ಷ ಹುದ್ದೆಗಳ ಪೈಕಿ 2.5 ಲಕ್ಷ ಹುದ್ದೆಗಳಿಗೆ ಇನ್ನೂ ನೇಮಕಾತಿ ಆಗಿಲ್ಲ.

ಅಂಚೆ, ಕಂದಾಯ ಮತ್ತು ಗೃಹ ಇಲಾಖೆಯಲ್ಲಿ ನೇಮಕಾತಿ

ಅಂಚೆ, ಕಂದಾಯ ಮತ್ತು ಗೃಹ ಇಲಾಖೆಯಲ್ಲಿ ನೇಮಕಾತಿ

ಅಂಚೆ ಇಲಾಖೆಯಲ್ಲಿ ನಿಗದಿ ಮಾಡಲಾಗಿರುವ 2.67 ಲಕ್ಷ ಹುದ್ದೆಗಳ ಪೈಕಿ 90 ಸಾವಿರದಷ್ಟು ಹುದ್ದೆಗಳು ಖಾಲಿ ಇವೆ. ಹಾಗೆಯೇ, ಕಂದಾಯ ಇಲಾಖೆಯಲ್ಲಿ ಸ್ಯಾಂಕ್ಷನ್ ಆಗಿರುವ 1.78 ಲಕ್ಷ ಉದ್ಯೋಗಿಗಳ ಪೈಕಿ 74 ಸಾವಿರ ಹುದ್ದೆಗಳಿಗೆ ನೇಮಕಾತಿ ಆಗಬೇಕಿದೆ. ಇನ್ನು, ಗೃಹ ಇಲಾಖೆಯಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 10.8 ಲಕ್ಷ ಇರಬೇಕಿದ್ದು, 1.3 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ.

ಅತಿಹೆಚ್ಚು ಹುದ್ದೆಗಳು ಖಾಲಿ ಇರುವ ಇಲಾಖೆಗಳು

ಅತಿಹೆಚ್ಚು ಹುದ್ದೆಗಳು ಖಾಲಿ ಇರುವ ಇಲಾಖೆಗಳು

1) ಸಿವಿಲ್ ಡಿಫೆನ್ಸ್: 2.47 ಲಕ್ಷ
2) ಭಾರತೀಯ ರೈಲ್ವೆ: 2.37 ಲಕ್ಷ
3) ಗೃಹ ಸಚಿವಾಲಯ: 1.28 ಲಕ್ಷ
4) ಅಂಚೆ ಇಲಾಖೆ: 90,050
5) ಕಂದಾಯ ಇಲಾಖೆ: 74,000
6) ಆಡಿಟ್, ಅಕೌಂಟ್ ಇಲಾಖೆ: 28,237

(ಒನ್ಇಂಡಿಯಾ ಸುದ್ದಿ)

English summary
Civil Defence and Indian Railways among departments with highest vacancies that are to be filled in next 18 months as announced by PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X