ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋಗೆ ಭದ್ರತೆ : ಶೀಘ್ರದಲ್ಲೇ 1350 ಹುದ್ದೆಗಳಿಗೆ ನೇಮಕಾತಿ

|
Google Oneindia Kannada News

ಬೆಂಗಳೂರು, ಮೇ 17 : ನಮ್ಮ ಮೆಟ್ರೋ ನಿಲ್ದಾಣಗಳಿಗೆ ಕೆಎಸ್‌ಐಎಸ್‌ಎಫ್‌ನ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ ಶೀಘ್ರದಲ್ಲಿಯೇ 1350 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪೊಲೀಸ್ ಕೆಲಸಕ್ಕೆ ಸೇರುವ ಆಕಾಂಕ್ಷಿಗಳು ಅರ್ಜಿ ಹಾಕಲು ಸಿದ್ಧವಾಗಿರಿ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಒದಗಿಸಲು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಒಂದು ಪೂರ್ಣ ಪ್ರಮಾಣದ ಬೆಟಾಲಿಯನ್ ರಚನೆಯಾಗಲಿದೆ. ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ.

ಶಿವಮೊಗ್ಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆಶಿವಮೊಗ್ಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ

ನಮ್ಮ ಮೆಟ್ರೋ ಭದ್ರತೆಗೆ ಪೂರ್ಣ ಪ್ರಮಾಣದ ಬೆಟಾಲಿಯನ್ ರಚನೆಯಾಗಲಿದೆ. 1350 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅವಶ್ಯವಿರುವ ವೇತನ, ಭತ್ಯೆ ಇತರೆ ಸೌಲಭ್ಯಗಳನ್ನು ನಮ್ಮ ಮೆಟ್ರೋ ಸಂಸ್ಥೆಯೇ ಭರಿಸುವಂತೆ ಷರತ್ತು ಹಾಕಲಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಬೋಧಕರ ಹುದ್ದೆಗಳ ಭರ್ತಿತಾಂತ್ರಿಕ ಶಿಕ್ಷಣ ಇಲಾಖೆಯಿಂದ ಬೋಧಕರ ಹುದ್ದೆಗಳ ಭರ್ತಿ

ಬೆಟಾಲಿಯನ್‌ಗೆ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಹುದ್ದೆಗಳ ವೆಚ್ಚವನ್ನು ನಮ್ಮ ಮೆಟ್ರೋ ಸಂಸ್ಥೆಯೇ ಭರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದಿಲ್ಲ.

ಧಾರವಾಡ ಕೋರ್ಟ್ ನೇಮಕಾತಿ : ಶೀಘ್ರಲಿಪಿಗಾರ ಹುದ್ದೆಗೆ ಅರ್ಜಿ ಹಾಕಿಧಾರವಾಡ ಕೋರ್ಟ್ ನೇಮಕಾತಿ : ಶೀಘ್ರಲಿಪಿಗಾರ ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗಳ ವಿವರ

ಹುದ್ದೆಗಳ ವಿವರ

ನಮ್ಮ ಮೆಟ್ರೋಗೆ ಭದ್ರತೆ ನೀಡಲು ಹೊಸ ಬೆಟಾಲಿಯನ್ ರಚನೆಯಾಗುತ್ತಿದ್ದು. 1350 ಹುದ್ದೆಗಳ ನೇಮಕಾತಿ ನಡೆಯಲಿದೆ.

ಕಮಾಂಡೆಂಟ್ 1, ಡೆಪ್ಯೂಟಿ ಕಮಾಂಡೆಂಟ್ 2, ಅಸಿಸ್ಟೆಂಟ್ ಕಮಾಂಡೆಂಟ್ 5, ಪಿ.ಐ 10, ಎ.ಎಸ್‌.ಐ 51, ಪಿ.ಎಸ್‌.ಐ 93, ಹೆಚ್‌.ಸಿ 65, ಪಿಸಿ 1018, ಅನುಯಾಯಿಗಳು 105 ಸೇರಿದಂತೆ 1350 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಬೆಂಗಳೂರಿನಲ್ಲಿ ಕೆಲಸ

ಬೆಂಗಳೂರಿನಲ್ಲಿ ಕೆಲಸ

ಹೊಸ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಪೂರ್ಣ ಪ್ರಮಾಣದ ಬೆಟಾಲಿಯನ್‌ಗೆ ನಮ್ಮ ಮೆಟ್ರೋ ವೇತನ, ಭತ್ಯೆ, ಇತರ ಸೌಲಭ್ಯ ನೀಡಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡಬೇಕಿದೆ.

ಸರ್ಕಾರದ ಆದೇಶವಾಗಿದೆ

ಸರ್ಕಾರದ ಆದೇಶವಾಗಿದೆ

ಕರ್ನಾಟಕ ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ನಮ್ಮ ಮೆಟ್ರೋ ವೇತನ, ಭತ್ಯೆ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಆಗುವುದಿಲ್ಲ. ನೇಮಕಾತಿ ಅಧಿಸೂಚನೆ ಶೀಘ್ರದಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.

ಹೊಸ ಬೆಟಾಲಿಯನ್ ಮಾಡಲು ಮನವಿ

ಹೊಸ ಬೆಟಾಲಿಯನ್ ಮಾಡಲು ಮನವಿ

ವಿದ್ಯುತ್ ಉತ್ಪಾದನಾ ಕೇಂದ್ರ, ಕರ್ನಾಟಕ ಪೊಲೀಸ್ ಅಕಾಡೆಮಿ, ಆಡಳಿತ ತರಬೇತಿ ಸಂಸ್ಥೆ, ಧಾರವಾಡ ಹೈಕೋರ್ಟ್ ಪೀಠ, ಮೈಸೂರು ಅರಮನೆ, ಮಂಗಳೂರು ಇನ್ಫೋಸಿಸ್, ಬೆಂಗಳೂರು ಕ್ಲಬ್ ಸೇರಿದಂತೆ ಇತರ ಕಡೆಗಳಿಗೆ ಭದ್ರತೆ ನೀಡಲು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ 4, 5 ಮತ್ತು 6ನೇ ಬೆಟಾಲಿಯನ್ ಹೊಸದಾಗಿ ರಚನೆ ಮಾಡಲು ಪೊಲೀಸ್ ಇಲಾಖೆ ಮನವಿ ಮಾಡಿತ್ತು.

English summary
Karnataka Industrial Security Force will set up new belatalin for provide security for Namma Metro station. Soon notification will announced for 1350 posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X