ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 54 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು 18/3/2020ರ ಸಂಜೆ 6ಗಂಟೆಯ ತನಕ ಸಲ್ಲಿಸಬಹುದಾಗಿದೆ.

ಪೊಲೀಸ್ ಇಲಾಖೆಯು ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಾಯೋಗಾಲಯ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಾಯೋಗಾಲಯದ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಗೆ ಮೂಲಕ ಭರ್ತಿ ಮಾಡುತ್ತಿದೆ.

ಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗಳ ಭರ್ತಿಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗಳ ಭರ್ತಿ

ವೈಜ್ಞಾನಿಕ ಅಧಿಕಾರಿ 50, ವೈಜ್ಞಾನಿಕ ಅಧಿಕಾರಿ (ಹೈದ್ರಬಾದ್-ಕರ್ನಾಟಕ) 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ವೆಬ್‌ಸೈಟ್‌ನಲ್ಲಿ ಹುದ್ದೆಗಳ ವರ್ಗೀಕರಣದ ವಿವರವನ್ನು ನೀಡಲಾಗಿದೆ.

ಕೆಪಿಸಿಎಲ್‌ನಲ್ಲಿ ಕೆಲಸ ಖಾಲಿ ಇದೆ; ರಾಯಚೂರಿನಲ್ಲಿ ಕೆಲಸಕೆಪಿಸಿಎಲ್‌ನಲ್ಲಿ ಕೆಲಸ ಖಾಲಿ ಇದೆ; ರಾಯಚೂರಿನಲ್ಲಿ ಕೆಲಸ

Karnataka State Police Recruitment Apply For Scientific Officer Post

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 18/3/2020ಕ್ಕೆ ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಸಾಮಾನ್ಯ ಅಭ್ಯರ್ಥಿಗೆ 35, 2ಎ/2ಬಿ/3ಎ/3ಬಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗೆ 40 ವರ್ಷ ಪೂರೈಸಿರಬೇಕು.

ಕೆಪಿಎಸ್‌ಸಿ ನೇಮಕಾತಿ; 925 ಹುದ್ದೆಗಳ ಭರ್ತಿಕೆಪಿಎಸ್‌ಸಿ ನೇಮಕಾತಿ; 925 ಹುದ್ದೆಗಳ ಭರ್ತಿ

ಪ್ರತಿ ಹುದ್ದೆಗೆ ಪ್ರತ್ಯೇಕವಾದ ವಿದ್ಯಾರ್ಹತೆ ಇದ್ದು ಅಭ್ಯರ್ಥಿಗಳು www.ksp.gov.inನಲ್ಲಿ ವಿವರಗಳನ್ನು ನೋಡಬಹುದಾಗಿದೆ. ಅರ್ಜಿ ಸಲ್ಲಿಸುವ ಮುನ್ನ ನೀಡಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ/ಪ್ರವರ್ಗ(2ಎ), 2 (ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಪ್ರಮುಖ ದಿನಾಂಕಗಳು

* 20/2/2020ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
* 18/3/2020ರ ಸಂಜೆ 6 ಗಂಟೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ
* ಬ್ಯಾಂಕ್, ಅಂಚೆ ಕಚೇರಿಯಲ್ಲಿ ಶುಲ್ಕ ಪಾವತಿ ಮಾಡಲು 20/3/2020 ಕೊನೆಯ ದಿನ

English summary
Karnataka State Police (KSP) invited applications for the 54 scientific officer post. Interested candidates can apply till March 18, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X