ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಮಾನವ ಹಕ್ಕುಗಳ ಆಯೋಗದ ನೇಮಕಾತಿ, ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 09 : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಜನವರಿ 30, 2020ರೊಳಗೆ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ. ನೇಮಕಾತಿಯಾದವರ ಮೊದಲ 6 ತಿಂಗಳ ಸೇವೆ ತೃಪ್ತಿಕರವೆಂದು ಕಂಡುಬಂದಲ್ಲಿ ಮುಂದುವರೆಸುವುದು ಆಯೋಗದ ವಿವೇಚನೆಗೆ ಒಳಪಟ್ಟಿರುತ್ತದೆ.

ಕೊಪ್ಪಳ; 22 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿ ಕೊಪ್ಪಳ; 22 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿ

ಸರ್ಕಾರಿ ಇಲಾಖೆಗಳಲ್ಲಿ/ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ನಿಯೋಜನೆಯ ಮೇಲೆ ಬರಲು ಇಚ್ಛಸಿದಲ್ಲಿ ಅರ್ಜಿ ಸಲ್ಲಿಸಬಹುದು. ಅವರು ತಮ್ಮ ಉದ್ಯೋಗದಾತರ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಮುಂಗಡ ಪ್ರತಿಯನ್ನು ಅರ್ಜಿಯನ್ನಾಗಿ ಸಲ್ಲಿಸಬಹುದು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ; ಅರ್ಜಿ ಹಾಕಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ; ಅರ್ಜಿ ಹಾಕಿ

Karnataka State Human Rights Commission Recruitment

ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಹೊಂದಿದ ಹುದ್ದೆಯ ವೇತನ ಶ್ರೇಣಿಯ ಕನಿಷ್ಟ ಮೂಲ ವೇತನವನ್ನು ಸಂಚಿತ ವೇತನವನ್ನಾಗಿ ಪಡೆಯಲು ಅರ್ಹರು. ಕಾನೂನು ಸಹಾಯಕ ಹುದ್ದೆಗೆ ನೇಮಕಾತಿ ಗೊಂಡವರು ಗುತ್ತಿಗೆ ಆಧಾರದ ಮೇರೆಗಿನ 6 ತಿಂಗಳ ಅವಧಿಯಲ್ಲಿ ಅಥವ ಅವಧಿ ಪೂರ್ಣಗೊಂಡ ನಂತರ ಅವರ ಸೇವೆಯು ತೃಪ್ತಿಕರವೆಂದು ಕಂಡುಬಂದಲ್ಲಿ ಕ್ರಮ ಬದ್ಧ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಪಶ್ಚಿಮ ರೈಲ್ವೆ ನೇಮಕಾತಿ: 3553 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಪಶ್ಚಿಮ ರೈಲ್ವೆ ನೇಮಕಾತಿ: 3553 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾವ-ಯಾವ ಹುದ್ದೆಗಳು : ವಿಲೇಖನಾಧಿಕಾರಿ (1), ಅಧ್ಯಕ್ಷರ ಆಪ್ತ ಕಾರ್ಯದರ್ಶಿ (1), ಶಾಖಾಧಿಕಾರಿ (2), ಸಹಾಯಕ ವಿಲೇಖನಾಧಿಕಾರಿ (1), ಕೋರ್ಟ್ ಅಧಿಕಾರಿ (3), ಹಿರಿಯ ಸಹಾಯಕರು (1), ತೀರ್ಪು ಬಹರಗಾರರು (1), ಕಾನೂನು ಸಹಾಯಕರು/ಸಂಶೋಧನಾ ಸಹಾಯಕರು (2), ಸಹಾಯಕರು (2).

ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು/ಶೀಘ್ರಲಿಪಿಕಾರರು (4), ರೆಕಾರ್ಡ್ ಕೀಪರ್ (1), ಶೀಘ್ರಲಿಪಿಕಾರರು (1), ಕಿರಿಯ ಸಹಾಯಕರು (2), ಬೆರಳಚ್ಚುಗಾರರು (2), ವಾಹನ ಚಾಲಕರು (3), ಸ್ವೀಪರ್ಸ್/ಸ್ಕ್ಯಾವೆಂಜರ್ಸ್/ವಾಚ್‌ಮೆನ್ (4), ಗೃಹ ಪರಿಚಾರಕರು (3) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಅಂಚೆ ಮೂಲಕ ಅಥವ ಇ-ಮೇಲ್ ಮೂಲಕ 31/1/2020ರಂದು ಅಥವ ಅಕ್ಕಿಂತ ಮುಂಚಿತವಾಗಿ ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಲಕೋಟೆಯ ಮತ್ತು ಅರ್ಜಿಯ ಮೇಲೆ ಯಾವ ಹುದ್ದೆಗಾಗಿ ಅರ್ಜಿ ಎಂದು ಸ್ಪಷ್ಟವಾಗಿ ನಮೂದಿಸಿರಬೇಕು. ಅರ್ಜಿಗಳನ್ನು ಸಲ್ಲಿಸಲು ವಿಳಾಸ

ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
5ನೇ ಹಂತ, ಬಹುಮಹಡಿ ಕಟ್ಟಡ, 3ನೇ ಮಹಡಿ
ಬೆಂಗಳೂರು -560001

ವಿವರವಾದ ಅಧಿಸೂಚನೆ, ಅರ್ಜಿಯ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Karnataka State Human Rights Commission (KSHRC) has invited applications for various sanctioned posts. The positions are to be filled temporarily on contract basis. Candidates can submit application till January 30, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X