ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪೊಲೀಸ್ ನೇಮಕಾತಿ; ಹುದ್ದೆಗಳ ವಿವರಗಳು

|
Google Oneindia Kannada News

ಬೆಂಗಳೂರು, ಮೇ 08 : ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರಕ್ಷಣೆ, ಸಂವೇದನೆ ಮತ್ತು ಶೌರ್ಯ ನಿಮ್ಮ ವ್ಯಕ್ತಿತ್ವವಾಗಿದ್ದಲ್ಲಿ ಕರ್ನಾಟಕ ಪೊಲೀಸ್ ನಿಮ್ಮ ಕಾರ್ಯಕ್ಷೇತ್ರ ಎಂದು ಸರ್ಕಾರ ಜಾಹೀರಾತು ನೀಡಿದೆ. ವಿವಿಧ ಹುದ್ದೆಗಳಿಗೆ 26/6/2020ರ ತನಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಪೊಲೀಸ್ ನೇಮಕಾತಿ; ಒಟ್ಟು 4104 ಹುದ್ದೆ ಭರ್ತಿಕರ್ನಾಟಕ ಪೊಲೀಸ್ ನೇಮಕಾತಿ; ಒಟ್ಟು 4104 ಹುದ್ದೆ ಭರ್ತಿ

ಸಶಸ್ತ್ರ ಮೀಸಲು ಸಬ್ ಇನ್ಸ್‌ಪೆಕ್ಟರ್, ವಿಶೇಷ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ವೈರ್‌ ಲೆಸ್) ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೇ 26ರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಕೆ. ಎಸ್. ಆರ್‌. ಪಿ ಕಾನ್ಸ್‌ಟೇಬಲ್ ನೇಮಕಾತಿ; 2672 ಹುದ್ದೆಗಳುಕೆ. ಎಸ್. ಆರ್‌. ಪಿ ಕಾನ್ಸ್‌ಟೇಬಲ್ ನೇಮಕಾತಿ; 2672 ಹುದ್ದೆಗಳು

ಸೇವೆ ಮಾಡಲು ಮತ್ತು ಬೆಳೆಯಲು ಅವಕಾಶ, ಸಫಲ ವೃತ್ತಿ ಬದುಕು, ಸಾರ್ಥಕ ಮತ್ತು ಅರ್ಥಪೂರ್ಣ ಜೀವನ ಪೊಲೀಸ್ ಇಲಾಖೆಯ ಸೇವಾ ವಿಶೇಷಗಳು ಎಂದು ಸರ್ಕಾರ ಜಾಹೀರಾತಿನಲ್ಲಿ ಹೇಳಿದೆ.

ಅರಣ್ಯ ರಕ್ಷಕ ಹುದ್ದೆ ನೇಮಕಾತಿ; ಜೂನ್ 15ರ ತನಕ ಅರ್ಜಿ ಹಾಕಿ ಅರಣ್ಯ ರಕ್ಷಕ ಹುದ್ದೆ ನೇಮಕಾತಿ; ಜೂನ್ 15ರ ತನಕ ಅರ್ಜಿ ಹಾಕಿ

ಹುದ್ದೆಗಳ ವಿವರಗಳು ಹೀಗಿವೆ

ಹುದ್ದೆಗಳ ವಿವರಗಳು ಹೀಗಿವೆ

ಒಟ್ಟು 162 ಸಬ್ ಇನ್ಸ್‌ಪೆಕ್ಟರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಸಶಸ್ತ್ರ, ಕೆಎಸ್ಆರ್‌ಪಿ, ಕೆಎಸ್‌ಐಎಸ್‌ಎಫ್, ವೈರ್ ಲೆಸ್ ವಿಭಾಗಗಳು ಸೇರಿವೆ.

ಒಟ್ಟು 45 ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೈದರಾಬಾದ್ ಕರ್ನಾಟಕ 5 ಹುದ್ದೆಗಳು, ನಾನ್ ಹೈದರಾಬಾದ್ ಕರ್ನಾಟಕ 40 ಹುದ್ದೆಗಳು.

ಕೆ. ಎಸ್. ಆರ್. ಪಿ ಹುದ್ದೆಗಳು

ಕೆ. ಎಸ್. ಆರ್. ಪಿ ಹುದ್ದೆಗಳು

ವಿಶೇಷ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ 40 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವೈರ್ ಲೆಸ್ ವಿಭಾಗದಲ್ಲಿ 26 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕೆ. ಎಸ್‌. ಐ. ಎಸ್‌. ಎಫ್‌

ಕೆ. ಎಸ್‌. ಐ. ಎಸ್‌. ಎಫ್‌

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಕೆ. ಎಸ್. ಐ. ಎಸ್‌. ಎಫ್)ನಲ್ಲಿ 51 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರ ಜೊತೆಗೆ ಪೊಲೀಸ್ ಕಾನ್ ಸ್ಟೇಬಲ್ (ನಾಗರಿಕ) ಪುರುಷ ಮತ್ತು ಮಹಿಳೆ 2565 ಹುದ್ದೆಗಳು, ಸಶಸ್ತ್ರ ಪೊಲೀಸ್ ಕಾನ್ಸ್‌ಸ್ಟೇಬಲ್ (ಸಿಎಆರ್/ಡಿಎಆರ್) ಪುರುಷ 1449 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸುವ ವಿವರ

ಅರ್ಜಿ ಸಲ್ಲಿಸುವ ವಿವರ

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮೇ 26 ರಿಂದ ಜೂನ್ 26ರ ತನಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿಗಳನ್ನು ಸಲ್ಲಿಸಲು www.ksp.gov.in ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
Karnataka police invited the online applications for the constable and sub inspector post. Candidates can apply till June 26, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X