ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಪೊಲೀಸ್ ನೇಮಕಾತಿ : 850 ಪಿಎಸ್‌ಐ, 8 ಸಾವಿರ ಪೇದೆಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 05 : ಕರ್ನಾಟಕ ಸರ್ಕಾರ ಗೃಹ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. 850 ಸಬ್ ಇನ್ಸ್‌ಪೆಕ್ಟರ್ ಮತ್ತು 8 ಸಾವಿರ ಪೊಲೀಸ್ ಪೇದೆಗಳ ನೇಮಕಾತಿಗೆ ಒಪ್ಪಿಗೆ ಕೊಟ್ಟಿದೆ.

ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳ ಆಧಾರದ ಮೇಲೆ ಪೊಲೀಸ್ ಇಲಾಖೆಯನ್ನು ಪುನರ್ ಸಂಘಟನೆ ಮಾಡಲಾಗುತ್ತಿದೆ. ಇಲಾಖೆಗೆ ಮಂಜೂರಾಗಿದ್ದ 850 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ರದ್ದುಪಡಿಸಿದೆ.

ಕೆಎಸ್‌ಟಿಡಿಸಿ ನೇಮಕಾತಿ; 35 ಹುದ್ದೆಗಳಿಗೆ ಅರ್ಜಿ ಹಾಕಿಕೆಎಸ್‌ಟಿಡಿಸಿ ನೇಮಕಾತಿ; 35 ಹುದ್ದೆಗಳಿಗೆ ಅರ್ಜಿ ಹಾಕಿ

850 ಪಿ. ಎಸ್‌. ಐ ಹುದ್ದೆಗಳನ್ನು ಸೃಜಿಸಿ, ಹೊಸದಾಗಿ 8000 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಬೆಂಗಳೂರು ಸಿಟಿ ಕಮಿಷನರೇಟ್ ವ್ಯಾಪ್ತಿಯಲ್ಲಿ 2019-20 ರಿಂದ 2021-22ನೇ ಸಾಲಿನಲ್ಲಿ ಹಂತ-ಹಂತವಾಗಿ ನೇಮಕಾತಿ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.

ಪೂರ್ವ ರೈಲ್ವೆ ನೇಮಕಾತಿ 252 ಹುದ್ದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆಪೂರ್ವ ರೈಲ್ವೆ ನೇಮಕಾತಿ 252 ಹುದ್ದೆ, ದ್ವಿತೀಯ ಪಿಯುಸಿ ವಿದ್ಯಾರ್ಹತೆ

ವಿವಿಧ ಜಿಲ್ಲೆಗಳಿಗೆ ಹುದ್ದೆಗಳನ್ನು ವರ್ಗೀಕರಣ ಮಾಡಲಾಗಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 800 ಸಿವಿಲ್ ಮತ್ತು 500 ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿವರಗಳು ಇಲ್ಲಿವೆ.

ಬಿಬಿಎಂಪಿ ನೇಮಕಾತಿ : 4000 ಹುದ್ದೆಗಳಿಗೆ ಅರ್ಜಿ ಆಹ್ವಾನಬಿಬಿಎಂಪಿ ನೇಮಕಾತಿ : 4000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವರ್ಷ ಎಷ್ಟು ಹುದ್ದೆಗಳ ಭರ್ತಿ

ಈ ವರ್ಷ ಎಷ್ಟು ಹುದ್ದೆಗಳ ಭರ್ತಿ

2019-20ನೇ ಸಾಲಿನಲ್ಲಿ 300 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು 4 ಸಾವಿರ ಪೇದೆಗಳ ನೇಮಕ ನಡೆಯಲಿದೆ. ನೇಮಕಾತಿಗಾಗಿ ನಾಲ್ಕು ತಿಂಗಳ ಒಳಗೆ ಅಧಿಸೂಚನೆ ಪ್ರಕಟವಾಗಲಿದೆ. ಆಸಕ್ತರು ಅರ್ಜಿಗಳನ್ನು ಹಾಕಲು ಸಿದ್ಧರಾಗಬೇಕಿದೆ.

ಯಾವ ಹುದ್ದೆಗಳು ಎಷ್ಟು?

ಯಾವ ಹುದ್ದೆಗಳು ಎಷ್ಟು?

ಈ ವರ್ಷ ನಡೆಯಲಿರುವ 4 ಸಾವಿರ ಪೇದೆಗಳ ನೇಮಕದಲ್ಲಿ 200 ಮಂದಿ ಸಿವಿಲ್, 1000 ಮಂದಿ ಸಶಸ್ತ್ರ ಪೊಲೀಸ್ ಪೇದೆ ಹಾಗೂ 1000 ಸಶಸ್ತ್ರ ಮೀಸಲು ಪೊಲೀಸ್ ಪೇದೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.

ಜಿಲ್ಲಾವಾರು ಹುದ್ದೆಗಳ ವಿವರ

ಜಿಲ್ಲಾವಾರು ಹುದ್ದೆಗಳ ವಿವರ

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 800 ಸಿವಿಲ್ ಪೇದೆ, 500 ಸಶಸ್ತ್ರ ಪೇದೆ, ಬೆಳಗಾವಿ ನಗರ 75 ಸಿವಿಲ್ ಪೇದೆ, ಹುಬ್ಬಳ್ಳಿ-ಧಾರವಾಡ 75 ಸಿವಿಲ್ ಪೇದೆ, ಮಂಗಳೂರು ನಗರ 75 ಸಿವಿಲ್ ಪೇದೆ, ಬೆಂಗಳೂರು ಜಿಲ್ಲೆ 75 ಸಿವಿಲ್ ಪೇದೆ, 50 ಸಿವಿಲ್ ಪೇದೆ, ಕೆ. ಜಿ. ಎಫ್ ಘಟಕ 50 ಸಿವಿಲ್ ಪೇದೆ, ರಾಮನಗರ ಜಿಲ್ಲೆ 75 ಸಿವಿಲ್ ಪೇದೆ, ತುಮಕೂರು ಜಿಲ್ಲೆ 75 ಸಿವಿಲ್ ಪೇದೆ.

ಪೊಲೀಸ್ ಪೇದೆ ನೇಮಕಾತಿ

ಪೊಲೀಸ್ ಪೇದೆ ನೇಮಕಾತಿ

ಮೈಸೂರು ಜಿಲ್ಲೆ 75 ಸಿವಿಲ್ ಪೇದೆ, 50 ಸಶಸ್ತ್ರ ಪೇದೆ, ಚಾಮರಾಜನಗರ ಜಿಲ್ಲೆ 75 ಸಿವಿಲ್ ಪೇದೆ, ಹಾಸನ ಜಿಲ್ಲೆ 75 ಸಿವಿಲ್ ಪೇದೆ, ಕೊಡಗು ಜಿಲ್ಲೆ 75 ಸಿವಿಎಲ್ ಪೇದೆ, 50 ಸಶಸ್ತ್ರ ಪೇದೆ, ಮಂಡ್ಯ ಜಿಲ್ಲೆ 100 ಸಿವಿಲ್ ಪೇದೆ, 50 ಸಶಸ್ತ್ರ ಪೇದೆ, ಶಿವಮೊಗ್ಗ ಜಿಲ್ಲೆ 100 ಸಿವಿಲ್ ಪೇದೆ, 50 ಸಶಸ್ತ್ರ ಪೇದೆ, ದಕ್ಷಿಣ ಕನ್ನಡ, ಮಂಗಳೂರು 75 ಸಿವಿಲ್ ಪೇದೆ, ಉಡುಪಿ ಜಿಲ್ಲೆ 100 ಸಿವಿಲ್ ಪೇದೆ, ಉತ್ತರ ಕನ್ನಡ 75 ಸಿವಿಲ್ ಪೇದೆ, 50 ಸಶಸ್ತ್ರ ಪೇದೆ, ಚಿಕ್ಕಮಗಳೂರು ಜಿಲ್ಲೆ 50 ಸಶಸ್ತ್ರ ಪೇದೆ, ಬೆಳಗಾವಿ ಜಿಲ್ಲೆ 50 ಸಶಸ್ತ್ರ ಪೇದೆ.

English summary
Karnataka government approved for the recruitment in police department. 850 PSI and 8 thousand police constable post will fill soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X