ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ನೇಮಕಾತಿ; 250 ಹುದ್ದೆಗಳು

|
Google Oneindia Kannada News

ಬೆಂಗಳೂರು , ಆಗಸ್ಟ್ 01; ಕರ್ನಾಟಕ ರಾಜ್ಯದ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ 250 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 30/8/2021 ಸಂಜೆ 6 ಗಂಟೆ ಕೊನೆಯ ದಿನವಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಕೆ ಮಾಡುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಧಿಕೃತವಾದ ಬ್ಯಾಂಕ್ ಖಾತೆ ಶಾಖೆ/ ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿ ಮಾಡಲು 1/9/2021 ಕೊನೆಯ ದಿನ.

ಬೆಂಗಳೂರು ಸ್ಮಾರ್ಟ್‌ ಸಿಟಿ ನೇಮಕಾತಿ; ಆಗಸ್ಟ್‌ 5ರೊಳಗೆ ಅರ್ಜಿ ಹಾಕಿ ಬೆಂಗಳೂರು ಸ್ಮಾರ್ಟ್‌ ಸಿಟಿ ನೇಮಕಾತಿ; ಆಗಸ್ಟ್‌ 5ರೊಳಗೆ ಅರ್ಜಿ ಹಾಕಿ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಅಧಿಸೂಚನೆಯಲ್ಲಿ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶ ಇರುತ್ತದೆ.

Nainital ಬ್ಯಾಂಕ್ ನೇಮಕಾತಿ; 150 ಹುದ್ದೆಗೆ ಅರ್ಜಿ ಹಾಕಿ Nainital ಬ್ಯಾಂಕ್ ನೇಮಕಾತಿ; 150 ಹುದ್ದೆಗೆ ಅರ್ಜಿ ಹಾಕಿ

ಒಬ್ಬ ಅಭ್ಯರ್ಥಿ ಒಂದು ವೃತ್ತಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ವೃತ್ತಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುತ್ತದೆ. ಅರ್ಜಿಯಲ್ಲಿ ಘಟಕವಾರು ಆದ್ಯತೆಯನ್ನು ತಪ್ಪದೇ ನಮೂದಿಸಬೇಕು. ಅರ್ಹತೆ ಮತ್ತು ಮೀಸಲಾತಿ ಅನುಸಾರ ಆದ್ಯತೆಯನ್ನು ಪರಿಗಣಿಸಿ ಸ್ಥಳ ನಿಯುಕ್ತಿಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ನೈಋತ್ಯ ರೈಲ್ವೆ ನೇಮಕಾತಿ; ಹುಬ್ಬಳ್ಳಿಯಲ್ಲಿ ಕೆಲಸ ನೈಋತ್ಯ ರೈಲ್ವೆ ನೇಮಕಾತಿ; ಹುಬ್ಬಳ್ಳಿಯಲ್ಲಿ ಕೆಲಸ

ಹುದ್ದೆಗಳ ಸಂಖ್ಯೆ ವಿವರಗಳು

ಹುದ್ದೆಗಳ ಸಂಖ್ಯೆ ವಿವರಗಳು

1ನೇ ಪಡೆ ಕೆ. ಎಸ್. ಆರ್‌. ಪಿ. ಬೆಂಗಳೂರು. ಅಡುಗೆಯವರು 9, ಕ್ಷೌರಿಕ 6, ಧೋಬಿ 5, ಕಸ ಗುಡಿಸುವವರು 5 ಒಟ್ಟು 25.

5ನೇ ಪಡೆ ಕೆ. ಎಸ್. ಆರ್. ಪಿ. ಮೈಸೂರು. ಅಡುಗೆಯವರು 8, ಕ್ಷೌರಿಕ 8, ಧೋಬಿ 7, ಕಸ ಗುಡಿಸುವವರು 7 ಒಟ್ಟು 30.

6ನೇ ಪಡೆ ಕೆ. ಎಸ್. ಆರ್. ಪಿ. ಕಲಬುರಗಿ. ಅಡುಗೆಯವರು 9, ಕ್ಷೌರಿಕ 4, ಧೋಬಿ 4, ಕಸ ಗುಡಿಸುವವರು 5 ಒಟ್ಟು 25.

ಎಲ್ಲೆಲ್ಲಿ ಎಷ್ಟು ಹುದ್ದೆಗಳು

ಎಲ್ಲೆಲ್ಲಿ ಎಷ್ಟು ಹುದ್ದೆಗಳು

4ನೇ ಪಡೆ ಕೆ. ಎಸ್. ಆರ್. ಪಿ. ಮಂಗಳೂರು. ಅಡುಗೆಯವರು 13, ಕ್ಷೌರಿಕ 9, ಧೋಬಿ 11, ಕಸ ಗುಡಿಸುವವರು 13 ಒಟ್ಟು 46.

10ನೇ ಪಡೆ ಕೆ. ಎಸ್. ಆರ್‌. ಪಿ. ಶಿಗ್ಗಾವಿ. ಅಡುಗೆಯವರು 15, ಕ್ಷೌರಿಕ 12, ಧೋಬಿ 12, ಕಸ ಗುಡಿಸುವವರು 11 ಒಟ್ಟು 50.

12ನೇ ಪಡೆ ಕೆ. ಎಸ್. ಆರ್‌. ಪಿ. ತುಮಕೂರು. ಅಡುಗೆಯವರು 27, ಕ್ಷೌರಿಕ 6, ಧೋಬಿ 14, ಕಸ ಗುಡಿಸುವವರು 14, ನೀರು ತರುವವರು 13 ಒಟ್ಟು 74.

ನೇಮಕಾತಿ ಆದೇಶ, ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ, ಷರತ್ತುಗಳು

ವಯೋಮಿತಿ, ಷರತ್ತುಗಳು

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ 30/8/2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ವಸ್ಸಾಗಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷಗಳು. ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು. ಚಿತ್ರದಲ್ಲಿ ವಯೋಮಿತಿ ಕುರಿತ ವಿವರಗಳಿವೆ.

ಕರ್ನಾಟಕ ನಾಗರೀಕ ಸೇವಾ (ಪ್ರೋಬೆಷನರಿ) ನಿಯಮಗಳು 1977ರ ಅನ್ವಯ ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ.

ವಿದ್ಯಾರ್ಹತೆ ವಿವರಗಳು

ವಿದ್ಯಾರ್ಹತೆ ವಿವರಗಳು

ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ವೃಂದ ಮತ್ತು ನೇಮಕಾತಿ) ನಿಯಮ 2020ರ ಪ್ರಕಾರ ಅನುಯಾಯಿ ಅಭ್ಯರ್ಥಿಗಳು ಎಸ್. ಎಸ್. ಎಲ್‌. ಸಿ. ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಅಂದರೆ 30/8/2021ಕ್ಕೆ ಹೊಂದಿರಬೇಕು.

ಸರ್ಕಾರದ ಸುತ್ತೋಲೆ ಅನ್ವಯ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಗಳು ಈ ಕೆಳಕಂಡಂತೆ ಇರುತ್ತವೆ.

* ಸಿಬಿಎಸ್‌ಇ ಮತ್ತು ಐಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ
* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ
* ನ್ಯಾಷನಲ್ ಇನ್ಸ್‌ಸ್ಟಿಟ್ಯುಟ್‌ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯುವ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್‌

English summary
Apply for followers vacancies in Karnataka state police. Candidates can apply online till 30 Aug 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X