ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆ ನೇಮಕಾತಿ; ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜೂನ್ 12 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

Recommended Video

Indian stands 4th in the world in corona cases count | Oneindia Kannada

ಪೊಲೀಸ್ ಕಾನ್ಸ್‌ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕಗಳನ್ನು ವಿಸ್ತರಣೆ ಮಾಡಲಾಗಿದೆ. ವಯೋಮಿತಿ ಸೇರಿದಂತೆ ಬೇರೆ ಯಾವುದೇ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಅರ್ಜಿ ಸಲ್ಲಿಕೆ ಸ್ಥಗಿತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಅರ್ಜಿ ಸಲ್ಲಿಕೆ ಸ್ಥಗಿತ

ಸಿ. ಪಿ. ಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ 558, ಎ. ಪಿ. ಸಿ. (ಪುರುಷ)(ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ 444 ಇವುಗಳಿಗೆ ಅರ್ಜಿ ಸಲ್ಲಿಸಲು ಜುಲೈ 9 ಕೊನೆಯ ದಿನಾಂಕವಾಗಿದ್ದು, ಶುಲ್ಕಗಳನ್ನು ಜುಲೈ 13ರ ತನಕ ಪಾವತಿಸಬಹುದು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು

Police Constable Recruitment Date Extended

ಸಿ. ಪಿ. ಸಿ (ಪುರುಷ ಮತ್ತು ಮಹಿಳಾ) ಹುದ್ದೆಗಳ ಸಂಖ್ಯೆ 2007, ಎ. ಪಿ. ಸಿ. (ಪುರುಷ) (ಸಿಎಆರ್/ಡಿಎಆರ್), ಹುದ್ದೆಗಳ ಸಂಖ್ಯೆ 1005. ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕವಾಗಿದೆ. ಶುಲ್ಕಗಳನ್ನು ಜುಲೈ 15ರ ತನಕ ಪಾವತಿ ಮಾಡಬಹುದು.

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 26 ಹುದ್ದೆಗಳು ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 26 ಹುದ್ದೆಗಳು

ವಿಶೇಷ ಆರ್. ಪಿ. ಸಿ (ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ) 2420 ಹುದ್ದೆಗಳು ಹಾಗೂ ವಿಶೇಷ ಆರ್. ಪಿ. ಸಿ (ಪುರುಷ) (ಬ್ಯಾಂಡ್ಸ್‍ಮನ್) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ) ಹುದ್ದೆಗಳ ಸಂಖ್ಯೆ 252 ಅರ್ಜಿ ಸಲ್ಲಿಸಲು ಜುಲೈ 6 ಕೊನೆಯ ದಿನಾಂಕವಾಗಿದ್ದು, ಜುಲೈ 8ರ ತನಕ ಶುಲ್ಕ ಪಾವತಿಸಬಹುದು.

English summary
Karnataka police constable recruitment 2020. Due to lock down applications submitting date extended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X