• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯ ಇಲಾಖೆ ನೇಮಕಾತಿ; ಅಕ್ಟೋಬರ್ 15ರ ತನಕ ಅರ್ಜಿ ಹಾಕಿ

|

ಬೆಂಗಳೂರು, ಸೆಪ್ಟೆಂಬರ್ 21 : ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 15/10/2020 ಕೊನೆಯ ದಿನವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ (ಹಿರಿಯ ವೈದ್ಯಾಧಿಕಾರಿ/ ತಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಮತ್ತು ದಂತ ವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು 2020ರ ನಿಯಮಗಳಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ ಸ್ಥಗಿತ

ಅರ್ಹ ಅಭ್ಯರ್ಥಿಗಳು 16/9/2020 ರಿಂದ 15/10/2020ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 16/10/2020 ಕೊನೆಯ ದಿನವಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಕರ್ನಾಟಕ ಜಾನಪದ ವಿವಿ ನೇಮಕಾತಿ; ಸೆ.30ರ ತನಕ ಅರ್ಜಿ ಹಾಕಿ

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿ ಮಾಡಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುಪಿಎಸ್ಸಿ ನೇಮಕಾತಿ 2020: 194ಹುದ್ದೆಗಳಿಗೆ ಅರ್ಜಿ ಆಹ್ವಾನ

ಭರ್ತಿ ಮಾಡುವ ಹುದ್ದೆಗಳ ವಿವರ

ಭರ್ತಿ ಮಾಡುವ ಹುದ್ದೆಗಳ ವಿವರ

ಹಿರಿಯ ವೈದ್ಯಾಧಿಕಾರಿ/ ತಜ್ಞರು (ಜನರಲ್ ಮೆಡಿಸಿನ್) 241. ಹಿರಿಯ ವೈದ್ಯಾಧಿಕಾರಿ/ ತಜ್ಞರು (ಜನರಲ್ ಸರ್ಜರಿ) 89, ಹಿರಿಯ ವೈದ್ಯಾಧಿಕಾರಿ/ತಜ್ಞರು (ಪ್ರಸೂತಿ ಮತ್ತು ಸ್ತ್ರೀರೋಗ) 279, ಹಿರಿಯ ವೈದ್ಯಾಧಿಕಾರಿ/ ತಜ್ಞರು (ಕಿವಿ, ಮೂಗು, ಗಂಟಲು) 49, ಹಿರಿಯ ವೈದ್ಯಾಧಿಕಾರಿ/ ತಜ್ಞರು (ಚರ್ಮರೋಗ) 108, ಹಿರಿಯ ವೈದ್ಯಾಧಿಕಾರಿ/ ತಜ್ಞರು (ಅರವಳಿಕೆ) 230, ಹಿರಿಯ ವೈದ್ಯಾಧಿಕಾರಿ/ ತಜ್ಞರು (ಮಕ್ಕಳ ತಜ್ಞರು) 296, ಹಿರಿಯ ವೈದ್ಯಾಧಿಕಾರಿ/ ತಜ್ಞರು (ನೇತ್ರ) 82, ಹಿರಿಯ ವೈದ್ಯಾಧಿಕಾರಿ/ ತಜ್ಞರು (ಕೀಲು, ಮೂಳೆ ರೋಗ) 31, ಹಿರಿಯ ವೈದ್ಯಾಧಿಕಾರಿ/ ತಜ್ಞರು (ರೇಡಿಯಾಲಜಿ) 55, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು 1265, ದಂತ ಆರೋಗ್ಯಾಧಿಕಾರಿಗಳು 90.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಸಾಮಾನ್ಯ ವರ್ಗದ ಅರ್ಹತಾ ಅಭ್ಯರ್ಥಿಗಳಿಗೆ ಕನಿಷ್ಠ 26, ಗರಿಷ್ಠ 42 ವರ್ಷ. ಪ್ರವರ್ಗ 2ಎ/ 3ಎ/ 3ಬಿ ಅಭ್ಯರ್ಥಿಗಳಿಗೆ ಕನಿಷ್ಠ 26, ಗರಿಷ್ಠ 45 ವರ್ಷ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1ರ ಅಭ್ಯರ್ಥಿಗಳಿಗೆ ಕನಿಷ್ಠ 26, ಗರಿಷ್ಠ 47 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕಗಳ ವಿವರಗಳು

ಅರ್ಜಿ ಶುಲ್ಕಗಳ ವಿವರಗಳು

ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000, ಪ್ರವರ್ಗ 2ಎ/3ಎ/ 3ಬಿಗೆ ಸೇರಿದ ಅಭ್ಯರ್ಥಿಗಳು ರೂ. 500, ಮಾಜಿ ಸೈನಿಕರಿಗೆ ರೂ. 100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಪ.ಜಾ/ಪ.ಪಂ/ಅಂಗವಿಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಪಾವತಿಸಲು 16/10/2020 ಕೊನೆಯ ದಿನವಾಗಿದೆ.

  Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
  ಆನ್‌ಲೈನ್ ಮೂಲಕ ಅರ್ಜಿ ಹಾಕಿ

  ಆನ್‌ಲೈನ್ ಮೂಲಕ ಅರ್ಜಿ ಹಾಕಿ

  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿ ಭರ್ತಿ ಮಾಡಿ ಸಹಿ ಮಾಡಿದ ಬಳಿಕ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಚಲನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಇ-ಪೇಮೆಂಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

  English summary
  Karnataka health and family welfare department recruitment 2020. Apply for various post through online till October 16, 2020
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X