ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ನೌಕರಿ, ಆದೇಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16; ಯುದ್ಧ ಮತ್ತು ಯುದ್ಧದ ಮಾದರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರಾಗುವ ರಾಜ್ಯದ ಸೈನಿಕರ ಅವಲಂಬಿತ ಕುಟುಂಬದ ಒಬ್ಬರು ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಘೋಷಣೆ ಮಾಡಿದ್ದರು.

25 ವರ್ಷ ಸೇವೆ ಸಲ್ಲಿಸಿ ವಾಪಸ್ಸಾದ ಯೋಧ; ಭೋವಿವಾಡದ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ!25 ವರ್ಷ ಸೇವೆ ಸಲ್ಲಿಸಿ ವಾಪಸ್ಸಾದ ಯೋಧ; ಭೋವಿವಾಡದ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ!

ದೇಶದ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಗಾಗಿ ಹೋರಾಡುವ ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ದೇಶದ ಜನತೆಯ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಯುದ್ಧ/ ಯುದ್ಯದಂತಹ ಕಾರ್ಯಚರಣೆಯಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದಾಗ ಯೋಧರ ಕುಟುಂಬದ ಸದಸ್ಯರುಗಳಿಗೆ ಆಸರೆಯಾಗಿ ನಿಲ್ಲುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಧಾರವಾಡ: ಹೃದಯಾಘಾತದಿಂದ ಯೋಧ ಸಾವು, ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ಧಾರವಾಡ: ಹೃದಯಾಘಾತದಿಂದ ಯೋಧ ಸಾವು, ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ

Karnataka Govt To Give Job For One Member Of Martyred Soldier Family

ಯೋಧರ ಕುಟುಂಬದಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿದೆ. ಅನುಕಂಪದ ನೇಮಕಾತಿಯ ಬಗ್ಗೆ ಪ್ರಸ್ತಾಪವಿಲ್ಲದ ಕಾರಣ ಯುದ್ಧ/ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದ ಯೋಧರ ಅವಲಂಬಿತರಿಗೆ ಉತ್ತರಾಧಿಕಾರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ನೀಡುವ ಬಗ್ಗೆ ಹಾಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪರಿಗಣಿಸಲು ನಿರ್ಧರಿಸಲಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆಚಿಕ್ಕಮಗಳೂರು; ರಜೆ ಮುಗಿಸಿ ಹೊರಟ ಯೋಧ ಶವವಾಗಿ ಪತ್ತೆ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು, ಪ್ರಸ್ತುತ ಯುದ್ಧ ಹಾಗೂ ಯುದ್ಧದ ರೀತಿಯ ಕಾರ್ಯಾಚರಣೆಗಳಲ್ಲಿ ಮಡಿದ ವೀರ ಯೋಧರ ಅವಲಂಬಿತರಿಗೆ ಮಾಜಿ ಸೈನಿಕರ ಮೀಸಲಾತಿಯಡಿಯಲ್ಲಿ ಎಲ್ಲಾ ವೃಂದದ ಹುದ್ದೆಗಳಲ್ಲಿ ಶೇ 10 ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.

Karnataka Govt To Give Job For One Member Of Martyred Soldier Family

ಕರ್ನಾಟಕ ರಾಜ್ಯದಲ್ಲಿ ಹುತಾತ್ಮ ಯೋಧರ 400 ಕುಟುಂಬಗಳಿದ್ದು, ಅವರಲ್ಲಿ ಸುಮಾರು 200 ಮಂದಿ ಅವಲಂಬಿತರು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಹರಿದ್ದಾರೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಯುದ್ಧ/ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಅವಲಂಬಿತರಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲು ಪರಿಗಣಿಸಬಹುದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯೋಧರಿಗೆ ನೀಡುವ ಸೌಲಭ್ಯಗಳು; ಪ್ರಸ್ತುತ ಕರ್ನಾಟಕ ಸರ್ಕಾರದ ವತಿಯಿಂದ ಹುತಾತ್ಮ ಯೋಧರ ಕುಟುಂಬದವರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ. ಎಕ್ಸ್‌ಗ್ರೇಷಿಯಾ ರೂ. 50 ಲಕ್ಷಗಳು. ಉಚಿತ ಮನೆ ಅನುದಾನ 6 ಲಕ್ಷ (ಅಧಿಕಾರಿ ಶ್ರೇಣಿಯವರಿಗೆ), 4.50 ಲಕ್ಷ (ಇತರೆ ಶ್ರೇಣಿಯವರಿಗೆ). ಉಚಿತ ನಿವೇಶನ 60*40 (ಅಧಿಕಾರಿ ಶ್ರೇಣಿಯವರಿಗೆ), 30*40 (ಇತರೆ ಶ್ರೇಣಿಯವರಿಗೆ).

ಉಚಿತ ಜಮೀನು 2 ಎಕರೆ ನೀರಾವರಿ ಜಮೀನು. 4 ಎಕರೆ ಮಳೆ ಆಶ್ರಿತ ಭೂಮಿ, 8 ಎಕರೆ ಒಣಭೂಮಿ. ಜಮೀನಿನ ಬದಲಿಗೆ ನಗದು ಅನುದಾನ ರೂ. 6 ಲಕ್ಷ. ಮನೆ ದುರಸ್ತಿ ಅನುದಾನ (ಪ್ರತಿ 15 ವರ್ಷಕ್ಕೆ) ರೂ. 3 ಲಕ್ಷಗಳು.

ಮದುವೆ ಅನುದಾನ (ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ) ರೂ. 5 ಲಕ್ಷ. ಉಚಿತ ಬಸ್ ಪಾಸ್, ಆಸ್ತಿ ತೆರಿಗೆ ವಿನಾಯಿತಿ ಶೇ 50ರಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹುತಾತ್ಮ ಯೋಧರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದ ಜೊತೆ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.

ಯಾವುದೇ ಅಡೆತಡೆಯಾಗದೆಯೇ ಹುತಾತ್ಮ ಯೋಧರ ಮನೆ ಬಾಗಿಲಿಗೆ ಉದ್ಯೋಗದ ಆದೇಶ ಪ್ರತಿಯನ್ನು ಕಳುಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.

English summary
Karnataka government approved for the proposal of government job for the one member of a martyred soldier's family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X