ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4000 ಅತಿಥಿ ಶಿಕ್ಷಕರ ಹುದ್ದೆ ಭರ್ತಿಗೆ ಒಪ್ಪಿಗೆ, ಜಿಲ್ಲಾವಾರು ಪಟ್ಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 31; ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 4000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಈ ಕುರಿತು ಮಾಹಿತಿ ನೀಡಿದೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. 2021-22ನೇ ಸಾಲಿನಲ್ಲಿ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮೊದಲ ಹಂತದಲ್ಲಿ 18,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿತ್ತು. 2ನೇ ಹಂತದಲ್ಲಿ 4 ಸಾವಿರ ನೇಮಕಾತಿ ನಡೆಯುತ್ತಿದೆ.

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ 3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೆಪ್ಟೆಂಬರ್ 2021 ರಿಂದ ಮಾರ್ಚ್ 2022ರ ವರೆಗೆ ಅಥವ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವೆರಡಲ್ಲಿ ಯಾವುದು ನಂತರವೂ ಅಲ್ಲಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ

Karnataka Govt Approved For 4000 Guest Teacher Recruitment

ಸರ್ಕಾರದ ಆದೇಶದ ಅನುಸಾರ 4000 ಅತಿಥಿ ಶಿಕ್ಷಕರ ಹುದ್ದೆಗಳನ್ನು ಸರ್ಕಾರದ ಆದೇಶದ ಷರತ್ತಿಗೆ ಒಳಪಟ್ಟು ಜಿಲ್ಲಾ ಉಪ ನಿರ್ದೇಶಕರ ವಿಲೇವಾರಿಯಲ್ಲಿ ಹಂಚಿಕೆ ಮಾಡಿ ಆದೇಶಿಸಿದೆ. ಜಿಲ್ಲಾ ಉಪ ನಿರ್ದೇಶಕರು ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕುಗಳ ಅಗತ್ಯತೆ/ಅವಶ್ಯಕತೆಯನ್ನು ಆಧರಿಸಿ ಮರು ಹಂಚಿಕೆ ಮಾಡಿ ಆದೇಶ ಹೊರಡಿಸಬಹುದು.

ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಸಂಭಾವನೆ ಪಾವತಿ ಮಾಡಲು ತಾಲೂಕು/ ವಲಯವಾರು ವಿವರಗಳನ್ನು ಜಿಲ್ಲಾ ಉಪನಿರ್ದೇಶಕರು ಕ್ರೂಢೀಕರಿಸಿ, ತಾಲೂಕುವಾರು ಅಗತ್ಯವಿರುವ ಅನುದಾನ ಬೇಡಿಕೆ ಸಹಿತ ದೃಢೀಕೃತ ವರದಿಯನ್ನು ಜನವರಿ 10ರೊಳಗೆ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿಯಂತೆ ಒಟ್ಟು 30,606 ಶಿಕ್ಷಕರ ಹುದ್ದೆಗಳು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇವೆ. ಇವುಗಳಲ್ಲಿ ಆರ್ಥಿಕ ಇಲಾಖೆ ಅನುಮೋದನೆ ಬಳಿಕ ಪ್ರಥಮ ಹಂತದಲ್ಲಿ 18,000 ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಸ್ತುತ 12,606 ಹುದ್ದೆಗಳು ಖಾಲಿ ಇವೆ. ಆರ್ಥಿಕ ಇಲಾಖೆಯು 2ನೇ ಹಂತದಲ್ಲಿ 4000 ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಿದೆ. ಇವುಗಳ ಜಿಲ್ಲಾವಾರು ಹಂಚಿಕೆ ಹೀಗಿದೆ.

ಜಿಲ್ಲಾವಾರು ಖಾಲಿ ಹುದ್ದೆ, ನೇಮಕಾತಿ ವಿವರ; ಬೆಂಗಳೂರು ಉತ್ತರ ಖಾಲಿ ಹುದ್ದೆ 187, ನೇಮಕಾತಿ 10 ಹುದ್ದೆಗಳು. ಬೆಂಗಳೂರು ದಕ್ಷಿಣ (183) 62, ಬೆಂಗಳೂರು ಗ್ರಾಮಾಂತರ (149) 42, ಕೋಲಾರ (160) 45, ಚಿಕ್ಕಬಳ್ಳಾಪುರ (216) 65, ತುಮಕೂರು (263) 74.

ಮಧುಗಿರಿ (180) 61, ಚಿತ್ರದುರ್ಗ (307) 98, ದಾವಣಗೆರೆ (102) 29, ಶಿವಮೊಗ್ಗ (438) 123, ರಾಮನಗರ (186) 52, ಮೈಸೂರು (494) 138, ಚಾಮರಾಜನಗರ (215) 60, ಮಂಡ್ಯ 438 (123), ಹಾಸನ (194) 54, ಚಿಕ್ಕಮಗಳೂರು (127) 36, ಕೊಡಗು (103) 29.

ದಕ್ಷಿಣ ಕನ್ನಡ (532) 149, ಉಡುಪಿ (199) 56, ಬೆಳಗಾವಿ (633) 177, ಚಿಕ್ಕೋಡಿ (871) 244, ಉತ್ತರ ಕನ್ನಡ (135) 38, ಸಿರ್ಸಿ (389) 109, ಗದಗ (214) 60, ಧಾರವಾಡ (245) 69, ವಿಜಯಪುರ (752) 211, ಹಾವೇರಿ (327) 92, ಗುಲ್ಬರ್ಗ (1034) 414 ಹುದ್ದೆಗಳು.

ಯಾದಗಿರಿ (649) 260, ಬಳ್ಳಾರಿ (707) 283, ರಾಯಚೂರು (733) 293, ಕೊಪ್ಪಳ (391) 156, ಬೀದರ್ (228) 91, ಬಾಗಲಕೋಟೆ (625) 200 ಶಿಕ್ಷಕರ ಹುದ್ದೆಗಳು ಹಂಚಿಕೆಯಾಗಿವೆ.

Recommended Video

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

English summary
Finance department of Karnataka approved for the 4000 guest teacher recruitment for government primary school. Here are the list of the districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X