• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರಸಭೆಯಲ್ಲಿ ಲೆಕ್ಕಾಧಿಕಾರಿ ಹುದ್ದೆ ಸೃಷ್ಟಿ; ಸರ್ಕಾರದ ಆದೇಶ

|
Google Oneindia Kannada News

ಬೆಂಗಳೂರು, ಜನವರಿ 20; ರಾಜ್ಯದ ಗ್ರೇಡ್ -2 ನಗರಸಭೆಗಳಲ್ಲಿ ತಲಾ ಒಂದರಂತೆ 44 ಲೆಕ್ಕಾಧಿಕಾರಿ ಹುದ್ದೆಗಳನ್ನು ಸೃಜಿಸಲು ಸರ್ಕಾರ ತೀರ್ಮಾನಿಸಿದೆ. ವೇತನ ಶ್ರೇಣಿಯನ್ನು ಸಹ ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಎಲ್. ಪ್ರಸಾದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜ್ಯದ ಗ್ರೇಡ್-2 ನಗರಸಭೆಗಳಲ್ಲಿ ಲೆಕ್ಕಾಧಿಕಾರಿ ಹುದ್ದೆಗಳನ್ನು ಸೃಜಿಸುವ ಬಗ್ಗೆ ಎಂಬ ವಿಷಯದಲ್ಲಿ ಆದೇಶ ಪ್ರಕಟವಾಗಿದೆ.

ಅತಿಥಿ ಉಪನ್ಯಾಸಕರ ನೇಮಕಾತಿ; ಜ. 21ರ ತನಕ ಅರ್ಜಿ ಹಾಕಿ ಅತಿಥಿ ಉಪನ್ಯಾಸಕರ ನೇಮಕಾತಿ; ಜ. 21ರ ತನಕ ಅರ್ಜಿ ಹಾಕಿ

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕರ್ನಾಟಕ ಪುರಸಭೆಗಳ (ಅಧಿಕಾರಿ/ ನೌಕರರ ನೇಮಕಾತಿ) ನಿಯಮಗಳು 2018 ಅನ್ನು ರಚಿಸಲು ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಹಾಕಿ; 15,000 ರೂ. ಸ್ಟೈಫಂಡ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಹಾಕಿ; 15,000 ರೂ. ಸ್ಟೈಫಂಡ್

ಈ ಪ್ರಸ್ತಾವನೆಯಲ್ಲಿ ನೇಮಕಾತಿ ನಿಯಮಗಳಲ್ಲಿನ 1,765 ವಿವಿಧ ವೃಂದಗಳ ಹುದ್ದೆಗಳನ್ನು ರದ್ದುಪಡಿಸಲು ಹಾಗೂ 958 ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಪೌರಾಡಳಿತ ನಿರ್ದೇಶನಾಲಯ ಉಲ್ಲೇಖಿಸಿತ್ತು.

ಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ

1,765 ವಿವಿಧ ವೃಂದಗಳನ್ನು ರದ್ದುಪಡಿಸಿದಲ್ಲಿ ವಾರ್ಷಿಕ ಸುಮಾರು 63.44 ಕೋಟಿ ರೂ. ವೆಚ್ಚ ಉಳಿತಾಯವಾಗಲಿದೆ. 958 ವಿವಿಧ ವೃಂದಗಳ ಹುದ್ದೆಗಳನ್ನು ಸೃಜಿಸಿದಲ್ಲಿ ವಾರ್ಷಿಕ 37.50 ಕೋಟಿ ತಗಲುತ್ತದೆ.

ರದ್ದು ಮಾಡುವ ಹುದ್ದೆಗಳಿಗಿಂತ ಹೊಸದಾಗಿ ಸೃಜಿಸುವ ಹುದ್ದೆಗಳ ಆರ್ಥಿಕ ಹೊರೆ ಕಡಿಮೆ ಇರುವುದರಿಂದ 2018ರ ಕರಡು ವೃಂದ ನೇಮಕಾತಿ ನಿಯಮಗಳನ್ನು ಅನುಮೋದಿಸುವಂತೆ ಪೌರಾಡಳಿತ ನಿರ್ದೇಶಕರು ಕೋರಿದ್ದರು.

ಈ ಪ್ರಸ್ತಾವನೆಯನ್ನು ಪರಿಶೀಲಿಸಿ 17/12/2019 ಮತ್ತು ತಿದ್ದುಪಡಿ 6/4/2021ರ ಆದೇಶದಲ್ಲಿ ಗ್ರೇಡ್-1 ನಗರಸಭೆಗಳಲ್ಲಿ 14 ಲೆಕ್ಕಾಧಿಕಾರಿ ಹುದ್ದೆಗಳನ್ನು 43,100-83,900 ರೂ. ವೇತನ ಶ್ರೇಣಿಯಲ್ಲಿ ಸೃಜಿಸಲಾಗಿದೆ.

ಗ್ರೇಡ್-1 ನಗರಸಭೆಗಳಂತೆ ಗ್ರೇಡ್ -2 ನಗರಸಭೆಗಳಲ್ಲಿಯೂ ಸಹ ಹಣಕಾಸಿನ ಚಟುವಟಿಕೆ ನಡೆಯುತ್ತಿದೆ. ಎಲ್ಲಾ ನಗರಸಭೆಗಳಲ್ಲಿಯೂ ಲೆಕ್ಕಾಧಿಕಾರಿ ಹುದ್ದೆಗಳನ್ನು ಸೃಜಿಸುವ ಅವಶ್ಯಕತೆ ಮನಗಂಡು ಕರ್ನಾಟಕ ಪುರಸಭೆಗಳ (ಅಧಿಕಾರಿ/ ನೌಕರರ ನೇಮಕಾತಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಷರತ್ತಿಗೆ ಒಳಪಟ್ಟುಗ್ರೇಡ್ -2 ನಗರಸಭೆಗಳಲ್ಲಿಯೂ ಲೆಕ್ಕಾಧಿಕಾರಿ ಹುದ್ದೆ ಸೃಜಿಸಲು ಒಪ್ಪಿಗೆ ಕೊಡಲಾಗಿದೆ.

ವೇತನ ಶ್ರೇಣಿ; ಗ್ರೇಡ್ -2 ನಗರಸಭೆಗಳಲ್ಲಿ ತಲಾ ಒಂದರಂತೆ 44 ಲೆಕ್ಕಾಧಿಕಾರಿ ಹುದ್ದೆಗಳನ್ನು ಸೃಜಿಸಲಾಗುತ್ತದೆ. ವೇತನ ಶ್ರೇಣಿ 43,100-83,900 ಆಗಿದೆ. ಸರ್ಕಾರ ಹುದ್ದೆಗಳನ್ನು ಸೃಜಿಸಲು ಆದೇಶ ನೀಡಿದೆ.

   KL Rahul ಪ್ರಕಾರ ಪಂದ್ಯ ಸೋಲಲು ಇದೇ ಮುಖ್ಯ ಕಾರಣ | Oneindia Kannada

   ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ನಗರಸಭೆಗಳಲ್ಲಿ ಲೆಕ್ಕಶಾಖೆಯನ್ನು ಬಲಪಡಿಸಿ ನಗರಸಭೆ ಹಣಕಾಸಿನ ವ್ಯವಹಾರಗಳನ್ನು ಸೂಕ್ತವಾಗಿ ನಿಭಾಯಿಸಲು ಅನುಕೂಲವಾಗುವಂತೆ ಕರ್ನಾಟಕ ಪುರಸಭೆಗಳ (ಅಧಿಕಾರಿ/ ನೌಕರರ ನೇಮಕಾತಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಷರತ್ತಿಗೆ ಒಳಪಟ್ಟು 44 ಹುದ್ದೆ ಸೃಜಿಸಲು ಒಪ್ಪಿಗೆ ಕೊಡಲಾಗಿದೆ.

   ಸಮುದಾಯ ಸಂಪನ್ಮೂಲ ಹುದ್ದೆಗೆ ಅರ್ಜಿ ಹಾಕಿ; ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯಿತಿ ವತಿಯಿಂದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿ ಡೇ-ನಲ್ಮ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಕರೆಯಲಾಗಿದೆ.

   ಸ್ವ-ಸಹಾಯ ಸಂಘ (ಗುಂಪು) ಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 8 ಸಾವಿರ ರೂ. ಹಾಗೂ ಸಾರಿಗೆ ಭತ್ಯೆ 2 ಸಾವಿರ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಫೆಬ್ರವರಿ 1.

   ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು, ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ಇದೆ. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಯಸ್ಸು 18 ರಿಂದ 45 ವರ್ಷ ವರ್ಷ ಒಳಗಿರಬೇಕು. ಕನಿಷ್ಠ 3 ವರ್ಷಗಳಿಂದ ಸ್ವ-ಸಹಾಯ ಸಂಘ(ಗುಂಪಿನಲ್ಲಿ) ಸದಸ್ಯರಾಗಿರಬೇಕು.

   ಆಂತರಿಕ ಸಾಲ ಪಡೆದು ಕಟುಬಾಕಿದಾರರಾಗಿರಬಾರದು, ಸರ್ಕಾರಿ/ ಅರೇ ಸರ್ಕಾರಿ/ ಎನ್.ಜಿ.ಒಗಳಲ್ಲಿ ಉದ್ಯೋಗಸ್ಥರಾಗಿರಬಾರದು. ಉತ್ತಮ ಸಂವಹನ ಕೌಶಲ್ಯ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು.

   ಕಾರ್ಯ ನಿಮಿತ್ತ ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗೆ ಸಂಚಾರಕ್ಕೆ ಸಿದ್ಧರಿರಬೇಕು. ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಸಕ್ತ ಅರ್ಜಿದಾರರು ಕಛೇರಿಯ ಅವಧಿಯಲ್ಲಿ ಭೇಟಿ ಅರ್ಜಿ ಸಲ್ಲಿಸಬಹುದು.

   English summary
   Karnataka government approved to create 44 accountant post at grade- 2 city municipal council (CMC).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X