ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗದಿಂದ ಚೇತರಿಕೆ ಕಂಡ ಕರ್ನಾಟಕ; ದೇಶದಲ್ಲೇ ಟಾಪ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಲಾಕ್ ಡೌನ್ ಮುಗಿದ ಬಳಿಕ ನಿರುದ್ಯೋಗ ಸಮಸ್ಯೆಯಿಂದ ಕರ್ನಾಟಕ ಬಹು ಬೇಗ ಚೇತರಿಕೆ ಕಾಣುತ್ತಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ದಾಖಲಾಗಿತ್ತು.

ಭಾರತೀಯ ಆರ್ಥಿಕ ನಿಗಾ ಸಂಸ್ಥೆ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಏಪ್ರಿಲ್‌ನಲ್ಲಿ ದೇಶದ ನಿರುದ್ಯೋಗದ ಪ್ರಮಾಣ 23.5ರಷ್ಟಿತ್ತು. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಈ ಪ್ರಮಾಣ 29.8ರಷ್ಟಿತ್ತು.

ನಿರುದ್ಯೋಗ ಭತ್ಯೆ ಕೊಡಲು ಸರ್ಕಾರಕ್ಕೆ ಏಕೆ ಮನಸ್ಸಿಲ್ಲ?ನಿರುದ್ಯೋಗ ಭತ್ಯೆ ಕೊಡಲು ಸರ್ಕಾರಕ್ಕೆ ಏಕೆ ಮನಸ್ಸಿಲ್ಲ?

ಸೆಪ್ಟೆಂಬರ್‌ನಲ್ಲಿ ದೇಶದಲ್ಲಿನ ನಿರುದ್ಯೋಗ ಪ್ರಮಾಣ 6.7ರಷ್ಟಿದೆ. ಕರ್ನಾಟಕದಲ್ಲಿನ ಪ್ರಮಾಣ ಶೇ 2.4ರಷ್ಟಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ನಿರುದ್ಯೋಗದಿಂದ ಬೇಗ ಚೇತರಿಸಿಕೊಂಡಿದೆ.

ಸತತ 2ನೇ ವಾರ ಗ್ರಾಮೀಣ ಪ್ರದೇಶದ ನಿರುದ್ಯೋಗ ದರ ಏರಿಕೆಸತತ 2ನೇ ವಾರ ಗ್ರಾಮೀಣ ಪ್ರದೇಶದ ನಿರುದ್ಯೋಗ ದರ ಏರಿಕೆ

Karnataka Emerged Out Of Unemployment Crisis After Lock Down

ರಾಜ್ಯದಲ್ಲಿ ಐಟಿ ಮತ್ತು ಡಿಜಿಟಲ್ ಸೇವೆಗಳ ಉದ್ಯೋಗಗಳು ಆರಂಭವಾಗಿವೆ. ಬೇರೆ ರಾಜ್ಯಗಳಿಗೆ ವಲಸೆ ಹೋದ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದರಿಂದಾಗಿ ನಿರುದ್ಯೋಗದಿಂದ ಚೇತರಿಕೆ ಕಂಡಿದೆ ಎಂದು ಭಾರತೀಯ ಆರ್ಥಿಕ ನಿಗಾ ಸಂಸ್ಥೆ ವರದಿ ಹೇಳಿದೆ.

ಲಾಕ್‌ಡೌನ್ ಮುಂಚಿಗಿಂತಲೂ ಈಗ ಭಾರತದಲ್ಲಿ ಹೆಚ್ಚಿದೆ ನಿರುದ್ಯೋಗ ದರಲಾಕ್‌ಡೌನ್ ಮುಂಚಿಗಿಂತಲೂ ಈಗ ಭಾರತದಲ್ಲಿ ಹೆಚ್ಚಿದೆ ನಿರುದ್ಯೋಗ ದರ

ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಿರುದ್ಯೋದ ಪ್ರಮಾಣ ಶೇ 4.55, ಗುಜರಾತ್‌ನಲ್ಲಿ ಶೇ 3.4 ಮತ್ತು ತಮಿಳುನಾಡಿನಲ್ಲಿ ಶೇ 5ರಷ್ಟಿದೆ. ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ಶೇ 21.7, ಜೂನ್‌ನಲ್ಲಿ 10.2ರಷ್ಟು, ಜುಲೈನಲ್ಲಿ 7.4 ರಷ್ಟು ನಿರುದ್ಯೋಗ ಪ್ರಮಾಣವಿತ್ತು.

ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ತೊರೆದು ಸಾವಿರಾರು ಜನರು ತವರು ರಾಜ್ಯ, ಊರುಗಳಿಗೆ ತೆರಳಿದ್ದರು. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾದ ಬಳಿಕ ಜನರು ವಾಪಸ್ ಬರುತ್ತಿದ್ದಾರೆ.

English summary
Centre for Monitoring Indian Economy (CMIE) report said that Karnataka is emerging out of the unemployment crisis after lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X