ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಸ್ಐಸಿಯಲ್ಲಿ 771 ಹುದ್ದೆಗಳಲ್ಲಿ ಕೆಲಸವಿದೆ, ನವೆಂಬರ್ 10 ಕೊನೆಯ ದಿನ

|
Google Oneindia Kannada News

ರಾಜ್ಯ ನೌಕರರ ವಿಮಾ ನಿಗಮದಲ್ಲಿ 771 ಹುದ್ದೆಗಳ ನೇಮಕಾತಿಗಾಗಿ 2018-19ರ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ.

ವಿಮಾ ವೈದ್ಯಕೀಯ ಅಧಿಕಾರಿ (ಐಎಂಓ) ಗ್ರೇಡ್-II (ಅಲೋಪತಿ) ಹುದ್ದೆಯನ್ನು ಬಯಸುವವರು ಅರ್ಜಿ ಸಲ್ಲಿಸಬಹುದು. ಆನ್‌ಲೈನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 12ರಿಂದಲೇ ಅರ್ಜಿಗಳ ಸಲ್ಲಿಕೆ ಆರಂಭವಾಗಿದ್ದು, 2018ರ ನವೆಂಬರ್ 10ರ ಒಳಗೆ ಅರ್ಜಿ ಸಲ್ಲಿಸಬೇಕು.

ಪಿಡಬ್ಲ್ಯೂಡಿ ಸೇರಿ ನಾಲ್ಕು ಇಲಾಖೆಗಳ ನೇಮಕಾತಿಗೆ ಸಿಎಂ ಅಸ್ತು ಪಿಡಬ್ಲ್ಯೂಡಿ ಸೇರಿ ನಾಲ್ಕು ಇಲಾಖೆಗಳ ನೇಮಕಾತಿಗೆ ಸಿಎಂ ಅಸ್ತು

ಉದ್ಯೋಗ ವಿವರ
ಸಂಸ್ಥೆ ಹೆಸರು: ರಾಜ್ಯ ನೌಕರರ ವಿಮಾ ನಿಗಮ (ಇಎಸ್ಐಸಿ)
ಒಟ್ಟು ಹುದ್ದೆಗಳು: 771
ಹುದ್ದೆಯ ಹೆಸರು: ವಿಮಾ ವೈದ್ಯಕೀಯ ಅಧಿಕಾರಿ (ಐಎಂಓ)
ಕೆಲಸದ ಸ್ಥಳ: ಭಾರತದ ಎಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 10 ನವೆಂಬರ್, 2018

jobs of imos for 771 posts in esic

ಶೈಕ್ಷಣಿಕ ಅರ್ಹತೆ
ಭಾರತೀಯ ವೈದ್ಯಕೀಯ ಕೌನ್ಸಿಲ್ ಕಾಯ್ದೆ 1956ರ ಮೊದಲ ಅಥವಾ ಎರಡನೆಯ ಷೆಡ್ಯೂಲ್ ಅಥವಾ ಮೂರನೇ ಷೆಡ್ಯೂಲ್ ಎರಡನೆಯ ಭಾಗಕ್ಕೆ ಅನುಗುಣವಾಗಿ ವೈದ್ಯಕೀಯ ಅರ್ಹತೆ ಪಡೆದುಕೊಂಡಿರಬೇಕು.

ಅರಣ್ಯ ಇಲಾಖೆಯಲ್ಲಿ 6 ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಅರಣ್ಯ ಇಲಾಖೆಯಲ್ಲಿ 6 ಹುದ್ದೆಗಳ ಭರ್ತಿಗೆ ನೇರ ಸಂದರ್ಶನ

ಮೂರನೇ ಷೆಡ್ಯೂಲ್ ಎರಡನೆಯ ಭಾಗದ ಅಡಿ ಶೈಕ್ಷಣಿಕ ಅರ್ಹತೆ ಗಿಟ್ಟಿಸಿದವರು ಕಾಯ್ದೆಯ 13ನೇ ಸೆಕ್ಷನ್ ಅಡಿ ನಮೂದಿಸಿರುವ ಉಪ ವಿಭಾಗದದ ಷರತ್ತುಗಳನ್ನು ಭರ್ತಿ ಮಾಡಬೇಕು. ಮತ್ತು ಕಡ್ಡಾಯ ಇಂಟರ್ನ್‌ಶಿಪ್ ಹಾಗೂ ಭಾರತೀಯ ವೈದ್ಯಕೀಯ ಮಂಡಳಿಯ ನೋಂದಣಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಾನ: 2018ರ ನವೆಂಬರ್ 10ಕ್ಕೆ 30 ವರ್ಷ ಮೀರಿರಬಾರದು

250 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಜಮ್ಮು ಎಂಡ್ ಕಾಶ್ಮೀರ ಬ್ಯಾಂಕ್ 250 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಜಮ್ಮು ಎಂಡ್ ಕಾಶ್ಮೀರ ಬ್ಯಾಂಕ್

ವೇತನ ವಿವರ: ಮಾಸಿಕ 53,100-1,67,800 ರೂಪಾಯಿ

ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಇಲಾಖಾ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ 250 ರೂ.

ಇತರರಿಗೆ: 500 ರೂ.

ಆಯ್ಕೆ ಪ್ರಕ್ರಿಯೆ: ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧಾರಿತವಾಗಿರುತ್ತದೆ.

ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 13ನೇ ನವೆಂಬರ್ 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

English summary
Employees State Insurance Corporation has 771 vacancies for Insurance Medical Officer post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X