ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪೆನಿ ವಿಪ್ರೋದಲ್ಲಿ ಉದ್ಯೋಗವಕಾಶ; ಮಾಹಿತಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ದೇಶದ ಪ್ರಮುಖ ಐಟಿ ಕಂಪನಿ ವಿಪ್ರೋ ಎಲೈಟ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಅಡಿಯಲ್ಲಿ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಉದ್ಯೋಗಗಳಿಗಾಗಿ ಹೊಸದಾಗಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪದವೀಧರರು ಅರ್ಜಿ ಸಲ್ಲಿಸಬಹುದು.

ವಿಪ್ರೋ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಿ.ಇ/ ಬಿ. ಟೆಕ್ (ಕಡ್ಡಾಯ ಪದವಿ), ಎಂ.ಇ/ ಎಂ. ಟೆಕ್ (5 ವರ್ಷದ ಸಮಗ್ರ ಕೋರ್ಸ್) ಪದವಿ ಮುಗಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಫ್ಯಾಷನ್ ಟೆಕ್ನಾಲಜಿ, ಟೆಕ್ಸ್‌ಟೈಲ್ ಎಂಜಿನಿಯರಿಂಗ್, ಅಗ್ರಿಕಲ್ಚರ್ ಮತ್ತು ಫುಡ್​ ಟೆಕ್ನಾಲಜಿ ಪದವಿ ಪಡೆದವರೂ ಸಹ ಅರ್ಜಿ ಸಲ್ಲಿಸಬಹುದು ಎಂದು ವಿಪ್ರೋ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಹತೆ ಏನು?
ಮೇಲ್ಕಂಡ ಉದ್ಯೋಗಗಳ ನೇಮಕಾತಿಗೆ ಎಂಜಿನಿಯರಿಂಗ್ ಪದವಿ ಮುಗಿಸಿರುವ ಪದವೀಧರಿಂದ ಅರ್ಜಿ ಆಹ್ವಾನಿಸಿದರೂ, ಅದಕ್ಕೂ ಕೆಲ ಮಾನದಂಡಗಳನ್ನು ಸೂಚಿಸಿದೆ. ಅದರಂತೆ ಅರ್ಜಿದಾರರು ಹತ್ತನೇ ತರಗತಿ, 12ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಶಿಕ್ಷಣದಲ್ಲಿ ಮೂರು ವರ್ಷಗಳ ಅಂತರವನ್ನು ಸಹ ಅನುಮತಿಸಲಾಗಿದೆ.

Jobs In IT Company Wipro; Here Is The Information

ಯಾವ ವಯೋಮಿತಿವರು ಅರ್ಜಿ ಸಲ್ಲಿಸಬಹುದು
ಶೈಕ್ಷಣಿಕ ಮಾನದಂಡಗಳ ಹೊರತಾಗಿ, ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಅರ್ಜಿದಾರನ ವಯಸ್ಸು 25 ವರ್ಷ ಮೀರಿರಬಾರದು.

ಯಾರು ಅನರ್ಹರು?
ಕಳೆದ ಆರು ತಿಂಗಳಲ್ಲಿ ವಿಪ್ರೋ ಕಂಪೆನಿಯ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿ ಕಾರ್ಯಕ್ರಮಕ್ಕೆ ಅರ್ಹರಾಗಿರುವುದಿಲ್ಲ ಎಂದು ವಿಪ್ರೋ ಕಂಪೆನಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು, ವಿಪ್ರೋ ಮೂರು ವಿಭಾಗಗಳನ್ನು ಒಳಗೊಂಡಿರುವ ಆನ್‌ಲೈನ್ ಮೌಲ್ಯಮಾಪನವನ್ನು ನಡೆಸುತ್ತದೆ.
1 ಸಾಮರ್ಥ್ಯ ಪರೀಕ್ಷೆ (Aptitude Test)
2 ಲಿಖಿತ ಸಂವಹನ ಪರೀಕ್ಷೆ (Written Communication Test)
3 ಆನ್‌ಲೈನ್ ಪ್ರೋಗ್ರಾಮಿಂಗ್ ಪರೀಕ್ಷೆ (Online Programming Test)

ವೇತನ ಎಷ್ಟು?
ಆಯ್ಕೆಯಾದ 'ಪ್ರಾಜೆಕ್ಟ್ ಎಂಜಿನಿಯರ್'ಗಳಿಗೆ ಕಂಪೆನಿಯು ವಾರ್ಷಿಕ 3.5 ಲಕ್ಷ ರೂ. ವೇತನ ನೀಡುವ ಆಫರ್ ನೀಡಿದೆ.

ಕೊನೆಯ ದಿನಾಂಕ
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15, 2021 ಕೊನೆಯ ದಿನಾಂಕವಾಗಿದ್ದು, ಹಾಗೆಯೇ ಆನ್​ಲೈನ್ ಇಂಟರ್​ವ್ಯೂ ಅನ್ನು ಸೆಪ್ಟೆಂಬರ್ 25 ಮತ್ತು 27ರ ನಡುವೆ ನಡೆಸುವುದಾಗಿ ವಿಪ್ರೋ ಕಂಪನಿ ತಿಳಿಸಿದೆ.

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಪ್ರೋ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಈ ನೇಮಕಾತಿ ಕುರಿತಾದ ಯಾವುದೇ ಸಹಾಯಕ್ಕಾಗಿ, 'Elite NTH 2022' ವಿಷಯದೊಂದಿಗೆ [email protected] ಮೂಲಕ ಸಂಪರ್ಕಿಸಬಹುದು.

English summary
In The country's leading IT company Wipro in has a job opportunity and fresh graduates can apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X