ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ವಿಮ್ಸ್‌ನಲ್ಲಿ ಕೆಲಸ ಖಾಲಿ ಇದೆ; ಜ. 10ರಂದು ನೇರ ಸಂದರ್ಶನ

|
Google Oneindia Kannada News

ಬಳ್ಳಾರಿ, ಜನವರಿ 06; ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡತ್ತಿದೆ. 10/1/2022ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ಆಸ್ಪತ್ರೆ ನಿರ್ವಹಣೆಗಾಗಿ ಸೃಜನೆಯಾಗಿರುವ ಹುದ್ದೆಗಳಲ್ಲಿ ಕೋವಿಡ್ 19 3ನೇ ಅಲೆ ಸಮರ್ಪಕವಾಗಿ ನಿರ್ವಹಣೆ ಮಾಡಲು ಅವಶ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ 3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

ಗ್ರೂಪ್ 'ಸಿ' ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆ.ಟಿ.ಪಿ.ಪಿ. ನಿಯಮಗಳ ಅನುಸಾರ ಮೆ. ಕಿಯೋನ್ಸಿಕ್ ಬೆಂಗಳೂರು ಇವರ ಮೂಲಕ ತೆಗೆದುಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ.

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ 3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

Jobs In Ballari VIMS Walk In Interview On January 10

ಹುದ್ದೆಗಳ ವಿವರ; ಶುಶ್ರೂಷಾಧಿಕಾರಿ (110), ರೇಡಿಯೋಗ್ರಾಫರ್ (1), ಫಾರ್ಮಸಿ ಅಧಿಕಾರಿ (2), ಕ್ಷ-ಕಿರಣ ತಂತ್ರಜ್ಞರು (3), ಫಿಜಿಯೋಥೆರಪಿಸ್ಟ್ (1), ಡೆಯಟಿಷಿಯನ್ (1), ಲ್ಯಾಬ್ ಟೆಕ್ನಿಷಿಯನ್ (3), ಡ್ರೈವರ್ (6), ಡಯಾಲಿಸಿಸ್ ಟೆಕ್ನಿಷಿಯನ್ (1), ಸಿಟಿ ಟೆಕ್ನಿಷಿಯನ್ (2) ಹುದ್ದೆಗಳ ಭರ್ತಿಗೆ ನೇರ ಸಂದರ್ಶನವಿದೆ.

2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ

ಮೇಲಿನ ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಹಾಗೂ ಮಾನ್ಯತೆ ಹೊಂದಿದ ಕಾಲೇಜುಗಳಲ್ಲಿ ಪದವಿ/ ತಾಂತ್ರಿಕ ಕೋರ್ಸ್‌ಗಳನ್ನು ಹೊಂದಿರತಕ್ಕದ್ದು.

ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿರುತ್ತದೆ. ಯಾವುದೇ ಖಾಯಂ ನೇಮಕಾತಿಗಾಗಿ ಪರಿಗಣಿಸುವುದಿಲ್ಲ ಹಾಗೂ ಹಕ್ಕನ್ನು ಚಲಾಯಿಸುವಂತಿಲ್ಲ.

ಕೋವಿಡ್ 19 ಅವಧಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅಭ್ಯರ್ಥಿಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ. ಹೊರಗುತ್ತಿಗೆ ಅವಧಿಯು 6 ತಿಂಗಳಿನದ್ದಾಗಿದೆ.

ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ನಿರ್ದೇಶಕರು, ವಿಮ್ಸ್, ಬಳ್ಳಾರಿ, ಇವರ ಹೆಸರಿನಲ್ಲಿ ಡಿಡಿ ಪಡೆದು ಸಲ್ಲಿಸಬೇಕು.

www.vimsbellary.org.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗಳ ಜೊತೆ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಅರ್ಜಿ ಆಹ್ವಾನ; ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಹೊಸದಾಗಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಪ್ರಾರಂಭಿಸಲಾಗಿದೆ. ಈ ಸಂಸ್ಥೆಯಲ್ಲಿ 0-6 ವರ್ಷದ ಅನಾಥ, ಪರಿತ್ಯಜಿಸಲ್ಪಟ್ಟ ಹಾಗೂ ಒಪ್ಪಿಸಲ್ಪಟ್ಟ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಈ ಸಂಸ್ಥೆಯಲ್ಲಿದ್ದು, ಈ ಮಕ್ಕಳನ್ನು ಪೋಷಿಸಲು 3 ಆಯಾ ಹುದ್ದೆ ಹಾಗೂ 1 ರಕ್ಷಕ ಹುದ್ದೆಗಳ ಅವಶ್ಯಕತೆ ಇದೆ.

ಅರ್ಹ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಲಸಕ್ಕೆ ಬರುವ ಸಿಬ್ಬಂದಿಗಳು ಹಗಲು, ರಾತ್ರಿ ಪಾಳಿ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸುವವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ದೂರವಾಣಿ ಸಂಖ್ಯೆ 08272-228800 ಅನ್ನು ಸಂಪರ್ಕಿಸಬಹುದು.

ಸ್ವಯಂ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸೌಹಾರ್ಧ ಗ್ರಾಮೀಣಾಭಿವೃದ್ಧಿ ಅಕಾಡೆಮಿ ಹಾಗೂ ಮಾತೃಭೂಮಿ ಸಂಸ್ಥೆ ಬೀದರ್ ಇವುಗಳ ಸಹಯೋಗದೊಂದಿಗೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯಡಿ ಬೀದರ ಜಿಲ್ಲೆಯ ಗಡಿಭಾಗದ 50 ಹಳ್ಳಿಗಳಲ್ಲಿ 9 ತಿಂಗಳುಗಳ ಕಾಲ ಕನ್ನಡ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಯೋಜನೆಯಡಿ ಸ್ವಯಂ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅವರು ತಿಳಿಸಿದ್ದಾರೆ. ಆಸಕ್ತಿಯುಳ್ಳ ಅಭ್ಯರ್ಥಿಗಳ ವಯೋಮಿತಿ 20 ರಿಂದ 40 ವರ್ಷದೊಳಗಿರಬೇಕು.

ಬೀದರ್ ಜಿಲ್ಲೆಯಲ್ಲಿ ಕನ್ನಡ ಕಲಿಸಲು ಆಯ್ದುಕೊಂಡಿರುವ ಗ್ರಾಮದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2022ರ ಜನವರಿ 7 ಕೊನೆಯ ದಿನವಾಗಿದೆ. 2022ರ ಜನವರಿ 15 ರಂದು ಸಂದರ್ಶನ ಜರುಗಲಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ https://sahithyaacademy.karnataka.gov.in ವೆಬ್‍ಸೈಟ್‍ದಿಂದ ನಿಗದಿತ ಅರ್ಜಿ ನಮೂನೆ ಹಾಗೂ ಕನ್ನಡ ಕಲಿಸುವ ಗ್ರಾಮಗಳು ಸೇರಿದಂತೆ ಮತ್ತಿತರ ವಿವರವನ್ನು ಪಡೆಯಬಹುದಾಗಿದೆ.

Recommended Video

ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಸಲ್ಲಾ - ಸಿದ್ದು | Oneindia Kannada

English summary
Walk in interview for nursing 0fficer, driver, lab Technician vacancies at Vijayanagar Institute of Medical Sciences Bellary. Candidates can attend walk in interview on January 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X