ಐಬಿಪಿಎಸ್ನಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆಗೆ ಮೇ 31 ಕೊನೆ ದಿನ
ನವದೆಹಲಿ, ಮೇ 23 : ದಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(ಐಬಿಪಿಎಸ್) 2022ನೇ ಸಾಲಿನ ನೇಮಕಾತಿಯನ್ನು ಮುಂದುವರಿಸಿದೆ. ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಶಿಕ್ಷಕರ ಹುದ್ದೆ ನೇಮಕಾತಿ 2022: ಐವರಲ್ಲಿ ಒಬ್ಬರಿಗೆ ಉದ್ಯೋಗ ಖಚಿತ
ಸಂಸ್ಥೆ ಹೆಸರು: ದಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್
ಹುದ್ದೆ ಹೆಸರು: ರೀಸರ್ಷ್ ಅಸೋಸಿಯೇಟ್
ಗ್ರೇಡ್: ಇ
ಹುದ್ದೆ ಮಾಡಬೇಕಾದ ಸ್ಥಳ: ಐಬಿಪಿಎಸ್ ಮುಂಬೈ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 31
ವಾರ್ಷಿಕ 12 ಲಕ್ಷ ವೇತನ
ವೇತನ ವಿವರ: ತಿಂಗಳಿಗೆ 44,900 ರೂ. ( ಸಿಟಿಸಿ ಅನ್ವಯ ವಾರ್ಷಿಕವಾಗಿ 12 ಲಕ್ಷವರೆಗೆ )
ಅರ್ಜಿ ಶುಲ್ಕ : 1000 ರೂ
ರಿಸರ್ಚ್ ಅಸೋಸಿಯೇಟ್ ಆಗಿ IBPS ಗೆ ಸೇರಲು ಬಯಸುವ ಅರ್ಹ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಗಳನ್ನು ಮೇ 31, 2022 ರ ಒಳಗೆ ಅಥವಾ ಮೇಲಿನ ಪೋಸ್ಟ್ಗೆ ಸಲ್ಲಿಸಬೇಕು. ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ರೂ 1000 ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆಯ್ಕೆ ವಿಧಾನ
* ಆನ್ಲೈನ್ ಪರೀಕ್ಷೆ
* ಗುಂಪು ಸಂದರ್ಶನ
* ವೈಯಕ್ತಿಕ ಸಂದರ್ಶ
ಅರ್ಹತೆಗಳು
* ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ 30 ವರ್ಷಳಾಗಿರುತ್ತದೆ. ಅಂದರೆ; ಅಭ್ಯರ್ಥಿಯು ಮೇ 2, 1995 ಕ್ಕಿಂತ ಮೊದಲು ಜನಿಸಬಾರದು ಮತ್ತು ಮೇ 1, 2001 ಕ್ಕಿಂತ ನಂತರ ಜನಿಸಬಾರದು.
* ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ 55% ಅಂಕದೊಂದಿಗೆ ಮನೋವಿಜ್ಞಾನ/ಶಿಕ್ಷಣ/ ಸೈಕಲಾಜಿಕಲ್ ಮೆಸ್ಯೂರ್ಮೆಂಟ್/ಸೈಕೋಮೆಟ್ರಿಕ್ಸ್ ಮ್ಯಾನೇಜ್ಮೆಂಟ್(ಹೆಚ್ಆರ್ ವಿಭಾಗದಲ್ಲಿ ವಿಶೇಷತೆ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
* ಶೈಕ್ಷಣಿಕ ಸಂಶೋಧನೆ/ಪರೀಕ್ಷೆ ಅಭಿವೃದ್ಧಿಯಲ್ಲಿ ಒಂದು ವರ್ಷದ ಅನುಭವ ಇರಬೇಕು. ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸಿಬಿಐನಲ್ಲಿ ಉದ್ಯೋಗ, ತಿಂಗಳಿಗೆ 40,000 ಸಂಬಳ, ಮೇ 31 ಕೊನೆ ದಿನ
ಅರ್ಜಿ ಸಲ್ಲಿಸುವುದು ಹೇಗೆ?
* ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು IBPS ನ ಅಧಿಕೃತ ಸೈಟ್ಗೆ (https://www.ibps.in/) ಭೇಟಿ ನೀಡಬೇಕು
* ಮುಖಪುಟದಲ್ಲಿ ಮೇ 11, 2022 ರಂದು ರಿಸರ್ಚ್ ಅಸೋಸಿಯೇಟ್ಸ್ ಹುದ್ದೆಯ ಜಾಹೀರಾತಿನ್ನು ಕ್ಲಿಕ್ ಮಾಡಿ
* IBPS ರಿಸರ್ಚ್ ಅಸೋಸಿಯೇಟ್ ನೇಮಕಾತಿ 2022- ಮೇ 11 ರಿಂದ ನೋಂದಣಿ ಪ್ರಾರಂಭ ಎಂಬ ಲಿಂಕ್ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
* ನಂತರ ಹೊಸ ವಿಂಡೋ ತೆರೆಯುತ್ತದೆ. ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.
* ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ
* ಎಲ್ಲಾ ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ಸರಿಯಾಗಿ ಪರಿಶೀಲಿಸಿ 1000 ರೂ. ಶುಲ್ಕವನ್ನು ಪಾವತಿಸಿ
* ನಂತರ ಅರ್ಜಿ ನಮೂನೆಯನ್ನು ಪರಿಶೀಲಿಸಿ ಮತ್ತು ಡೌನ್ಲೋಡ್ ಮಾಡಿಕೊಳ್ಳಿ. ಭವಿಷ್ಯದ ಬಳಕೆಗಾಗಿ ಒಂದು ಪ್ರಿಂಟ್ಔಟ್ ತೆಗೆದುಕೊಳ್ಳಿ.