ಸಿಬಿಐನಲ್ಲಿ ಉದ್ಯೋಗ, ತಿಂಗಳಿಗೆ 40,000 ಸಂಬಳ, ಮೇ 31 ಕೊನೆ ದಿನ
ನವದೆಹಲಿ, ಮೇ 21: ಕೇಂದ್ರ ತನಿಖಾ ದಳ ಸಿಬಿಐನಲ್ಲಿ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಚಂಡೀಗಡ, ಪಂಚಕುಲ ಮತ್ತು ಮೊಹಾಲಿಯಲ್ಲಿ ಚಂಡೀಗಡದ ವಿವಿಧ ಕೋರ್ಟ್ಗಳಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದ ಕೆಲಸಗಳನ್ನು ತೊಡಗುವುದು ಈ ಹುದ್ದೆಯ ಜವಾಬ್ದಾರಿಯಾಗಿರುತ್ತದೆ.
ಸಿಬಿಐನ ಈ ನಿರ್ದಿಷ್ಟ ಕಾರ್ಯಗಳಿಗೆ ತೆಗೆದುಕೊಳ್ಳಲಾಗುವ ಕನ್ಸಲ್ಟೆಂಟ್ ಹುದ್ದೆಗಳು ಪೂರ್ಣಾವಧಿ ಆಗಿರುತ್ತವೆ. ಈ ಅವಧಿಯಲ್ಲಿ ಉದ್ಯೋಗಿಗಳು ಬೇರಾವುದೇ ಖಾಸಗಿ ಕಂಪನಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.
ಉದ್ಯೋಗದ ವಿವರ:
ಸಂಸ್ಥೆ: ಸಿಬಿಐ
ಹುದ್ದೆ: ಕನ್ಸಲ್ಟೆಂಟ್
ಸಂಬಳ: ತಿಂಗಳಿಗೆ 40 ಸಾವಿರ ರೂ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2022, ಮೇ 31
ಅರ್ಹತೆ: ಕೇಂದ್ರೀಯ ಮತ್ತು ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ಇನ್ಸ್ಪೆಕ್ಟರ್ ಹಾಗು ಹೆಚ್ಚು ಶ್ರೇಣಿಯ ಹುದ್ದೆಯೊಂದಿಗೆ ನಿವೃತ್ತರಾಗಿರಬೇಕು. ಕ್ರಿಮಿನಲ್ ಕೇಸ್ಗಳ ವಿಚಾರಣೆ ಮತ್ತು ತನಿಖೆಯಲ್ಲಿ 10 ವರ್ಷ ಅನುಭವ ಇರಬೇಕು.
ಶೈಕ್ಷಣಿಕ ಅರ್ಹತೆ: ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಆಂಗ್ಲಭಾಷೆಯಲ್ಲಿ ವ್ಯವಹಾರ ನಡೆಸುವಷ್ಟು ಪರಿಣತಿ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಸಿಬಿಐನ ವೆಬ್ಸೈಟ್ನಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಕೆಯ ವೇಳೆ ಯಾವ್ಯಾವ ದಾಖಲೆಗಳನ್ನು ನೀಡಬೇಕೆಂಬುದನ್ನು ಅರ್ಜಿಯಲ್ಲಿಯೇ ನೀಡಲಾಗಿರುತ್ತದೆ. ಅರ್ಜಿ ಭರ್ಜಿ ಮಾಡಿ ಅಗತ್ಯ ದಾಖಲೆಗಳ ಸಮೇತ ಮೇ 31ರೊಳಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು:
ಅರ್ಜಿ ತಿರಸ್ಕಾರ ಹೇಗೆ?
ಸರಿಯಾಗಿ ಭರ್ತಿಯಾಗದ ಅರ್ಜಿಗಳನ್ನು ಯಾವುದೇ ಕಾರಣ ನೀಡದೆಯೇ ತಿರಸ್ಕರಿಸಲಾಗುತ್ತದೆ. ಹಾಗೆಯೇ, ಮೇ 31ರ ನಂತರ ಸಲ್ಲಿಕೆಯಾದ ಅರ್ಜಿಗಳನ್ನೂ ತಿರಸ್ಕರಿಸಲಾಗುತ್ತದೆ ಎಂದು ಹೇಳಲಾಗಿದೆ.
(ಒನ್ಇಂಡಿಯಾ ಸುದ್ದಿ)