ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐನಲ್ಲಿ ಇನ್ ಸ್ಪೆಕ್ಟರ್ ಹುದ್ದೆಗೆ ಅರ್ಜಿ, ತಿಂಗಳಿಗೆ ರು. 40,000 ಸಂಬಳ

|
Google Oneindia Kannada News

ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಇನ್ ಸ್ಪೆಕ್ಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ತನಿಖಾ ಸಂಸ್ಥೆಯ ವಿವಿಧ ಪ್ರಾದೇಶಿಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಚಂಡೀಗಢ, ಕೋಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ಭೋಪಾಲ್, ಪಾಟ್ನಾ ಹಾಗೂ ಅಸ್ಸಾಂನ ಶಾಖೆಯಲ್ಲಿ ಹುದ್ದೆಗಳಿವೆ.

ಒಟ್ಟು 28 ಹುದ್ದೆಗಳು ಖಾಲಿಯಿದ್ದು, ಆಯ್ಕೆಗೆ ಸಂಬಂಧಿಸಿದಂತೆ ಇರುವ ಅರ್ಹತಾ ಮಾನದಂಡಗಳು ಹೀಗಿವೆ:

ಎಂಎಂಟಿಸಿಯಲ್ಲಿ 26 ಹುದ್ದೆಗಳಿವೆ, ಅರ್ಜಿ ಹಾಕಿಎಂಎಂಟಿಸಿಯಲ್ಲಿ 26 ಹುದ್ದೆಗಳಿವೆ, ಅರ್ಜಿ ಹಾಕಿ

* ಆಸಕ್ತ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.

Job openings for CBI inspector, monthly salary 40,000

* ಕೇಂದ್ರ/ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹಾಗೆ ಅರ್ಜಿ ಸಲ್ಲಿಸುವವರಿಗೆ ಕ್ರಿಮಿನಲ್ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯಲ್ಲಿ ಕನಿಷ್ಠ ಹತ್ತು ವರ್ಷಗಳ ಅನುಭವ ಇರಬೇಕು.

ಸಿಬಿಐನ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆ ನಂತರ ಅರ್ಜಿಗಳನ್ನು ತುಂಬಿ, ರಿಜಿಸ್ಟರ್ಡ್ ಅಥವಾ ಸ್ಪೀಡ್ ಪೋಸ್ಟ್ ನಲ್ಲಿ ದಾಖಲಾತಿಗಳ ಜತೆಗೆ ಮೂಲ ಅಧಿಸೂಚನೆಯಲ್ಲಿ ಇರುವ ವಿಳಾಸಕ್ಕೆ ಕೊನೆ ದಿನಾಂಕಕ್ಕೆ ಮುಂಚಿತವಾಗಿ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 12 ಕೊನೆ ದಿನ. ವೇತನ ತಿಂಗಳಿಗೆ ರು. 40,000.

English summary
Central Bureau of Investigation invites application for Inspector post in various regional office of the country. Here is the details of Job notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X