• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡ, ಕಲಬುರಗಿಯಲ್ಲಿ ಉದ್ಯೋಗ ಮೇಳ, ವಿವರಗಳು

|
Google Oneindia Kannada News

ಕಲಬುರಗಿ, ಆಗಸ್ಟ್ 05; ಧಾರವಾಡ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಬೆಂಗಳೂರಿನ ಆದಿತ್ಯಾ ಬಿರ್ಲಾ ಫ್ಯಾಷನ್ ಆಂಡ್ ರಿಟೇಲ್ ಲಿಮಿಟೆಡ್ ಮದುರಾ ಕ್ಲಾಥಿಂಗ್ ಯೂನಿಟ್ ಇವುಗಳ ಸಹಯೋಗದೊಂದಿಗೆ ಟೈಲರ್ ಮತ್ತು ಹೊಲಿಗೆ ಯಂತ್ರ ಆಪರೇಟರ್ ಹುದ್ದೆಗಾಗಿ ಆಗಸ್ಟ್ 7ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ನೇಮಕಾತಿ; 250 ಹುದ್ದೆಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ನೇಮಕಾತಿ; 250 ಹುದ್ದೆಗಳು

ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ಸಂಸ್ಥೆ (ಪುರುಷ), ಕೇಂದ್ರ ಬಸ್‍ನಿಲ್ದಾಣ ರಸ್ತೆ, ಬಸ್ ಡಿಪೋ ನಂ 1 ಎದುರು ಕಲಬುರಗಿ ವಿಳಾಸದಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಜಲ ಜೀವನ ಮಿಷನ್; ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ಭರ್ತಿ ಜಲ ಜೀವನ ಮಿಷನ್; ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ಭರ್ತಿ

ಟೈಲರ್ ಮತ್ತು ಹೊಲಿಗೆ ಯಂತ್ರ ಆಪರೇಟರ್ ಹುದ್ದೆಗೆ 5ನೇ ತರಗತಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ವಯೋಮಿತಿ 18 ವರ್ಷ ಮೇಲ್ಟಟ್ಟವರಾಗಿರಬೇಕು. ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು.

ಮಂಡ್ಯ ಜಿಲ್ಲೆಯಲ್ಲಿ ಎರಡು ಮಿನಿ ಉದ್ಯೋಗ ಮೇಳ ಮಂಡ್ಯ ಜಿಲ್ಲೆಯಲ್ಲಿ ಎರಡು ಮಿನಿ ಉದ್ಯೋಗ ಮೇಳ

ಅರ್ಹ ಮಹಿಳಾ ಅಭ್ಯರ್ಥಿಗಳು https://tinyurl.com/Tailoring-Jobs-2021 ಲಿಂಕ್‍ಗೆ ಸಂಪರ್ಕಿಸಿ ಆನ್‍ಲೈನ್ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ಬೆಂಗಳೂರಿನ ಆದಿತ್ಯಾ ಬಿರ್ಲಾ ಫ್ಯಾಷನ್ ಆಂಡ್ ರಿಟೇಲ್ ಲಿಮಿಟೆಡ್, ಮದುರಾ ಕ್ಲಾತಿಂಗ್ ಯೂನಿಟ್‍ಗಳಲ್ಲಿ ಕಾರ್ಯನಿರ್ವಹಿಸಬೇಕು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‍ನ ಜಿಲ್ಲಾ ಸಂಯೋಜಕರನ್ನು ಭೇಟಿ ಮಾಡಬಹುದು ಅಥವ 8317384664 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಧಾರವಾಡದಲ್ಲಿ ಉದ್ಯೋಗ ಮೇಳ; ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಿನಿ ಉದ್ಯೋಗ ಮೇಳಗಳನ್ನು ಜಿಲ್ಲೆಯ ವಿವಿಧ ಕಡೆ ಆಯೋಜನೆ ಮಾಡಿದೆ.

ಆ.10 ಬೆಳಗ್ಗೆ 9 ಗಂಟೆಗೆ ಬೇಲೂರು ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಸಿಡಾಕ್ ಆವರಣದಲ್ಲಿ, ಆ. 13 ರಂದು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿ ಗೋಕುಲ ರಸ್ತೆಯ ಕೈಗಾರಿಕಾಭಿವೃದ್ಧಿ ಪ್ರದೇಶದ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಆವರಣದಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿವೆ.

ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲೊಮಾ ಮತ್ತು ಬಿಇ ಉತ್ತೀರ್ಣರಾದ ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು https://tinyurl.com/dwdjobfair ಲಿಂಕ್ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಅವಶ್ಯ ದಾಖಲೆಗಳೊಂದಿಗೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಭೇಟಿ ಮಾಡಬಹುದು. ದೂರವಾಣಿ ಸಂಖ್ಯೆ 2972388 ಮತ್ತು 9480323368.

ಮಂಡ್ಯದಲ್ಲಿಯೂ ಮಿನಿ ಉದ್ಯೋಗ ಮೇಳ; ಮಂಡ್ಯ ಜಿಲ್ಲೆಯಲ್ಲಿಯೂ ಆಗಸ್ಟ್ 14ರೊಳಗೆ 2 ಮಿನಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಉದ್ಯೋಗ ಮೇಳವನ್ನು ಸರ್ಕಾರಿ ಮಹಿಳಾ ಕಾಲೇಜು, ಮಂಡ್ಯ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ತಾಂತ್ರಿಕ ವಿದ್ಯಾಲಯ ಮತ್ತು ಕೆ. ಆರ್. ಪೇಟೆಯಲ್ಲಿಯೂ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಇಂಟರ್ನ್‌ಶಿಪ್‌ಗೆ ಆಹ್ವಾನ; ಲಸಿಕೆ ಆಡಳಿತದಲ್ಲಿ ನೆರೆಯ ಕುಟುಂಬಗಳನ್ನು ಬೆಂಬಲಿಸುವ ಮೂಲಕ ಸಮುದಾಯಕ್ಕೆ ವ್ಯಾಕ್ಸಿನ್ ರಾಯಬಾರಿಯಾಗಿ ಕೆಲಸ ನಿರ್ವಹಿಸುವುದಕ್ಕಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕೊಪ್ಪಳ ಜಿಲ್ಲಾ ಕುಷ್ಠರೋಗಗಳ ನಿರ್ಮೂಲನೆ ಅಧಿಕಾರಿಗಳ ಕಚೇರಿ ವತಿಯಿಂದ ಇಂಟರ್ನ್‌ಶಿಪ್‌ಗೆ ಅರ್ಜಿ ಕರೆಯಲಾಗಿದೆ.

ಅರ್ಜಿಸಲ್ಲಿಸುವ ಆಸಕ್ತರು ಸೇವಾ ಮನೋಭಾವನೆ ಹೊಂದಿರಬೇಕು. 12 ನೇ ತರಗತಿ ಉತ್ತೀರ್ಣರಾಗಿರುವ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದಿರುವ, ಕನ್ನಡ ಭಾಷೆ ಬಲ್ಲವರು ಹಾಗೂ ಜಿಲ್ಲೆಯ ನಿವಾಸಿಗಳು ಮಾತ್ರ ಅರ್ಜಿ ಹಾಕಬೇಕು.

ಇಂಟರ್ನ್‌ಶಿಪ್ ಅವಧಿ 6 ವಾರಗಳ ಕಾಲ ದಿನಕ್ಕೆ 2 ರಿಂದ 3ಗಂಟೆಗಳವರೆಗೆ ನಡೆಯಲಿದೆ. ಇಲ್ಲಿ ತರಬೇತಿ ಪಡೆದವರು ಸರ್ಕಾರಿ ಅಧಿಕಾರಿಗಳ ನಾಯಕತ್ವದಲ್ಲಿ ಕೆಲಸ ಮಾಡಲು ವೃತ್ತಿಪರ ಮಾನ್ಯತೆ, ಅಭಿವೃದ್ಧಿ ಕ್ಷೇತ್ರದ ತಜ್ಞರಿಂದ ಕಲಿಯುವ ಅವಕಾಶ ಹಾಗೂ ಜಿಲ್ಲಾಡಳಿತದಿಂದ ಪ್ರಮಾಣಪತ್ರ ಸಹ ಪಡೆಯಲಿದ್ದಾರೆ.

English summary
Job fair organized in Kalaburagi and Dharwad district. Candidates should register name online for job fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X