ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ ಉದ್ಯೋಗ ಮೇಳ 224 ಜನರಿಗೆ ಸಿಕ್ಕಿತು ಉದ್ಯೋಗ

|
Google Oneindia Kannada News

ಕಲಬುರಗಿ, ಫೆಬ್ರವರಿ 25: ಕಲಬುರಗಿಯಲ್ಲಿ ಬುಧವಾರ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿತ್ತು. 12 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, 244 ಜನರು ಉದ್ಯೋಗ ಪಡೆದುಕೊಂಡರು.

ಉದ್ಯೋಗ ಮೇಳ ಉದ್ಘಾಟಿಸಿದ ಕೈಗಾರಿಕಾ ಮತ್ತು ತರಬೇತಿಯ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, "ಇಂದಿನ ದಿನಮಾನದಲ್ಲಿ ಡಾಕ್ಟರೇಟ್ ಪದವಿ ಪಡೆದರೂ ಕೆಲಸ ಸಿಗುತ್ತಿಲ್ಲ, ಇಂತಹ ಸಮಯದಲ್ಲಿ ಯುವಪೀಳಿಗೆ ಟಿವಿ ಮತ್ತು ಮೊಬೈಲ್‍ಗಳಿಗೆ ಅಂಟಿಕೊಳ್ಳದೆ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು" ಎಂದರು.

ಧಾರವಾಡ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಧಾರವಾಡ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

"ವಿದ್ಯಾರ್ಥಿಗಳು ಓದಿಕೊಂಡು ತಮ್ಮ ವೃತ್ತಿ ಜೀವನವನ್ನು ಚೆನ್ನಾಗಿ ರೂಪಿಸಿ ತಮ್ಮದೇ ಆದ ಸೇವೆ ಸಮಾಜಕ್ಕೆ ನೀಡಿದಲ್ಲಿ ಅದು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಈಗಿನ ವಿದ್ಯಾರ್ಥಿಗಳು ಮೊಬೈಲ್, ಟಿವಿ ಮುಂತಾದ ಮಾಧ್ಯಮಗಳಿಗೆ ದಾಸರಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕು" ಎಂದು ಕರೆ ನೀಡಿದರು.

ಎಚ್‌ಎಎಲ್ ಅಪ್ರೆಂಟಿಸ್ ತರಬೇತಿ; ಮಾರ್ಚ್ 6ರೊಳಗೆ ಅರ್ಜಿ ಹಾಕಿ ಎಚ್‌ಎಎಲ್ ಅಪ್ರೆಂಟಿಸ್ ತರಬೇತಿ; ಮಾರ್ಚ್ 6ರೊಳಗೆ ಅರ್ಜಿ ಹಾಕಿ

Job Fair In Kalaburagi 224 Candidates Get Jobs

"60, 80ರ ದಶಕದಲ್ಲಿ ಉದ್ಯೋಗ ವಿನಿಮಯ ಕಚೇರಿಯವರು ಸರಕಾರಿ ನೌಕರಿ ನೀಡುತ್ತಿದ್ದರು. ಪ್ರಸ್ತುತ ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು" ಎಂದು ಹೇಳಿದರು.

ಬೆಂಗಳೂರಲ್ಲಿ ಕೆಲಸ ಖಾಲಿ ಇದೆ; ಮಾರ್ಚ್ 24ರೊಳಗೆ ಅರ್ಜಿ ಹಾಕಿ ಬೆಂಗಳೂರಲ್ಲಿ ಕೆಲಸ ಖಾಲಿ ಇದೆ; ಮಾರ್ಚ್ 24ರೊಳಗೆ ಅರ್ಜಿ ಹಾಕಿ

244 ಜನರಿಗೆ ಉದ್ಯೋಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ 12 ಕಂಪನಿಗಳು ಭಾಗವಹಿಸಿದ್ದವು. 244 ಜನರು ಉದ್ಯೋಗ ಪಡೆದುಕೊಂಡರು. ಇವರಲ್ಲಿ 196 ಯುವಕರು, 48 ಮಹಿಳೆಯರು ಸೇರಿದ್ದಾರೆ.

84 ವಿದ್ಯಾರ್ಥಿಗಳು ಅಪ್ರೆಂಟಿಸ್ ತರಬೇತಿ ಪಡೆಯಲು ಆಯ್ಕೆಯಾದರು. 552 ಪರುಷ ಅಭ್ಯರ್ಥಿ ಮತ್ತು 273 ಮಹಿಳಾ ಅಭ್ಯರ್ಥಿ ಸೇರಿದಂತೆ ಒಟ್ಟಾರೆ 825 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು.

English summary
Job fair held in Kalaburagi district employment exchange office on February 24, 2021. 196 men and 48 women candidates get job in job fair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X