ದಾವಣಗೆರೆ; ಮೇ 20ರಂದು ವಿಕಲಚೇತನರ ಉದ್ಯೋಗ ಮೇಳ
ದಾವಣಗೆರೆ, ಮೇ 18: ವಿಕಲಚೇತನರಿಗೆ ಉದ್ಯೋಗ ಪಡೆಯಲು ಸುವರ್ಣಾವಕಾಶ ದೊರೆತಿದ್ದು, ಸಮರ್ಥನಂ ಅಂಗವಿಕಲರ ಸಂಸ್ಥೆಯವರು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಉದ್ಯೋಗ ಮೇಳ ಆಯೋಜನೆ ಮಾಡಿದ್ದಾರೆ.
ದಾವಣಗೆರೆಯ ಶಿವಾಲಿ ಟಾಕೀಸ್ ಹತ್ತಿರದ ಬಿ. ಬ್ಲಾಕ್ನ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಮೇ 20ರಂದು ಬೆಳಗ್ಗೆ 9ಕ್ಕೆ ವಿಕಲಚೇತನರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಲು ಮನವಿ ಮಾಡಲಾಗಿದೆ.
ಪ್ರಸ್ತುತ ಎರಡು ವರ್ಷಗಳಿಂದ ಕೋವಿಡ್ -19ಗೆ ಸಿಲುಕಿ ಉದ್ಯೋಗ ಕಳೆದುಕೊಂಡಿರುವ ಸಮಸ್ಯೆ ಎದುರಿಸುತ್ತಿರುವ ವಿಕಲಚೇತನ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಸುವರ್ಣಾವಕಾಶ ಸಿಕ್ಕಿದೆ. ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ವೀರಭದ್ರ ಪಾಟೀಲ್ 9480812121, (placements@samarthanam.org, ಸುಭಾಷ್ 9449864693 (canterhead Bangalore@samarthanam.org)ಗೆ ಕರೆ ಮಾಡಬಹುದಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಜೆ. ತಿಳಿಸಿದ್ದಾರೆ.