ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು

|
Google Oneindia Kannada News

ಬೆಂಗಳೂರು, ಮೇ 13 : ಕೊರೊನಾ ಲಾಕ್ ಡೌನ್‌ನಿಂದಾಗಿ ಎಲ್ಲಾ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಉದ್ಯಮಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ. ವೇತನ ಕಡಿತ ಮಾಡುತ್ತಿವೆ. ಈ ಬಗ್ಗೆ ಕಾರ್ಮಿಕ ಇಲಾಖೆಗೆ 2 ಸಾವಿರಕ್ಕೂ ಅಧಿಕ ದೂರು ಬಂದಿವೆ.

ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಆಲಿಸಲು ಕಾರ್ಮಿಕ ಇಲಾಖೆ ಸಹಾಯವಾಣಿಯನ್ನು ಆರಂಭಿಸಿದೆ. 155214 ನಂಬರ್‌ಗೆ ಕರೆ ಮಾಡಿ ಕಾರ್ಮಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. 20 ದಿನದಲ್ಲಿ 2 ಸಾವಿರ ಕರೆಗಳು ಸಹಾಯವಾಣಿಗೆ ಬಂದಿವೆ.

ವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿವೇತನ ಕಡಿತ, ಕೆಲಸದಿಂದ ಕಿತ್ತು ಹಾಕಿದರೆ ಕಾರ್ಮಿಕರು ದೂರು ಕೊಡಿ

ಕೆಲಸದಿಂದ ಕಿತ್ತು ಹಾಕುವುದು ಮತ್ತು ವೇತನ ಕಡಿತಕ್ಕೆ ಸಂಬಂಧಿಸಿದಂತೆಯೇ ಬಹುತೇಕ ದೂರುಗಳು ದಾಖಲವಾಗಿವೆ. ಅಚ್ಚರಿಯ ಸಂಗತಿ ಎಂದರೆ ಬೆಂಗಳೂರು ನಗರದಿಂದಲೇ ಅತ್ಯಧಿಕ ದೂರುಗಳು ಬಂದಿವೆ.

Job Cut 2000 Complaint For Labour Dept Helpline

ಸಹಾಯವಾಣಿಗೆ ಬಂದ ದೂರುಗಳನ್ನು ವ್ಯಾಪ್ತಿಗೆ ಒಳಪಡುವ ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್‌ಗೆ ನೀಡಲಾಗುತ್ತದೆ. ಅವರು ದೂರು ನೀಡಿದ ಉದ್ಯೋಗಿಗಳನ್ನು ವಿಚಾರಣೆ ನಡೆಸಿ, ಹೆಚ್ಚಿನ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ದೂರು ಬಂದ ಕಂಪನಿಗಳ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಮಣಿವಣ್ಣನ್ ವರ್ಗಾವಣೆಗೆ ಇದೇ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗೆ ಒಡಿಶಾದಲ್ಲಿ ಸಿಗುತ್ತಿದೆ ವಿಶೇಷ ತರಬೇತಿ!ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗೆ ಒಡಿಶಾದಲ್ಲಿ ಸಿಗುತ್ತಿದೆ ವಿಶೇಷ ತರಬೇತಿ!

ನಾಲ್ಕು ವರ್ಷಗಳಿಂದ ಮಹಿಳೆಯೊಬ್ಬರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 30 ಸಾವಿರ ರೂ. ವೇತನವನ್ನು ಅವರು ಪಡೆಯುತ್ತಿದ್ದಾರೆ. ಆದರೆ, ಈಗ ಕೆಲಸದಿಂದ ಯಾವುದೇ ಕಾರಣ ನೀಡದೆ ತೆಗೆದುಹಾಕಲಾಗಿದೆ. ಈ ಕುರಿತು ಮಹಿಳೆ ಕಾನೂನು ಹೋರಾಟವನ್ನು ಆರಂಭಿಸಿದ್ದಾರೆ.

ಕಾರ್ಮಿಕರನ್ನು ವಿಚಾರಣೆ ನಡೆಸುವ ಇಲಾಖೆಯ ಕಾರ್ಯ ವೈಖರಿಗೆ ಕರ್ನಾಟಕದ ಸಣ್ಣ ಉದ್ಯಮಗಳ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ದೂರನ್ನು ಇಟ್ಟುಕೊಂಡು ನೌಕರರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಲಸದಿಂದ ಕಿತ್ತು ಹಾಕಿದರೆ, ವೇತನ ಕಡಿತ ಮಾಡಿದರೆ ಕಾರ್ಮಿಕರು ವೆಬ್‌ ಸೈಟ್ ಮೂಲಕವೂ ದೂರು ಕೊಡಬಹುದು. ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

English summary
ln 20 days labour department helpline register 2000 complaint about terminating from jobs and salary cut during the time of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X