ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಸೇವಾ ಸಂಸ್ಥೆ ಮೌರಿ ಟೆಕ್ ಮುಂದಿನ 3 ವರ್ಷಗಳಲ್ಲಿ 10,000 ನೇಮಿಸಿಕೊಳ್ಳಲಿದೆ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 23: ಹೈದರಾಬಾದ್ ಮೂಲದ ಐಟಿ ಸಂಸ್ಥೆ ಮೌರಿ ಟೆಕ್ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 10, 000 ಮಂದಿ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಈ ಪೈಕಿ 2,000 ಹೊಸ ಹುದ್ದೆಗಳ ನೇಮಕಾತಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ನಡೆಯಲಿದೆ ಎಂದು ಸಂಸ್ಥೆ ಹೇಳಿದೆ. ಸದ್ಯಕ್ಕೆ ಸಂಸ್ಥೆಯಲ್ಲಿ 3,500 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ 3,000 ಸಿಬ್ಬಂದಿ ಇದ್ದರೆ ಮಿಕ್ಕವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

"ಕೊರೊನಾ ಸಾಂಕ್ರಾಮಿಕದ ಕಷ್ಟದ ಕಾಲದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು, ಆದರೆೀ ಪರಿಸ್ಥಿತಿಯನ್ನು ಅವಕಾಶವನ್ನಾಗಿ ಬಳಸಿಕೊಂಡು, ಸಂಸ್ಥೆಯನ್ನು ಪುನರ್ ನಿರ್ಮಾಣ ಹಾಗೂ ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ, ನಮ್ಮ ಪ್ರಗತಿಯಲ್ಲಿ ಕೈ ಜೋಡಿಸಲು ನಿರಂತರವಾಗಿ ನೇಮಕಾತಿ ಮುಂದುವರೆಸಲಿದ್ದೇವೆ'' ಎಂದು ಮೌರಿ ಟೆಕ್ ಗ್ಲೋಬಲ್ ಸಿಇಒ ಅನಿಲ್ ಯೆರಾರೆಡ್ಡಿ ಹೇಳಿದ್ದಾರೆ.

IT services firm MOURI Tech to hire 10,000 in the next 3 years

''ಭಾರತದ 2 ಹಾಗೂ 3ನೇ ಸ್ತರದ ಪಟ್ಟಣಗಳಲ್ಲಿರುವ ಐಟಿ ತಂತ್ರಜ್ಞರಿಗೆ ಅವರ ಸ್ಥಳದಲ್ಲೇ ಉದ್ಯೋಗ ಕಲ್ಪಿಸಲಾಗುವುದು, ಈ ಮೂಲಕ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸಲಾಗುವುದು,'' ಎಂದಿದ್ದಾರೆ.

ಹೈದರಾಬಾದ್, ವೈಜಾಗ್, ಬೆಂಗಳೂರು, ಕೋಲ್ಹಾಪುರದಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಮೌರಿ ಟೆಕ್ ಇನ್ನು ಹೆಚ್ಚು ನಗರಗಳಲ್ಲಿ ತನ್ನ ಕಚೇರಿಗಳನ್ನು ತೆರೆಯಲು ಮುಂದಾಗಿದೆ.

''ಈ ನೇಮಕಾತಿ ಪ್ರಕ್ರಿಯೆಯಿಂದ ಜಾಗತಿಕ ಮತ್ತು ಭಾರತೀಯ ಗ್ರಾಹಕರಿಗೆ ಡಿಜಿಟಲ್ ರೂಪಾಂತರವನ್ನು ವೇಗದ ಕಾರ್ಯಗತಗೊಳಿಸುವಿಕೆಯೊಂದಿಗೆ ವೇಗಗೊಳಿಸಲು ಸಹಾಯ ಮಾಡುತ್ತದೆ. ಕಳೆದ ಆರು ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಾಗಿದೆ. ಹೊಸ ನೇಮಕಾತಿಯು ಫ್ರೆಶರ್‌ಗಳ ಮತ್ತು ಮಧ್ಯಮ ಮಟ್ಟದ ಹಿರಿಯ ವೃತ್ತಿಪರರ ಮಿಶ್ರಣವಾಗಿರುತ್ತದೆ "ಎಂದು ಸಿಇಒ ಹೇಳಿದರು.

ಮಲ್ಟಿ ಡೊಮೆನ್ ಐಟಿ ಸಲ್ಯೂಷನ್ಸ್ ಸಂಸ್ಥೆ ಎನಿಸಿಕೊಂಡಿರುವ ಮೌರಿ ಟೆಕ್ ಮಧ್ಯಮದಿಂದ ಹಿರಿಯ ಸ್ತರದ ಅಧಿಕಾರಿಗಳನ್ನು ನೇಮಿಸಲು ಮುಂದಾಗಿದ್ದು, ಫ್ರೆಶರ್ಸ್ ಗಳಿಗೆ ಉತ್ತಮ ಅವಕಾಶ ಸಿಗಲಿದೆ. ಅದರಲ್ಲೂ ಪದವೀಧರರಿಗೆ ಹೆಚ್ಚಿನ ಅವಕಾಶವಿರಲಿದೆ. ಎಐ, ಆರ್ ಪಿ ಎ ಹಾಗೂ ಡಿಜಿಟಲ್ ಟಾನ್ಸ್ ಫಾರ್ಮೇಷನ್ ಮುಂತಾದ ವಿಭಾಗದಲ್ಲಿ ಗುರುತಿಸಿಕೊಂಡಿರುವ ಮೌರಿ ಟೆಕ್, ಡಾಟಾ ಸೈನ್ಸ್, ಮಷಿಂಗ್ ಲರ್ನಿಂಗ್, ಸೈಬರ್ ಸೆಕ್ಯುರಿಟಿ, ಆಟೋಮೇಷನ್, ಕ್ಲೌಡ್ ಸಲ್ಯೂಷನ್ ಮುಂತಾದ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಹೊಂದಿದವರಿಗೆ ಅವಕಾಶಗಳು ಸಿಗಲಿದೆ.

ಮೌರಿ ಟೆಕ್ - ವಿಶ್ವಾಸಾರ್ಹ ಜಾಗತಿಕ ಉದ್ಯಮ ಪರಿಹಾರ ಒದಗಿಸು ಸಂಸ್ಥೆ - ಐಟಿ ಅಭಿವೃದ್ಧಿ ಮತ್ತು ಸೇವೆಗಳ ಸಾಮರ್ಥ್ಯಗಳಿಗಾಗಿ CMMI ಇನ್ಸ್ಟಿಟ್ಯೂಟ್‌ನ ಸಾಮರ್ಥ್ಯ ಮೆಚ್ಯುರಿಟಿ ಮಾಡೆಲ್ ಇಂಟಿಗ್ರೇಷನ್ (CMMI) 5 ನೇ ಹಂತಕ್ಕೇರಿದ್ದು ಇದನ್ನು ಮೌಲ್ಯಮಾಪನ ಮಾಡಲಾಗಿದೆ. ಇದಲ್ಲದೆ ಈ ಸಂಸ್ಥೆ AICPA SOC1 ಮತ್ತು SOC2, PCI DSS, ISO 270001: 2013, ISO 9001: 2015, ಮತ್ತು HIPPA ಯೊಂದಿಗೆ ಪ್ರಮಾಣೀಕರಿಸಲಾಗಿದೆ.

English summary
Hyderabad-based IT services provider MOURI Tech will hire 10,000 employees over the next three years across domains and locations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X