ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ-ಬಿಪಿಎಂ ಉದ್ಯಮದಿಂದ ಈ ಆರ್ಥಿಕ ವರ್ಷದಲ್ಲಿ 3 ಲಕ್ಷ ಉದ್ಯೋಗಿಗಳ ನೇಮಕ

|
Google Oneindia Kannada News

ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ (IT-BPM) ಉದ್ಯಮವು ಮಾರ್ಚ್ 2023 ರ ವೇಳೆಗೆ ಉದಯೋನ್ಮುಖ ತಂತ್ರಜ್ಞಾನಗಳ ತ್ವರಿತ ಅಳವಡಿಕೆಯ ಮಧ್ಯೆ ಸುಮಾರು 3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.

ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಈ ಆರ್ಥಿಕ ವರ್ಷದಲ್ಲಿಐಟಿ-ಬಿಪಿಎಮ್‌ ಉದ್ಯೋಗಿಗಳ ಸಂಖ್ಯೆಯು ಶೇಕಡ 7 ರಷ್ಟು ಹೆಚ್ಚಳಗಿದೆ. ಒಟ್ಟಾರೆ 5.1 ಮಿಲಿಯನ್‌ನಿಂದ 5.45 ಮಿಲಿಯನ್‌ಗೆ ಹೆಚ್ಚಳವಾಗಿದೆ ಎಂದು ಟೀಮ್‌ಲೀಸ್ ಡಿಜಿಟಲ್, ಟೀಮ್‌ಲೀಸ್ ಸೇವೆಗಳ ವಿಶೇಷ ಸಿಬ್ಬಂದಿ ವಿಭಾಗ ವರದಿಯಲ್ಲಿ ತಿಳಿಸಿದೆ.

ದಾವಣಗೆರೆ; ನಿರುದ್ಯೋಗಿಗಳಿಗೆ ಉಚಿತ ತರಬೇತಿದಾವಣಗೆರೆ; ನಿರುದ್ಯೋಗಿಗಳಿಗೆ ಉಚಿತ ತರಬೇತಿ

ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಡಿಜಿಟಲ್ ಕೌಶಲ್ಯಗಳ ಬೇಡಿಕೆಯು ಶೇಕಡಾ 8.4 ರಷ್ಟು ಬೆಳೆಯುತ್ತದೆ ಎಂದು ಹೇಳಿದೆ. 100ಕ್ಕೂ ಹೆಚ್ಚಿನ ಉದ್ಯೋಗದಾತರನ್ನು ಸಂದರ್ಶನ ಮಾಡಿದೆ. 500 ನಗರಗಳಲ್ಲಿನ ಎಂಜಿನಿಯರಿಂಗ್‌ ಕಾಲೇಜುಗಳ ಒಳನೋಟಗಳನ್ನು ಸಂಗ್ರಹ ಮಾಡಿದೆ.

ಇದಲ್ಲದೆ, ಐಟಿ-ಬಿಪಿಎಂ ಉದ್ಯಮ ವಲಯದಲ್ಲಿ ಹೆಚ್ಚಿದ ಹೂಡಿಕೆಗಳು ಮತ್ತು ಉದ್ಯಮಗಳಿಂದ ತಂತ್ರಜ್ಞಾನದ ತ್ವರಿತ ಅಳವಡಿಕೆಯಿಂದ ಗುತ್ತಿಗೆ ಸಿಬ್ಬಂದಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ ತೋರಿಸಿದೆ.

 ಅತಿ ಹೆಚ್ಚಿನ ಉದ್ಯೋಗ ಸೃಷ್ಟಿ

ಅತಿ ಹೆಚ್ಚಿನ ಉದ್ಯೋಗ ಸೃಷ್ಟಿ

ಒಪ್ಪಂದದ ಸಿಬ್ಬಂದಿ ಸಂಖ್ಯೆಯು ಶೇಕಡ 21 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ, ಪ್ರಸ್ತುತ ಐಟಿ ಸೇವೆಗಳ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), ಮತ್ತು ಉತ್ಪನ್ನ ಅಭಿವೃದ್ಧಿ ಕಂಪನಿಗಳು ಅಗ್ರ ಗುತ್ತಿಗೆ ಸಿಬ್ಬಂದಿ ಗ್ರಾಹಕರಾಗಿದ್ದು, ಉದ್ಯಮದ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡ 70ಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂದು ವರದಿ ಹೇಳಿದೆ.

"ಐಟಿ-ಬಿಪಿಎಂ ಉದ್ಯಮವು ಭಾರತದಲ್ಲಿ ಅತ್ಯುನ್ನತ ಉದ್ಯಮವಾಗಿ ಮುಂದುವರೆದಿದೆ, ಖಾಸಗಿ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಸುಮಾರು 39 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಮತ್ತು ಒಟ್ಟು ಜಿಡಿಪಿಯಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಇಲ್ಲಿ ನಮ್ಮ ಉದ್ಯಮವು ಜಾಗತಿಕ ಹೊರಗುತ್ತಿಗೆ ಮಾರುಕಟ್ಟೆಯ ಶೇಕಡಾ 55 ರಷ್ಟಿದೆ." ಎಂದು ಟೀಮ್ ಲೀಸ್ ಡಿಜಿಟಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಸಿ ಹೇಳಿದ್ದಾರೆ.

 ಮುಂದಿನ ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ

ಮುಂದಿನ ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ

ಉದ್ಯೋಗಾವಕಾಶಗಳು ಹೆಚ್ಚಾದಂತೆ ಅಭ್ಯರ್ಥಿಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಮತ್ತು ಕಂಪನಿಗಳು ವಿಶೇಷ ಡಿಜಿಟಲ್ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಮುಂದಾಗಿವೆ. ಇತ್ತೀಚೆಗೆ 1.5 ಲಕ್ಷ ವೃತ್ತಿಪರರು ಡಿಜಿಟಲ್-ಸಂಬಂಧಿತ ತಂತ್ರಜ್ಞಾನಗಳಲ್ಲಿ ತಮ್ಮ ಕೌಶಲ್ಯವನ್ನು ಪಡೆದುಕೊಂಡಿದ್ದಾರೆ ಎಂದು ಸುನಿಲ್ ಹೇಳಿದ್ದಾರೆ.

"ಒಟ್ಟಾರೆಯಾಗಿ ಮುಂದಿನ ಕೆಲವು ವರ್ಷಗಳಲ್ಲಿ ಭಾರತದ ತಂತ್ರಜ್ಞಾನ ಉದ್ಯೋಗವು 50 ಲಕ್ಷದಿಂದ 1 ಕೋಟಿಗೆ ಬೆಳೆಯುತ್ತದೆ ಎಂದು ನಾವು ಅಂದಾಜು ಮಾಡುತ್ತೇವೆ" ಎಂದು ಅವರು ಹೇಳಿದರು.

 ಸಣ್ಣ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾದ ಉದ್ಯಮ

ಸಣ್ಣ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾದ ಉದ್ಯಮ

ಮನೆಯಿಂದ ಕೆಲಸ ಮಾಡುವ ವಿಧಾನಗಳು ಹೆಚ್ಚುತ್ತಿರುವಾಗ ಮತ್ತು ಡಿಜಿಟಲ್ ಕೌಶಲ್ಯಗಳಿಗಾಗಿ ಸಣ್ಣ ನಗರಗಳು ಜನಪ್ರಿಯವಾಗುತ್ತಿರುವುದರಿಂದ, ಕಂಪನಿಗಳು ಸಣ್ಣ ನಗರಗಳಲ್ಲೇ ಉದ್ಯೋಗವನ್ನು ಸೃಷ್ಟಿಸಲು ಮುಂದಾಗಿವೆ. ಅವರಿದ್ದಲ್ಲಿಂದಲೇ ಕೆಲಸ ನಿರ್ವಹಿಸಲು ಅವಕಾಶ ಒದಗಿಸಲ ನಿರ್ಧರಿಸಿವೆ ಎಂದರು.

ತಿರುವನಂತಪುರಂ, ಕೊಯಮತ್ತೂರು, ಕೊಚ್ಚಿನ್, ಚಂಡೀಗಢ ಮತ್ತು ಅಹಮದಾಬಾದ್‌ ನಗರಗಲ್ಲಿ ಉತ್ಪನ್ನ ಕಂಪನಿಗಳು, ಜಿಐಸಿಗಳು ಮತ್ತು ಸ್ಟಾರ್ಟ್‌ಅಪ್‌ಗಳ ಬಲವಾದ ಉಪಸ್ಥಿತಿಯಿಂದಾಗಿ ಡಿಜಿಟಲ್ ಕೌಶಲ್ಯಗಳನ್ನು ನಿರ್ಮಿಸುತ್ತಿವೆ. ಎಂದು ಹೇಳಿದರು.

1 ನೇ ಹಂತದ ನಗರಗಳಲ್ಲಿ ಕನಿಷ್ಠ 20 ಪ್ರತಿಶತ ಡಿಜಿಟಲ್ ಪ್ರತಿಭಾವಂತರು ಕೆಲಸದಿಂದ ಮನೆಯಿಂದ ಕೆಲಸ ಮಾಡುವುದರಿಂದ ಪ್ರಸ್ತುತ ಸಣ್ಣ ನಗರಗಳಲ್ಲಿ ಇದ್ದಾರೆ.

 ಲಿಂಗ ಸಮಾನತೆ ಸುಧಾರಣೆಗೆ ಕ್ರಮ

ಲಿಂಗ ಸಮಾನತೆ ಸುಧಾರಣೆಗೆ ಕ್ರಮ

ಆಟ್ರಿಷನ್ ದೃಷ್ಟಿಕೋನದಿಂದ, ಭಾರತದ ಐಟಿ-ಬಿಪಿಎಂ ಕ್ಷೀಣತೆಯು ಹೆಚ್ಚಿನ ಭಾಗದಲ್ಲಿ ಮುಂದುವರಿಯುತ್ತದೆ ಮತ್ತು ಈ ಉಲ್ಬಣವು ಮುಂದಿನ ತ್ರೈಮಾಸಿಕಗಳಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. 2023ರ ಆರ್ಥಿಕ ವರ್ಷದಲ್ಲಿ, ಗುತ್ತಿಗೆ ಸಿಬ್ಬಂದಿ ಕ್ಷೀಣತೆಯು ಶೇಕಡ 49 ರಿಂದ 50-55 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ.

"ಕಳೆದ 10 ವರ್ಷಗಳಲ್ಲಿ, ಹೆಚ್ಚಿನ ಐಟಿ-ಬಿಪಿಎಂ ಕಂಪನಿಗಳು ಉದ್ಯೋಗಿಗಳಲ್ಲಿ ಲಿಂಗ ಸಮಾನತೆ ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಒತ್ತು ಕೇವಲ ವೈವಿಧ್ಯತೆಯ ಮೇಲೆ ಮಾತ್ರವಲ್ಲದೆ ಒಳಗೊಳ್ಳುವಿಕೆಯೂ ಆಗಿದೆ. ವಾಸ್ತವವಾಗಿ, ಕಾರ್ಯಕ್ಷಮತೆ ಸೂಚಕಗಳು ವೈವಿಧ್ಯತೆ ಮತ್ತು ಸೇರ್ಪಡೆ ವ್ಯಾಪಾರದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ" ಎಂದು ಸುನಿಲ್ ಹೇಳಿದ್ದಾರೆ.

English summary
A Study Said that The Information Technology and Business Process Management (IT-BPM) industry is likely to create about 3 lakh jobs by March 2023 amid the rapid adoption of emerging technologies, according to a report. The demand for digital skills will grow 8.4% by the end of this finanscial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X