ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಲ್ಲಿ 21 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಜನವರಿ 03: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ, ಎಂಜಿನಿಯರ್ ಮತ್ತು ವೈದ್ಯಕೀಯ ಅಧಿಕಾರಿಗಳ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಡಿ. 28ರಂದು ಪ್ರಾರಂಭವಾಗಿದ್ದು, ಜ.17 ಕೊನೆಯ ದಿನಾಂಕವಾಗಿದೆ. ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಎಸ್‌ಎಚ್‌ಎಆರ್‌ಗೆ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಹುದ್ದೆಗಳು ಮತ್ತು ವಿದ್ಯಾರ್ಹತೆ

ವಿಜ್ಞಾನಿ/ಎಂಜಿನಿಯರ್ 'ಎಸ್‌ಸಿ' (ಕೆಮಿಕಲ್ ಎಂಜಿನಿಯರಿಂಗ್): ಪ್ರಥಮ ದರ್ಜೆಯೊಂದಿಗೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ/ಬಿಟೆಕ್ ಅಥವಾ ತತ್ಸಮಾನ ಅರ್ಹತೆ. ಎಲ್ಲ ಸೆಮೆಸ್ಟರ್‌ಗಳಲ್ಲಿ ಸರಾಸರಿ ಕನಿಷ್ಠ ಶೇ 65ರಷ್ಟು ಅಂಕಗಳು ಅಥವಾ 10 ಅಂಕ ಮಾನದಂಡದಲ್ಲಿ 6.84ರ ಶ್ರೇಣಿಯಲ್ಲಿ ಸಿಜಿಪಿಎ/ಸಿಪಿಐ. ಎಎಂಐಇ/ಐಇಟಿಇ ಗ್ರಾಡ್ ಅರ್ಹತೆಯವರಿಗೆ ಕನಿಷ್ಠ ಶೇ 65 ಅಂಕ ಅಥವಾ ಸೆಕ್ಷನ್ ಬಿ ಸಿಜಿಪಿಎದಲ್ಲಿ 6.84 ಅಂಕ.

ವಿಜ್ಞಾನಿ/ಎಂಜಿನಿಯರ್ 'ಎಸ್‌ಸಿ' (ಪವರ್ ಸಿಸ್ಟಮ್ಸ್): ಎಂಇ/ಎಂಟೆಕ್ ಅಥವಾ ಪವರ್ ಸಿಸ್ಟಮ್ಸ್ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ತತ್ಸಮಾನ ಸ್ನಾತಕೋತ್ತರ ಪದವಿ.

ವಿಜ್ಞಾನಿ/ಎಂಜಿನಿಯರ್ 'ಎಸ್‌ಸಿ' (ಇಂಡಸ್ಟ್ರಿಯಲ್ ಸೇಫ್ಟಿ): ಎಂಇ/ಎಂಟೆಕ್ ಅಥವಾ ಇಂಡಸ್ಟ್ರಿಯಲ್ ಸೇಫ್ಟಿ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ತತ್ಸಮಾನ ಸ್ನಾತಕೋತ್ತರ ಪದವಿ.

ISRO Recruitment Scientist Engineer And Medical Officer Posts In SDSC SHAR

ವಿಜ್ಞಾನಿ/ಎಂಜಿನಿಯರ್ 'ಎಸ್‌ಸಿ' (ಮೆಷಿನ್ ಡಿಸೈನ್/ಎಂಜಿನಿಯರಿಂಗ್ ಡಿಸೈನ್): ಎಂಇ/ಎಂಟೆಕ್ ಅಥವಾ ಮೆಷಿನ್ ಡಿಸೈನ್/ಎಂಜಿನಿಯರಿಂಗ್ ಡಿಸೈನ್ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ತತ್ಸಮಾನ ಸ್ನಾತಕೋತ್ತರ ಪದವಿ.

ವಿಜ್ಞಾನಿ/ಎಂಜಿನಿಯರ್ 'ಎಸ್‌ಸಿ' (ಸ್ಟ್ರಕ್ಚರಲ್ ಎಂಜಿನಿಯರಿಂಗ್): ಎಂಇ/ಎಂಟೆಕ್ ಅಥವಾ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ತತ್ಸಮಾನ ಸ್ನಾತಕೋತ್ತರ ಪದವಿ.

ವೈದ್ಯಕೀಯ ಅಧಿಕಾರಿ 'ಎಸ್‌ಸಿ' (ಪೀಡಿಯಾಟ್ರಿಕ್ಸ್): ಮಕ್ಕಳ ಆರೋಗ್ಯದಲ್ಲಿ ಎಂಬಿಬಿಎಸ್+ಡಿಪ್ಲೊಮಾ (ಎರಡು ವರ್ಷ ಅವಧಿ). ಭಾರತೀಯ ವೈದ್ಯಕೀಯ ಮಂಡಳಿಯಿಂದ ಪರಿಗಣಿತ ಮತ್ತು ನೋಂದಾಯಿತ.

ವೈದ್ಯಕೀಯ ಅಧಿಕಾರಿ 'ಎಸ್‌ಸಿ' (ಪೀಡಿಯಾಟ್ರಿಕ್ಸ್): ಮಕ್ಕಳ ಆರೋಗ್ಯದಲ್ಲಿ ಎಂಬಿಬಿಎಸ್+ಡಿಪ್ಲೊಮಾ (ಎರಡು ವರ್ಷ ಅವಧಿ). ಭಾರತೀಯ ವೈದ್ಯಕೀಯ ಮಂಡಳಿಯಿಂದ ಪರಿಗಣಿತ ಮತ್ತು ನೋಂದಾಯಿತಗೊಂಡು ಐದು ವರ್ಷ ಅನುಭವ ಹೊಂದಿರುವವರು.

ವೈದ್ಯಕೀಯ ಅಧಿಕಾರಿ 'ಎಸ್‌ಸಿ' (ನೇತ್ರಶಾಸ್ರ್ರ): ನೇತ್ರಶಾಸ್ತ್ರ ವಿಭಾಗದಲ್ಲಿ ಎಂಬಿಬಿಎಸ್+ಡಿಪ್ಲೊಮಾ (ಎರಡು ವರ್ಷ ಅವಧಿ). ಭಾರತೀಯ ವೈದ್ಯಕೀಯ ಮಂಡಳಿಯಿಂದ ಪರಿಗಣಿತ ಮತ್ತು ನೋಂದಾಯಿತ.

ವೈದ್ಯಕೀಯ ಅಧಿಕಾರಿ 'ಎಸ್‌ಸಿ' (ನೇತ್ರಶಾಸ್ರ್ರ): ನೇತ್ರಶಾಸ್ತ್ರ ವಿಭಾಗದಲ್ಲಿ ಎಂಬಿಬಿಎಸ್+ಡಿಪ್ಲೊಮಾ (ಎರಡು ವರ್ಷ ಅವಧಿ). ಭಾರತೀಯ ವೈದ್ಯಕೀಯ ಮಂಡಳಿಯಿಂದ ಪರಿಗಣಿತ ಮತ್ತು ನೋಂದಾಯಿತಗೊಂಡು ಐದು ವರ್ಷ ಅನುಭವ ಹೊಂದಿರುವವರು.

ಅರ್ಹತೆಯ ಮಾನದಂಡಕ್ಕೆ ಅನುಗುಣವಾಗಿರುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಲಿಖಿತ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ಪರೀಕ್ಷೆಯು ಚೆನ್ನೈನಲ್ಲಿ ನಡೆಯಲಿದೆ. ಬಿ.ಇ/ಬಿಟೆಕ್ ಅಥವಾ ಎಂ.ಇ/ಎಂ.ಟೆಕ್ ಶೈಕ್ಷಣಿಯ ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಆಧಾರಿತ ಪ್ರಶ್ನೆಗಳ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯಲ್ಲಿನ ಫಲಿತಾಂಶಕ್ಕೆ ಅನುಗುಣವಾಗಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲಾಗುತ್ತದೆ. ಲಿಖಿತ ಪರೀಕ್ಷೆಯು ಮೊದಲ ಹಂತದ ಪ್ರಕ್ರಿಯೆ ಮಾತ್ರವಾಗಿದ್ದು, ಅದರಲ್ಲಿನ ಅಂಕಗಳನ್ನು ಅಂತಿಮ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸುವುದಿಲ್ಲ. ಅಂತಿಮ ಹಂತದ ಆಯ್ಕೆಯು ಸಂದರ್ಶನದ ಪ್ರದರ್ಶನವನ್ನು ಮಾತ್ರ ಅವಲಂಬಿಸಿರುತ್ತದೆ.

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

English summary
ISRO has invited online applications for 21 posts of scientist/engineer and medical officers. Last date to apply of January 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X